ಮಾಗಣೆಯ ಗ್ರಾಮಸ್ಥರ ಆರೋಪ : ಕಟೀಲಿನಲ್ಲಿ ಅರ್ಚಕರ ಸರ್ವಾಧಿಕಾರ ಧೋರಣೆ.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

kateel_sabhe_yugapurusha_1

ಕಿನ್ನಿಗೋಳಿ :ಕಿನ್ನಿಗೋಳಿಯ ಯುಗಪುರುಷದಲ್ಲಿ ಮಂಗಳವಾರ ಕಟೀಲು ದೇವಳದಲ್ಲಿ ನಡೆಯುತ್ತಿರುವ ಧೋರಣೆಯನ್ನು ಖಂಡಿಸಿ ಮಾಗಣೆಯ ಗ್ರಾಮಸ್ಥರು ಸಭೆಯನ್ನು ನಡೆಸಿದರು. ರಾಷ್ಟ್ರಮಟ್ಟದಲ್ಲಿ ವಿಭಿನ್ನ ಧಾರ್ಮಿಕ ಕ್ಷೇತ್ರ ಎಂದು ಪ್ರಸಿದ್ಧಿ ಪಡೆದಿರುವ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನವು ಗ್ರಾಮಸ್ಥರ ಮಾಗಣೆಯ ದೇವಸ್ಥಾನ ಆಗಿದ್ದು, ಅದೇನು ಪ್ರವಾಸಿ ಸ್ಥಳವಲ್ಲ, ದೇವರನ್ನು ಸಿಂಗಾರ ಮಾಡಿಕೊಂಡು ಅರ್ಚಕರು ಭಕ್ತರಿಂದ ಹಣ ಲೂಟಿ ಮಾಡುತ್ತಿದ್ದಾರೆ. ರಂಗಪೂಜೆ, ಯಕ್ಷಗಾನ ಮೇಳದ ಬಗ್ಗೆ ಅಷ್ಟಮಂಗಲದ ಪ್ರಶ್ನೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು.

ಅರ್ಚಕರ ಸರ್ವಾಧಿಕಾರದ ಧೋರಣೆಯಿಂದ ಮಾಗಣೆಯ ಗ್ರಾಮಸ್ಥರಿಗೆ ಮರ್ಯಾದಿ ಸಿಗುತ್ತಿಲ್ಲ, ವರ್ಷಾವಧಿ ಸೀಯಾಳಾಭಿಷೇಕವನ್ನು ಧಿಕ್ಕರಿಸುವ ಜೊತೆಗೆ ಅರ್ಚಕರ ಕರಾಳ ಹಸ್ತವು ಶಿಕ್ಷಣ ಸಂಸ್ಥೆಯಲ್ಲೂ ಗ್ರಾಮವನ್ನು ಮೂಲೆಗುಂಪು ಮಾಡುವಲ್ಲಿ ಯಶಸ್ಸಾಗಿದೆ. ಈ ಬಗ್ಗೆ ಮೌನ ವಹಿಸಿದಲ್ಲಿ ಕಟೀಲು ದೇವಳವನ್ನೇ ಹೈಜಾಕ್ ಮಾಡುವ ಸಾಧ್ಯತೆ ಇದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ ಕಟೀಲು ಹೇಳಿದರು.

