ಶೀಘ್ರದಲ್ಲೇ ದ.ಕ. ಜಿಲ್ಲಾ ಪೊಲೀಸ್ ವೆಬ್‌ಸೈಟ್ ಪುನಾರಂಭ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಮಂಗಳೂರು, ಸೆ.17: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವೆಬ್‌ಸೈಟ್ ಶೀಘ್ರದಲ್ಲೇ ಪುನರ್ ಕಾರ್ಯಾಚರಿಸುವ ಲಕ್ಷಣಗಳು ಗೋಚರಿಸಿವೆ. ಆರೆಸ್ಸೆಸ್‌ನ ಗುಣಗಾನವನ್ನು ಹೊಂದಿದ್ದ ಬಗ್ಗೆ ಸುಮಾರು ಮೂರು ತಿಂಗಳ ಹಿಂದೆ ಸಚಿತ್ರ ವರದಿ ಪತ್ರಿಕೆಗಳಲ್ಲಿ ಪ್ರಕಟವಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯಲ್ಲಿದ್ದ ದ.ಕ. ಜಿಲ್ಲಾ ಪೊಲೀಸ್ ವೆಬ್‌ಸೈಟ್ ‘ನಿರ್ಮಾಣ ಹಂತದಲ್ಲಿದೆ’ ಎಂಬ ಮುಖಪುಟದೊಂದಿಗೆ ಸ್ಥಗಿತ ಗೊಂಡಿತ್ತು. ‘ವಾರ್ತಾಭಾರತಿ’ಯ ಮೇ 27ರ ಸಂಚಿಕೆಯಲ್ಲಿ ‘ದ.ಕ. ಪೊಲೀಸ್ ವೆಬ್‌ಸೈಟ್‌ನಲ್ಲಿ ಆರೆಸ್ಸೆಸ್ ಗುಣಗಾನ’ ಎಂಬ ಶಿರೋನಾಮೆಯಡಿ ಸಚಿತ್ರ ವರದಿಯೊಂದು ಪ್ರಕಟವಾಗಿದ್ದನ್ನು ಇಲ್ಲಿ ನೆನಪಿಸಬಹುದು.

ಇದೀಗ ಮತ್ತೆ ದ.ಕ. ಜಿಲ್ಲಾ ಪೊಲೀಸ್ ವೆಬ್‌ಸೈಟ್ ಪುನಾರಂಭಿಸುವ ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭಗೊಂಡಿದೆ. ವೆಬ್‌ಸೈಟ್ ಕಾರ್ಯಾಚರಣೆ ಸ್ಥಗಿತಗೊಂಡಿದ್ದರೂ, ಜಿಲ್ಲಾ ಪೊಲೀಸ್ ಇಲಾಖೆಯು ದಿನನಿತ್ಯದ ಕಾರ್ಯಕ್ರಮಗಳನ್ನು ಬ್ಲಾಗ್ ಮೂಲಕ ಅಪ್‌ಲೋಡ್ ಮಾಡುತ್ತಿತ್ತು.

