ಉಡುಪಿ: ಸ೦ದರ್ಶನಕ್ಕೆ ತೆರಳಿದ ಹುಡುಗಿ ಸಾಪತ್ತೆ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಉಡುಪಿ: ನಗರದ ನಿಟ್ಟೂರಿನ ನಿವಾಸಿಯೊಬ್ಬಳು ಕೆಲಸಕ್ಕಾಗಿ ಸ೦ದರ್ಶನಕ್ಕಾಗಿ ತೆರಳುವುದಾಗಿ ತೆರಳಿ ಮನೆ ಬಾರದ ಘಟನೆ ಗುರುವಾರದ೦ದು ಬೆಳಕಿಗೆ ಬ೦ದಿದೆ.

ಮೋಹನ್ ಕುಮಾರ್ (25) ತಂದೆ ಎಂ ರಾಜು ವಾಸ ಹೌಸ್ ನಂಬ್ರ 7/53 (ಬಿ4) ರಾಜೀವ ನಗರ ಆಭರಣ ಮೋಟಾರ್ಸ್ ಎದುರುಗಡೆ, ನಿಟ್ಟೂರು, ಪುತ್ತೂರು ಗ್ರಾಮ ಉಡುಪಿ ಜಿಲ್ಲೆ ರವರ ತಂಗಿ ಶಿವರಂಜನಿ (21) ಎಂಬವಳೆ ನಾಪತ್ತೆಯಾದ ಹುಡುಗಿಯಾಗಿದ್ದಾಳೆ.

ಮನೆಯಿಂದ ದಿನಾಂಕ 11/09/2012 ರಂದು ಬೆಳಿಗ್ಗೆ 08:00 ಗಂಟೆಗೆ ಮಣಿಪಾಲದಲ್ಲಿ ಕೆಲಸದ ಬಗ್ಗೆ ಸಂದರ್ಶನ ಇದೆ ಎಂದು ತಾನು ಮಿಲಾಗ್ರಿಸ್ ಕಾಲೇಜಿಗೆ ಹೋಗಿ ಅಲ್ಲಿಂದ ಸರ್ಟಿಪಿಕೇಟ್ ನ್ನು ಜೆರಾಕ್ಸ್ ಮಾಡಿಸಿ ಮಣಿಪಾಲದಲ್ಲಿ ನಡೆಯುವ ಸಂದರ್ಶನದಲ್ಲಿ ಭಾಗವಹಿಸುತ್ತೇನೆಂದು ಮನೆಯಿಂದ ಹೋದವಳು ಈ ತನಕ ಮನೆಗೆ ಬಾರದೇ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾಳೆ ಎಂಬುದಾಗಿ ಮೋಹನ್ ಕುಮಾರ್ ರವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಉಡುಪಿ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 327/12 ಕಲಂ ಹುಡುಗಿ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)
ಜಯಪ್ರಕಾಶ್ ಕಿಣಿ

About ಜಯಪ್ರಕಾಶ್ ಕಿಣಿ