ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತಲಪಾಡಿ ಆಶ್ರಯದಲ್ಲಿ ಸಾರ್ವಜನಿಕ ಕ್ರೀಡಾ ಕೂಟ- 2012

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ತಲಪಾಡಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತಲಪಾಡಿ ಏರಿಯಾ ಇದರ ಆಶ್ರಯದಲ್ಲಿ ಸಾರ್ವಜನಿಕ ಕ್ರೀಡಾಕೂಟ ೨೦೧೨ವು ದಿನಾಂಕ ೧೬-೯-೨೦೧೨ರಂದು ತಲಪಾಡಿ ಮೈದಾನದಲ್ಲಿ ನಡೆಯಿತು.

ಈ ಕ್ರೀಡಾ ಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಪಿ.ಎಫ್.ಐ ತಲಪಾಡಿ ಏರಿಯಾಧ್ಯಕ್ಷ ಉಮರ್ ಶಾಫಿ ರವರು ವಹಿಸಿದ್ದರು. ಪಿ.ಎಫ್.ಐ ಬಂಟ್ವಾಳ ತಾಲೂಕು ವಲಯ ಅಧ್ಯಕ್ಷರಾದ ಶಾಹುಲ್ ಹಮಿದ್ ಎಸ್.ಎಚ್. ರವರು ಧ್ವಜಾರೋಹಣ ಮಾಡಿಡುವ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿ ಕ್ರೀಡೆಯ ಮಹತ್ವದ ಬಗ್ಗೆ ಮಾತನಾಡಿದರು.

ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಎಸ್.ಡಿ.ಪಿ‌ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಕ್ಬರ್ ಆಲಿ, ಪಿ‌ಎಫ್.ಐ ಬಿ.ಸಿ ರೋಡ್ ವಲಯ ಸಮಿತಿ ಸದಸ್ಯ ಇಸ್ಮಾಯಿಲ್ ತುಂಬೆ, ಎಸ್.ಡಿ.ಪಿ.ಐ ಬಂಟ್ವಾಳ ಪುರಸಭಾ ಸಮಿತಿ ಸದಸ್ಯ ಎಸ್. ಇಸ್ಮಾಯಿಲ್, ಪಿ.ಎಫ್.ಐ ತಲಪಾಡಿ ಏರಿಯಾ ಕಾರ್ಯದರ್ಶಿ ಬಶೀರ್ ಪಲ್ಲ ಇವರುಗಳು ಉಪಸ್ಥಿತರಿದ್ದರು. 

ಈ ಸಾರ್ವಜನಿಕ ಕ್ರೀಡಾ ಕೂಟದಲ್ಲಿ ಕಬ್ಬಡಿ, ಗುಂಡೆಸೆತ, ಸ್ಟೆಂಪ್ ಶೂಟ್, ಓಟ, ಹಗ್ಗ ಜಗ್ಗಾಟ ಮೊದಲಾದ ಕ್ರೀಡೆಗಳನ್ನು ಆಯೋಜಿಸಲಾಗಿದ್ದು, ಕಬಡ್ಡಿ ಪಂದ್ಯದಲ್ಲಿ ಶಾಂತಿ ಅಂಗಡಿ ತಂಡವು ಪ್ರಥಮ ಸ್ಥಾನ ಮತ್ತು ತಲಪಾಡಿ ತಂಡಕ್ಕೆ ದ್ವಿತಿಯಾ ಸ್ಥಾನ, ಹಗ್ಗ ಜಗ್ಗಾಟದಲ್ಲಿ ತಲಪಾಡಿ ತಂಡ ಪ್ರಥಮ ಮತ್ತು ಕೈಕಂಬ ತಂಡ ದ್ವಿತೀಯಾ ಸ್ಥಾನವನ್ನು ಪಡೆದಿದೆ.

ಅಪರಾಹ್ಣ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯ ಸಮಿತಿ ಸದಸ್ಯ ರಿಯಾಝ್ ಅಹ್ಮದ್‌ರವರು ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಇಜಾಝ್ ಅಹ್ಮದ್ ಅಧ್ಯಕ್ಷರು ಬಂಟ್ವಾಳ ವಲಯ ಪಿ.ಎಫ್.ಐ, ನುಶ್ರತ್ ಮಿಲಾದ್ ನಬಿ ಸಂಘ ಶಾಂತಿ ಅಂಗಡಿ ಇದರ ಅಧ್ಯಕ್ಷ ಸಲೀಮ್, ಮಿತ್ತಬೈಲ್ ಜುಮಾ ಮಸೀದಿಯ ಉಪಾಧ್ಯಕ್ಷರಾದ ಯುಸುಫ್, ಸ್ಥಳೀಯ ಎಸ್.ಡಿ.ಪಿ.ಐ ನಾಯಕ ನವಾಝ್, ಯುವ ಉದ್ಯಮಿ ಲತೀಫ್, ಫಾರೂಕ್, ಕೆ.ಎಚ್. ಲತೀಫ್ ಇವರುಗಳು ಭಾಗವಹಿಸಿ ವಿಜೇತ ತಂಡಗಳಿಗೆ ಮತ್ತು ಕ್ರೀಡೆಗಳಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯಾ ಮತ್ತು ತೃತೀಯ ಸ್ಥಾನ ಪಡೆದ ಕ್ರೀಡಾಪಟುಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

ಸಾರ್ವಜನಿಕ ಕ್ರೀಡಾಕೂಟದ ಸಂಯೋಜಕರಾಗಿ ಇಸಾಕ್ ಶಾಂತಿ ಅಂಗಡಿ, ಉಪ ಸಂಯೋಜಕರಾಗಿ ನಿಶಾರ್ ರವರು ಕಾರ್ಯನಿರ್ವಹಿಸಿರುತ್ತಾರೆ. ಮುಸ್ತಕ್ ತಲಪಾಡಿ ಅಥಿತಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)
ಕಾಪಿಕಾಡ್ ಸತೀಶ್

About ಕಾಪಿಕಾಡ್ ಸತೀಶ್