ಪ್ರೊ.ಕುಶಾಲಪ್ಪಗೌಡರಿಗೆ ‘ಸೇಡಿಯಾಪು ಪ್ರಶಸ್ತಿ’

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಉಡುಪಿ,ಸೆ.11: ಮದರಾಸು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥ ಪ್ರೊ.ಕುಶಾಲಪ್ಪ ಗೌಡರನ್ನು 2012ನೆ ಸಾಲಿನ ಸೇಡಿಯಾಪು ಕೃಷ್ಣ ಭಟ್ಟ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ನಿರ್ದೇಶಕ ಪ್ರೊ. ಹೆರಂಜೆ ಕೃಷ್ಣ ಭಟ್ಟ ಪ್ರಕಟಿಸಿದ್ದಾರೆ.

ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಹಿರಿತನದ ಸೇಡಿಯಾಪು ಪ್ರಶಸ್ತಿ ಸಮಿತಿ ಈ ಆಯ್ಕೆಯನ್ನು ಮಾಡಿದೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪರಿಚಯ: 1931ರಲ್ಲಿ ಜನಿಸಿದ ಪ್ರೊ. ಕುಶಾಲಪ್ಪಗೌಡರು ಗ್ರಾಮೀಣ ಪರಿಸರದಲ್ಲಿ ಎಳವೆಯ ಶಿಕ್ಷಣ ಪಡೆದು ಮಡಿಕೇರಿಯ ಸರಕಾರಿ ಕಾಲೇಜಿನಲ್ಲಿ ಇಂಟರ್ ಮೀಡಿಯಟ್, ಮದರಾಸು ವಿವಿಯಲ್ಲಿ ಎಂ.ಎ ಪದವಿ (1957), ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಡಿಪ್ಲೊಮಾ ಇನ್ ಲಿಂಗ್ವಿಸ್ಟಿಕ್ಸ್ (1961), ಎಂ.ಲಿಟ್(1962) ಮುಂತಾದ ಪದವಿಗಳನ್ನು ಪಡೆದರು. ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿ ನಲ್ಲಿ ಸಹಾಯಕ ಪ್ರಾಧ್ಯಾಪಕ, ಆಂಧ್ರದ ಮದನಪಲ್ಲಿಯಲ್ಲಿ ಕನ್ನಡ ಉಪನ್ಯಾಸಕ, ಅಣ್ಣಾಮಲೈ ವಿವಿಯಲ್ಲಿ ಕನ್ನಡ ಉಪನ್ಯಾಸಕ ಹಾಗೂ ಭಾಷಾ ವಿಜ್ಞಾನ ಬೋಧಕರಾಗಿ, ಭಾಷಾ ವಿಜ್ಞಾನ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮುಂದೆ ಮದರಾಸು ವಿವಿ ಕನ್ನಡ ವಿಭಾಗದ ಪ್ರಾಧ್ಯಾಪಕ/ ಮುಖ್ಯಸ್ಥರಾಗಿ (1976-1991) ಸೇವೆ ಸಲ್ಲಿಸಿ ನಿವೃತ್ತರಾದರು.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)
ಜಯಪ್ರಕಾಶ್ ಕಿಣಿ

About ಜಯಪ್ರಕಾಶ್ ಕಿಣಿ