‘‘ಕಳೆದ ಸುಮಾರು ಒಂದು ತಿಂಗಳಿನಿಂದ ದ.ಕ. ಜಿಲ್ಲಾ ಪೊಲೀಸ್ ಇಲಾಖೆಯ ದಿನನಿತ್ಯದ ಚಟುವಟಿಕೆಗಳ ಅಪ್‌ಲೋಡ್ ಗಾಗಿ ಬ್ಲಾಗನ್ನು ಬಳಸಲಾಗುತ್ತಿದೆ. ವೆಬ್‌ಸೈಟ್‌ನ ಮರು ವಿನ್ಯಾಸಕ್ಕಾಗಿ ನಾವು ಸಂಪರ್ಕಿಸಿರುವ ಸಂಸ್ಥೆಯ ವಿಳಂಬ ಹಾಗೂ ನಾವು ಕೂಡಾ ನಕ್ಸಲ್ ಕಾರ್ಯಾಚರಣೆಯಲ್ಲಿ ತೊಡಗಿದ್ದ ಕಾರಣ ವೆಬ್‌ಸೈಟ್‌ನ ಪುನರಾರಂಭ ತಡವಾಗಿದೆ. ಇದೀಗ ಆದಷ್ಟು ಶೀಘ್ರದಲ್ಲೇ ವೆಬ್‌ಸೈಟ್ ಪುನರಾರಂಭಗೊಳ್ಳಲಿದೆ’’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ಸಾರ್ವಜನಿಕರು ಹಾಗೂ ಮಾಧ್ಯಮ ಗಳು ಅತ್ಯಂತ ಕ್ಷಿಪ್ರಗತಿಯಲ್ಲಿ ಪೊಲೀಸ್ ಇಲಾಖೆಯೊಂದಿಗೆ ಮುಖಾಮುಖಿ ಯಾಗುವ ನಿಟ್ಟಿನಲ್ಲಿ ರಾಜ್ಯದಲ್ಲೇ ಪ್ರಥಮವಾಗಿ ದ.ಕ. ಜಿಲ್ಲೆಯ ಪೊಲೀಸ್ ಇಲಾಖೆಯು ಇಂಟರ್‌ನೆಟ್ ಬಳಕೆಯನ್ನು ಆರಂಭಿಸಿತ್ತು. ಬಿ. ದಯಾನಂದ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಸಂದರ್ಭ ಬ್ಲಾಗ್ ಆರಂಭಿಸಲಾಗಿದ್ದರೆ, ಡಾ.ಎ. ಸುಬ್ರಹ್ಮಣ್ಯೇಶ್ವರ ರಾವ್ ಎಸ್ಪಿಯಾಗಿದ್ದ ಸಂದರ್ಭ ಬ್ಲಾಗ್ ಡಿಡಿಡಿ. ಟ್ಝಜ್ಚಿಛಿ. ಟ್ಟಜ ವೆಬ್‌ಸೈಟ್ ಆರಂಭಗೊಂಡಿತ್ತು. ಇದೀಗ ಜಿಲ್ಲಾ ಎಸ್ಪಿ ಅಭಿಷೇಕ್ ಗೋಯಲ್ ಹೊಸರೂಪದಲ್ಲಿ ವೆಬ್‌ಸೈಟನ್ನು ಪುನಾರಂಭಿಸಲು ಸಿದ್ಧತೆ ನಡೆಸಿದ್ದಾರೆ.

ಆರೆಸ್ಸೆಸ್‌ನ ಮುಖವಾಣಿಯಂತೆ ಜಿಲ್ಲಾ ಪೊಲೀಸ್ ವೆಬ್‌ಸೈಟ್ ಕಾರ್ಯಾ ಚರಿಸುತ್ತಿರುವುದಾಗಿ ಕಳೆದ ಮೇ ತಿಂಗಳಲ್ಲಿ ವಿವಾದಕ್ಕೀಡಾದ ಸಂದರ್ಭ, ವೆಬ್‌ಸೈಟನ್ನು ಪರಿಷ್ಕರಿಸುವ ಕಾರ್ಯಕ್ಕಾಗಿ ಕೆಲವು ಚಿತ್ರಗಳನ್ನು ಹಾಕಲಾಗಿದೆ ಎಂಬ ಹಾರಿಕೆಯ ಉತ್ತರದೊಂದಿಗೆ ಪೊಲೀಸ್ ಹಿರಿಯ ಅಧಿಕಾರಿಗಳು ತಮ್ಮ ತಪ್ಪನ್ನು ಮರೆಮಾಚಿದ್ದರು. ಇದೀಗ ವೆಬ್‌ಸೈಟ್‌ನ ಪುನಾರಂಭ ಮಾಧ್ಯಮ ಸೇರಿದಂತೆ ಸಾರ್ವಜನಿಕರಿಗೆ ಸಾಂವಿಧಾನಿಕ ನೆಲೆಯಲ್ಲಿ ಉಪಯೋಗವಾಗುವ ಆಶಯವನ್ನು ಹೊಂದಲಾಗಿದೆ.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ ಮಂಗಳೂರು ವಾರ್ತಾ ವಿಭಾಗ