ಸುಳ್ಯ ತಾಲೂಕಿನಲ್ಲಿ ಬಂದ್ ಯಶಸ್ವಿ: ಅಂಗಡಿ ಬಂದ್, ಸಂಚಾರ ಅಸ್ತವ್ಯಸ್ತ, ರಸ್ತೆಗೆ ಮರ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಸುಳ್ಯ, ಸೆ.20: ಡೀಸೆಲ್ ಬೆಲೆ ಏರಿಕೆ, ಸಬ್ಸಿಡಿ ಪೂರೈಕೆಯಲ್ಲಿ ಕಡಿತ ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ವಿದೇಶೀ ಹೂಡಿಕೆಗೆ ಅನುಮತಿ ನೀಡಿರುವ ಜನ ವಿರೋಧಿ ನೀತಿಯನ್ನು ಪ್ರತಿಭಟಿಸಿ ಎನ್‌ಡಿಎ ಮತ್ತು ಎಡಪಕ್ಷಗಳು ಕರೆ ನೀಡಿರುವ ಭಾರತ್ ಬಂದ್ ಸುಳ್ಯ ತಾಲೂಕಿನಲ್ಲಿ ಯಶಸ್ವಿಯಾಗಿದೆ.

ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದರಿಂದ ವಿದ್ಯಾರ್ಥಿ ಗಳು ಮನೆಯಿಂದ ಹೊರಡಲಿಲ್ಲ. ತಾಲೂಕಿನಲ್ಲಿ ಬಹುತೇಕ ಅಂಗಡಿ ಗಳು ಮುಚ್ಚಿತ್ತು. ಸುಳ್ಯ ನಗರದಲ್ಲಿ ಶೇ.75ರಷ್ಟು ಅಂಗಡಿ ಮುಂಗಟ್ಟು ಗಳು ತೆರೆದಿರಲಿಲ್ಲ. ಗಾಂಧಿನಗರದಲ್ಲಿ ಬೆರಳೆಣಿಕೆಯ ಅಂಗಡಿಗಳು ಮಾತ್ರ ತೆರೆದಿತ್ತು.

ಹಲವೆಡೆ ರಸ್ತೆಗೆ ಮರ
ಎಲಿಮಲೆ ಸಮೀಪದ ಜಬಳೆಯಲ್ಲಿ ಮುಂಜಾನೆ ವೇಳೆ ರಸ್ತೆಗಡ್ಡವಾಗಿ ಮರಗಳನ್ನು ಕಡಿದು ಹಾಕಲಾಗಿತ್ತು. ಬೆಳಗ್ಗೆ ಆ ಮಾರ್ಗವಾಗಿ ಬಂದ ಕೆಲವು ಬಸ್‌ಗಳ ಚಾಲಕ-ನಿರ್ವಾಹಕರು ಮರವನ್ನು ಕಡಿದು ತೆರವುಗೊಳಿಸಿ ದರು. ಪುಳಿಕುಕ್ಕು, ಗೋಂಟಡ್ಕಗಳಲ್ಲೂ ಮರಗಳನ್ನು ಕಡಿದು ಹಾಕಲಾಗಿತ್ತು. ಬೆಳಗ್ಗೆ ಬೆರಳೆಣಿಕೆಯ ಬಸ್‌ಗಳು ಸುಳ್ಯಕ್ಕೆ ಬಂದು ನಿಂತಿದ್ದು, ಆ ಬಳಿಕ ಬಸ್ ಸಂಚಾರ ನಡೆಸಿಲ್ಲ. ಖಾಸಗಿ ಬಸ್‌ಗಳು ಓಡಾಟ ಸ್ಥಗಿತಗೊಳಿಸಿತ್ತು. ವ್ಯಾನ್‌ಗಳು ರಸ್ತೆಗಿಳಿದಿಲ್ಲ. ರಿಕ್ಷಾಗಳೂ ಓಡಾಟ ಸ್ಥಗಿತಗೊಳಿಸಿ ಬಂದ್ ಕರೆಯನ್ನು ಯಶಸ್ವಿಗೊಳಿಸಿತ್ತು. ಕೆಲವು ಸರಕಾರಿ ಕಚೇರಿ, ಬ್ಯಾಂಕ್‌ಗಳು ತೆರೆದಿತ್ತಾದರೂ ಸಿಬ್ಬಂದಿ ಸಂಖ್ಯೆ ಕಡಿಮೆ ಇತ್ತು.

ಅರಂತೋಡಿನಲ್ಲಿ ಕೆಲವು ಅಂಗಡಿ ಗಳು ತೆರೆದಾಗ ಬಿಜೆಪಿ ಕಾರ್ಯ ಕರ್ತರು ಅವನ್ನು ಮುಚ್ಚಿಸಿದರು. ಭಜನಾ ಮಂದಿರದ ಬಳಿ ರಸ್ತೆಗಡ್ಡವಾಗಿ ಲೈಟ್ ಕಂಬಗಳನ್ನು ಇರಿಸಲಾಗಿತ್ತು.

ರೋಗಿಗಳಿಗೆ ಉಚಿತ ಕ್ಷೌರ
ಬಂದ್ ದಿನ ಸೆಲೂನ್ ಮುಚ್ಚಿದ್ದ ರಿಂದ ಸುಳ್ಯ ಸವಿತಾ ಸಮಾಜದ ಸದಸ್ಯರುಗಳಾದ ಪದ್ಮನಾಭ ಭಂಡಾರಿ ಮತ್ತು ಪುರುಷೋತ್ತಮ ಅಜ್ಜಾವರ ಕೆ.ವಿ.ಜಿ. ಆಸ್ಪತ್ರೆಗೆ ತೆರಳಿ ಹಲವು ರೋಗಿಗಳಿಗೆ ಉಚಿತ ಕ್ಷೌರ ನಡೆಸಿ ಆದರ್ಶತೆ ಮೆರೆದರು. ಅವರು ಈ ಹಿಂದೆ ಕೂಡಾ ಬಂದ್ ದಿನ ಇದೇ ಸೇವೆ ಮಾಡಿದ್ದರು.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ ಮಂಗಳೂರು ವಾರ್ತಾ ವಿಭಾಗ