ಶುಲ್ಕ ವಿನಾಯಿತಿ ಮರುಪಾವತಿ ಬಗ್ಗೆ ಕಾಲೇಜುಗಳಿಗೆ ಸೂಚನೆ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (98) ಸಮ್ಮತ (41) ಅಸಮ್ಮತ (8) ಖಂಡನೆ (15) ಅಭಿಪ್ರಾಯವಿಲ್ಲ (11)

Students_online_scholarshipಮಂಗಳೂರು,ಜುಲೈ.24: ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಸೂಚನೆಯ ಮೇರೆಗೆ, 2013-14 ನೇ ಸಾಲಿನಿಂದ ಡಿಬಿಟಿ- ಇಪಾಸ್ ಸ್ಕಾಲರ್‌ಷಿಪ್ ಸಾಫ್ಟ್‌ವೇರ್ ಅಡಿಯಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ (ಕೇಂದ್ರ ಮತ್ತು ರಾಜ್ಯ ಎರಡೂ), ಶುಲ್ಕ ಮರುಪಾವತಿ ಮತ್ತು ಭೋಜನಾ ವೆಚ್ಚ ಕಾರ್ಯಕ್ರಮಗಳನ್ನು ಒಂದುಗೂಡಿಸಿ, ಆನ್‌ಲೈನ್ ಮೂಲಕ ಮಂಜೂರು ಮಾಡುವ ಮತ್ತು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ವಿದ್ಯಾರ್ಥಿ ವೇತನದ ಮೊಬಲಗನ್ನು ನೇರವಾಗಿ ಪಾವತಿ ಮಾಡುವ ವಿಧಾನವನ್ನು ಕಡ್ಡಾಯವಾಗಿ ಅಳವಡಿಸಬೇಕಾಗಿದೆ.

ಈ ಉದ್ದೇಶದಿಂದ ಈಗಾಗಲೇ ಸೆಂಟರ್ ಫಾರ್ ಗುಡ್ ಗವರ್ನೆನ್ಸ್, (ಸಿಜಿಜಿ) ಹೈದರಾಬಾದ್ ಸಂಸ್ಥೆಯಿಂದ ಸಾಫ್ಟ್‌ವೇರ್‌ನ್ನು ಸಿದ್ದಪಡಿಸಲಾಗುತ್ತಿದ್ದು, ಈ ಸಾಫ್ಟ್‌ವೇರ್‌ನ್ನು ರಾಜ್ಯದ ಎಲ್ಲಾ ಸರ್ಕಾರಿ / ಖಾಸಗಿ ಅನುದಾನಿತ/ ಖಾಸಗಿ ಅಂಗೀಕೃತ ಪದವಿ ಪೂರ್ವ ಕಾಲೇಜುಗಳು, ಪದವಿ ಕಾಲೇಜುಗಳು, ಪಾಲಿಟೆಕ್ನಿಕ್ ಕಾಲೇಜುಗಳು, ಇಂಜಿನಿಯರಿಂಗ್ ಕಾಲೇಜುಗಳು, ವೈದ್ಯಕೀಯ ಕಾಲೇಜುಗಳು(ಎಂ.ಬಿ.ಬಿ.ಎಸ್, ಯುನಾನಿ, ಆಯುರ್ವೇದ, ನ್ಯಾಚುರೋಪತಿ, ಅಲೋಪತಿ ನರ್ಸಿಂಗ್, ಪ್ಯಾರಾ ಮೆಡಿಕಲ್ ಇತ್ಯಾದಿ), ಡಿ.ಇಡಿ/ಬಿ.ಇಡಿ ಕಾಲೇಜುಗಳು ಬಳಸಿಕೊಳ್ಳಲು ಅವಕಾಶವಾಗುವಂತೆ  ವೆಬ್ ವಿಳಾಸ   http://karepass.cgg.gov.in/  ರಲ್ಲಿ ಅಪ್‌ಲೋಡ್ ಮಾಡಲಾಗಿದೆ.  ಈ ಸಾಫ್ಟ್‌ವೇರ್‌ನಲ್ಲಿ ಎಲ್ಲಾ ಕಾಲೇಜಿನ ಮಾಹಿತಿಯನ್ನು ಅಪ್‌ಡೇಟ್ ಮಾಡಲಾಗಿದೆ.  ಸಾಫ್ಟ್ ವೇರ್‌ನಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ ಕಾಲೇಜಿನ ಮಾಹಿತಿಯನ್ನು ಅಪ್‌ಡೇಟ್ ಮಾಡಬೇಕಾಗಿದೆ.ಅಪ್‌ಡೇಟ್ ಮಾಡಿರದೇ ಇದ್ದಂತಹ ಕಾಲೇಜಿನ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ/ ಶುಲ್ಕ ಮರುಪಾವತಿ / ಆಹಾರ ವೆಚ್ಚ ಮಂಜೂರಾತಿಗಾಗಿ ಅರ್ಜಿಗಳನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಕೂಡಲೇ ಅಪ್‌ಡೇಟ್ ಮಾಡಲು ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿಗಳು ತಿಳಿಸಿರುತ್ತಾರೆ.

ಕಾಲೇಜಿನ ಮಾಹಿತಿಯನ್ನು ಅಪ್‌ಡೇಟ್ ಮಾಡಲು ಆಯಾಯ ಕಾಲೇಜುಗಳಿಗೆ ನೀಡಲಾಗಿರುವ ಯೂಸರ್ ಐಡಿ ಮತ್ತು ಪಾಸ್‌ವರ್ಡ್‌ನ್ನು ಸ್ಥಳೀಯ ತಾಲೂಕು ಪಂಚಾಯತ್ ಕಚೇರಿಯಲ್ಲಿ ,ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಯವರನ್ನು ಸಂಪರ್ಕಿಸಿ ಪಡೆಯಲು ಸೂಚಿಸಿದೆ.  ಎಲ್ಲಾ ಕಾಲೇಜಿನ ಮಾಹಿತಿಯನ್ನು ಕಡ್ಡಾಯವಾಗಿ ದಿನಾಂಕ: 28.07.2013 ರೊಳಗಾಗಿ ಅಪ್‌ಡೇಟ್ ಮಾಡಬೇಕು ಎಂದು  ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಇವರು ತಿಳಿಸಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (98) ಸಮ್ಮತ (41) ಅಸಮ್ಮತ (8) ಖಂಡನೆ (15) ಅಭಿಪ್ರಾಯವಿಲ್ಲ (11)
ಕಾಪಿಕಾಡ್ ಸತೀಶ್

About ಕಾಪಿಕಾಡ್ ಸತೀಶ್

ಗ.ಕ. ವಾರ್ತಾ ವಿಭಾಗ ಮಂಗಳೂರು ಉಸ್ತುವಾರಿಯನ್ನು ನಮ್ಮ ಮಂಗಳೂರು ವರದಿಗಾರರಾದ ಸತೀಶ್ ಕಾಪಿಕಾಡ್‌ರವರು ನಿರ್ವಹಿಸುತ್ತಿದ್ದು ನಿಮ್ಮ ಯಾವುದೇ ಕಾರ್ಯಕ್ರಮಗಳ ವರದಿಗಳನ್ನು ಈ ಕೆಳಗಿನ ಈಮೈಲ್‌ಗೆ ಕಳುಹಿಸಬುದು.ಅಥವಾ ಮೊಬೈಲ್ ಸಂಖ್ಯೆ: 9035089084 ನ್ನು ಸಂಪರ್ಕಿಸಬಹುದು. sathishkapikad@gmail.com