ವಿಮಾನಯಾನ ಕ್ಷೇತ್ರದಲ್ಲಿ ನೇರ FDI: ಕಿಂಗ್ ಮಲ್ಯ ಆನಂದವೋ ಆನಂದ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಮಂಗಳೂರು, ಸೆ.15: ವಿಮಾನಯಾನ ಕ್ಷೇತ್ರದಲ್ಲಿ ನೇರ FDI: ಕಿಂಗ್ ಮಲ್ಯ ಆನಂದತುಂದಿಲಿತರಾಗಿದ್ದಾರೆ. ಆ ಕುಕ್ಕ ಸುಬ್ರಮಣ್ಯ ಸ್ವಾಮಿಗೆ ಚಿನ್ನದ ಬಾಗಿಲು ಮಾಡಿಸಿದ್ದಕ್ಕೂ ಆ ಭಗವಂತ ನನ್ನತ್ತ ಕಣ್ಣುಬಿಟ್ಟ ಎಂದು ಗಾಳಿಯಲ್ಲಿ ತೇಲಿ ಹಗುರವಾಗಿದ್ದಾರೆ ಆರ್ಥಿಕ ಸಂಕಷ್ಟದಲ್ಲಿ ಮುಳುಗಿಹೋಗಿರುವ ಕಿಂಗ್ ಫಿಶರ್ ವಿಮಾನಯಾನ ಸಂಸ್ಥೆಯ ಒಡೆಯ ವಿಜಯ್ ಮಲ್ಯ ಅವರು.

ನಿನ್ನೆ ಭಾರತ ಸರ್ಕಾರವು ದೇಶೀಯ ವಿಮಾನಯಾನ ಕ್ಷೇತ್ರದಲ್ಲಿ ಶೇ. 49ರಷ್ಟು ಪ್ರಮಾಣದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸುವುದಕ್ಕೆ ಅಂಕಿತ ಹಾಕಿದ ಸುದ್ದಿ ಹೊರಬೀಳುತ್ತಿದ್ದಂತೆ ತಮ್ಮ ಸಾಲದ ಹೊರೆಯನ್ನು ನೆನಪಿಸಿಕೊಂಡು ವಿಜಯ್ ಮಲ್ಯ ಗಾಳಿಯಲ್ಲಿ ತೇಲಿದ್ದಾರೆ. ಆದರೆ ವಿದೇಶೀ ಕಂಪನಿಗಳು ಸಾಲದ ಸುಳಿಯಲ್ಲಿರುವ ಭಾರತೀಯ ಕಂಪನಿಗಳಿಗೆ ಆಧಾರವಾಗುತ್ತವಾ ಎಂಬುದು ಬಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಇದರಿಂದಾಗಿ ಸಾವಿರಾರು ಕೋಟಿ ರೂ. ನಷ್ಟದಲ್ಲಿರುವ ($1.4 billion) ವಿಜಯ್ ಮಲ್ಯರ ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಸೇರಿದಂತೆ ಹಲವು ವಿಮಾನಯಾನ ಕಂಪನಿಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಸಿಗಲಿದೆ. ಪ್ರಸಕ್ತ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಮಾನಯಾನ ಕಂಪನಿಗಳ ಪೈಕಿ ಇಂಡಿಗೋ ಹೊರತುಪಡಿಸಿ ಮತ್ತೆಲ್ಲ ಕಂಪನಿಗಳು ಮಾರ್ಚ್‌ 31ಕ್ಕೆ ಮುಕ್ತಾಯಗೊಂಡ ಹಣಕಾಸು ವರ್ಷದಲ್ಲಿ ನಷ್ಟದಲ್ಲಿವೆ ಎಂಬುದು ಗಮನಾರ್ಹ.

ಮಾಧ್ಯಮ ವಲಯದಲ್ಲೂ FDI: ವಿದ್ಯುನ್ಮಾನ ಮಾಧ್ಯಮ ಮತ್ತು ಎಫ್‌ಎಂ ಹೊರತುಪಡಿಸಿ ಉಳಿದ ಮಾಧ್ಯಮ ವಲಯಗಳಲ್ಲಿ ಶೇ. 74ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗಗೂ ಕೇಂದ್ರ ಸಂಪುಟ ನಿನ್ನೆ ಅನುಮೋದನೆ ನೀಡಿದೆ.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)
ಅಶ್ವಿನಿ

About ಅಶ್ವಿನಿ