ಕಟೀಲಿನಲ್ಲಿ ಮಾಗಣೆಯ ಭಕ್ತರಿಗೆ ಸಿಯಾಳಾಭಿಷೇಕಕ್ಕೆ ಅವಕಾಶ ನಿರಾಕರಿಸಿದ್ದರ ಹಿನ್ನಲೆಯಲ್ಲಿ ಕಿನ್ನಿಗೋಳಿಯ ಯುಗಪುರುಷ ಸಭಾಂಗಣದಲ್ಲಿ ಮಂಗಳವಾರ ನಡೆದ ಕೊಡೆತ್ತೂರು, ಅತ್ತೂರು, ಎಕ್ಕಾರು ಮಾಗಣೆಯ ಗ್ರಾಮಸ್ಥರ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಅತ್ತೂರುಗುತ್ತು ಪ್ರಸನ್ನ ಎಲ್.ಶೆಟ್ಟಿ ವಿಷಯವನ್ನು ಪ್ರಸ್ತಾಪಿಸಿ ಕಟೀಲಿನಲ್ಲಿ ಸಂಪ್ರದಾಯವನ್ನು ಮುರಿಯುತ್ತಿದ್ದರು ಮಾಗಣೆಯ ಗ್ರಾಮಸ್ಥರು ಮೌನವಹಿಸುವುದು ಸರಿಯಲ್ಲ, ಇಂದು ಸೀಯಾಳಾಭಿಷೇಕಕ್ಕೆ ನಿರಾಕರಿಸಿದವರು ಮುಂದಿನ ದಿನದಲ್ಲಿ ಇನ್ನಿತರ ಪಾರಂಪರಿಕ ಸಂಪ್ರದಾಯವನ್ನು ಮುರಿಯುವ ಆತಂಕವಿದೆ ಇದನ್ನು ಮೊದಲು ಸೌಹಾರ್ದತೆಯಲ್ಲಿ ಬಗೆ ಹರಿಸಲು ಪ್ರಯತ್ನ ನಡೆಸಬೇಕು ಇದಕ್ಕೂ ಬಗ್ಗದೇ ಇದ್ದಲ್ಲಿ ಪ್ರತಿಭಟನೆಯನ್ನು ನಡೆಸಬೇಕು ಎಂದರು.

ಕೊಡೆತ್ತೂರು ದೇವಿಪ್ರಸಾದ್ ಶೆಟ್ಟಿ ಮಾತನಾಡಿ ಮಾಗಣೆಯ ಗ್ರಾಮಸ್ಥರನ್ನು ದೂರವಿಟ್ಟು ದೇವಳದಲ್ಲಿ ಪಾರಪತ್ಯವನ್ನು ಮಾಡಿಕೊಂಡಿರುವ ಆಸ್ರಣ್ಣ ಬಂಧುಗಳನ್ನು ಮೊದಲು ಸರಿದಾರಿಗೆ ತರಬೇಕು, ಆಸ್ರಣ್ಣರಿಗೆ ಗೌರವ ಕೊಡುವುದನ್ನು ಅವರು ದುರ್ಬಳಕೆ ಮಾಡಿಕೊಂಡರೆ ವಿನಾಶಕ್ಕೆ ಕಾರಣವಾಗಬಹುದು, ಗ್ರಾಮಕ್ಕೆ ಅನ್ಯಾಯ ಆದರೆ ಗ್ರಾಮ ದೇವತೆ ಸುಮ್ಮನಿರುವುದಿಲ್ಲ, ದೇವಳದ ಅಭಿವೃದ್ಧಿಗೆ ನಿಸ್ವಾರ್ಥವಾಗಿ ಕೆಲಸ ಮಾಡಿದ ಮಾಗಣೆಯ ಭಕ್ತರನ್ನು ತಿರಸ್ಕರಿಸುವ ಕ್ರಮವನ್ನು ಒಕ್ಕೂರಲಿನಿಂದ ಖಂಡಿಸಬೇಕು. ಸರ್ಕಾರದ ಕೃಪಕಟಾಕ್ಷೆ ಇದೆ ಎಂಬ ಅಹಂಕಾರವೇ ಈ ಪರಿಸ್ಥಿತಿಗೆ ಕಾರಣ ಅಲ್ಲಿನ ಆಡಳಿತಾಧಿಕಾರಿಗಳು ಅರ್ಚಕರ ರಬ್ಬರ್ ಸ್ಟಾಂಪ್ ಆಗಿದ್ದಾರೆ. ಮಾಗಣೆಯ ತಾಳ್ಮೆಯನ್ನು ಪರೀಕ್ಷಿಸಲು ಪ್ರಯತ್ನ ನಡೆಸಬೇಡಿ ಎಂಬ ಎಚ್ಚರಿಕೆ ಇರಬೇಕು ಎಂದು ಆಕ್ರೋಶಿತರಾಗಿ ಮಾತನಾಡಿದರು.

