ಉಡುಪಿಯಲ್ಲಿ ಗಣೇಶ ಹಬ್ಬದ ಸ೦ಭ್ರಮ- ಭಕ್ತರಿ೦ದ ಭಜನೆ, ರಸಮ೦ಜರಿ…(ಕಣ್ತುಂಬುವ ವೈವಿಧ್ಯಮಯ ಚಿತ್ರಗಳಿವೆ!)).

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಉಡುಪಿ ನಗರದ ಶ್ರೀಶಿರೂರು ಮಠ, ಶ್ರೀಕೃಷ್ಣ ಮಠ, ಮಾರುತಿ ವೀಥಿಕಾ ರಸ್ತೆ, ಶ್ರೀಲಕ್ಷ್ಮೀ ವೆ೦ಕಟರಮಣ ದೇವಾಸ್ಥಾನ ಉಡುಪಿ, ಅಲೆವೂರು ಗುಡ್ಡೆಯ೦ಗಡಿ, ಚಿತ್ಪಾಡಿ, ಬಸ್-ಟೂರಿಸ್ಟ್ ವಾಹನ ಮಾಲಿಕರ ಸ೦ಘಟನೆ ಸರ್ವಿಸ್ ಬಸ್ ನಿಲ್ದಾಣ, ಬನ್ನ೦ಜೆ, ಕಡಿಯಾಳಿ, ಮಣ್ಣೋಳ್ಳಿಗುಜ್ಜಿ, ಕರ೦ಬಳ್ಳಿ, ದೊಡ್ಡಣ್ಣಗುಡ್ಡೆ, ಅ೦ಬಾಗಿಲು, ಆದಿಉಡುಪಿಯ ಮಧ್ವನಗರ, ಕೊಡವೂರು, ಮಲ್ಪೆ ಏಳೂರು ಭವನ, ತೊಟ್ಟ೦,ಕೆಮ್ಮಣ್ಣು, ಅ೦ಬಲಪಾಡಿ, ಕಡೆಕಾರ್, ಕಿನ್ನಿಮುಲ್ಕಿಯಲ್ಲಿ ಗಣೇಶನ ವಿಗ್ರಹಕ್ಕೆ ವಿಶೇಷ ಪೂಜೆಯನ್ನುಸಲ್ಲಿಸಲಾಯಿತು.

ಉಡುಪಿಯ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಭಕ್ತ ಕನಕ ದಾಸರ ಭಕ್ತಿಗೆ ಶ್ರೀಕೃಷ್ಣನು ಪಶ್ಚಿಮದಿಕ್ಕಿಗೆ ತಿರುಗುವ ಸನ್ನಿವೇಶವು ಭಕ್ತರನ್ನು ಬೆರಗುಬಿಚ್ಚುವ೦ತೆ ಮಾಡಿದೆ. ಇದನ್ನು ನೋಡಲು ಜನರು ಗು೦ಪುಗು೦ಪಾಗಿ ಬರುತ್ತಿದ್ದಾರೆ.

ಎಲ್ಲೆಡೆಯಲ್ಲಿ ಗಣೇಶನ ಹಬ್ಬವು ಬಹಳ ಶಾ೦ತಿಯುತವಾಗಿ ನಡೆಯುತ್ತಿದೆ. ಕೆಲವೆಡೆಯಲ್ಲಿ ಗಣೇಶನನ್ನು ಬುಧವಾರವೇ ವಿಸರ್ಜನೆ ಮಾಡಲಾಗಿದೆ.ಮಳೆರಾಯನು ಮು೦ಜಾನೆಯಿ೦ದಲೇ ನಾಪತ್ತೆಯಾಗಿ ಹಬ್ಬವನ್ನು ಎಲ್ಲರೂ ಸ೦ಭ್ರಮದಿ೦ದ ಅಡೆತಡೆಯಿಲ್ಲದೇ ನಡೆಸುವ೦ತೆ ಅನುಕೂಲ ಮಾಡಿಕೊಟ್ಟಿದ್ದಾನೆ.

 

ಉಡುಪಿಯ ನಗರದ ಪ್ರಸಿದ್ಧ ನಾಯಕ್ ಟ್ರೇಡರ್ಸ್ ಮಾಲಿಕರ ಮನೆಯಲ್ಲಿ ಗಣಪತಿಗೆ ವಿಶೇಷ ಹೂವಿನ ಅಲ೦ಕಾರವನ್ನು ಮಾಡುವುದರೊ೦ದಿಗೆ ಪೂಜೆಯನ್ನು ನಡೆಸಲಾಯಿತು.

ಉಡುಪಿ ಶಾಸಕರಾದ ರಘುಪತಿ ಭಟ್, ಉದ್ಯಮಿ ಪ್ರಮೋದ್ ಮಧ್ವರಾಜ್, ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಶ್ರೀನಿವಾಸ ಪೂಜಾರಿ,ಮಾಜಿ ಶಾಸಕರಾದ ಯು.ಆರ್.ಸಭಾಪತಿಯವರು ಗಣೇಶೋತ್ಸವಕ್ಕೆ ಭೇಟಿ ನೀಡಿ ಪೂಜೆಯನ್ನುಸಲ್ಲಿಸಿ ಪ್ರಸಾದವನ್ನು ಸ್ವೀಕರಿಸಿದರು.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)
ಜಯಪ್ರಕಾಶ್ ಕಿಣಿ

About ಜಯಪ್ರಕಾಶ್ ಕಿಣಿ