ಕೊಡೆತ್ತೂರು ಭುವನಾಭಿರಾಮ ಉಡುಪ ತಮ್ಮ ಅಭಿಪ್ರಾಯದಲ್ಲಿ ದೇವಳದಲ್ಲಿ ಸರ್ವಾಧಿಕಾರ ಬೇಡ ಭಕ್ತರ ಸೇವೆಗೆ ಯಾವತ್ತು ಆಕ್ಷೇಪ ಸರಿಯಲ್ಲ ಕಟೀಲಿನ ಅಭಿವೃದ್ಧಿ ಪರವಾಗಿ ಮಾತನಾಡಿದವರನ್ನು ಕಾನೂನು ಕುಣಿಕೆಯಲ್ಲಿ ಸಿಲುಕಿಸಿದರು ಹೆದರಬಾರದು. ಕಟೀಲು ಕ್ಷೇತ್ರದ ಪಾವಿತ್ರ್ಯಕ್ಕೆ ಎಲ್ಲರೂ ಒಗ್ಗೂಡಬೇಕು ಅದರಂತೆ ಮೊದಲು ಸ್ಥಳೀಯ ಶಾಸಕ, ಸಂಸದ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಪರಿಹಾರ ಪಡೆದುಕೊಳ್ಳೋಣ ಇಲ್ಲಿದಿದ್ದರೆ ಸಾರ್ವತ್ರಿಕವಾಗಿ ಭಜನಾ ಸಂಕೀರ್ತನೆ ಪ್ರತಿಭಟನೆಯ ಮೂಲಕ ಎಚ್ಚರಿಕೆ ನೀಡೋಣ ಎಂದು ಸಲಹೆ ನೀಡಿದಾಗ ಎಲ್ಲರೂ ಸಮ್ಮತಿಸಿದರು.
ಮುರಸದಾಶಿವ ಶೆಟ್ಟಿ, ಜನಾರ್ಧನ ಕಿಲೆಂಜೂರು, ಕುಂಞಪ್ಪ ಶೆಟ್ಟಿ, ವೇದವ್ಯಾಸ ಉಡುಪ, ರಘುರಾಮ ಶೆಟ್ಟಿ, ಎಕ್ಕಾರು ನಿತಿನ್ ಹೆಗ್ಡೆ, ಬೇಬಿ ಸುಂದರ ಕೋಟ್ಯಾನ್, ಪುರುಷೋತ್ತಮ ಶೆಟ್ಟಿ, ಕೊಡೆತ್ತೂರು ಸಂಜೀವ ಶೆಟ್ಟಿ ಇನ್ನಿತರರು ಹಾಜರಿದ್ದರು.

ಕಟೀಲಿನಲ್ಲಿ ವರ್ಷಕ್ಕೆ 13 ಲಕ್ಷದಷ್ಟು ವಿವಿಧ ಪೂಜೆ ಪುನಸ್ಕಾರದ ಕಮಿಷನ್‌ನಿಂದ 54 ಲಕ್ಷರೂ.ನಷ್ಟು ಲಾಭ ಮಾಡುತ್ತಿರುವ ಅರ್ಚಕರಿಗೆ ಧನದಾಹ ಇನ್ನೂ ತೀರಿಲ್ಲ, ಕೊಡೆತ್ತೂರು ಗುತ್ತು ಮನೆತನದ ನ್ಯಾಯಾಲಯದ ವ್ಯಾಜ್ಯ ಅರ್ಚಕರಿಗೆ ಸಹಕಾರಿಯಾಗಿದೆ ಎಂದು ಶ್ರೀಧರ ಶೆಟ್ಟಿ ನೇರವಾಗಿ ಆರೋಪಿಸಿದರು.

 

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)
ಕಾಪಿಕಾಡ್ ಸತೀಶ್

About ಕಾಪಿಕಾಡ್ ಸತೀಶ್

ಗ.ಕ. ವಾರ್ತಾ ವಿಭಾಗ ಮಂಗಳೂರು ಉಸ್ತುವಾರಿಯನ್ನು ನಮ್ಮ ಮಂಗಳೂರು ವರದಿಗಾರರಾದ ಸತೀಶ್ ಕಾಪಿಕಾಡ್‌ರವರು ನಿರ್ವಹಿಸುತ್ತಿದ್ದು ನಿಮ್ಮ ಯಾವುದೇ ಕಾರ್ಯಕ್ರಮಗಳ ವರದಿಗಳನ್ನು ಈ ಕೆಳಗಿನ ಈಮೈಲ್‌ಗೆ ಕಳುಹಿಸಬುದು.ಅಥವಾ ಮೊಬೈಲ್ ಸಂಖ್ಯೆ: 9035089084 ನ್ನು ಸಂಪರ್ಕಿಸಬಹುದು. sathishkapikad@gmail.com