ಸೇವೆಗಳ ಸದ್ಬಳಕೆಗೆ ‘ಆಧಾರ್ ಕಾರ್ಡ್’ ಕಡ್ಡಾಯವಾಗಬೇಕು: ಹಣಕಾಸು ಸಚಿವ ಪಿ.ಚಿದಂಬರಂ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (1) ಖಂಡನೆ (0) ಅಭಿಪ್ರಾಯವಿಲ್ಲ (0)

Chidambaram bang- Oct5-2013-003

ಬೆಂಗಳೂರು, ಅ.5: ಸರ್ಕಾರಿ ಸೇವೆಗಳ ಪ್ರಯೋಜನ ಪಡೆದುಕೊಳ್ಳಲು ಆಧಾರ್‌ಕಾರ್ಡ್‌ಅನ್ನು ಕಡ್ಡಾಯ ಮಾಡುವಂತೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದೆ. ಆಧಾರ್ ಕಾರ್ಡ್ ಕಡ್ಡಾಯ ಮಾಡುವುದರಿಂದ ದುರುಪಯೋಗ ತಡೆಗಟ್ಟಬಹುದು ಎಂದು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ.

ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಧಾರ್ ಕಾರ್ಡ್ ಮೂಲಕ 50 ಸಾವಿರ ನಕಲಿ ಅಡುಗೆ ಅನಿಲ ಸಂಪರ್ಕಗಳನ್ನು ಪತ್ತೆ ಹಚ್ಚಲಾಗಿದೆ. ಇದರಿಂದ 25 ಕೋಟಿ ರೂ. ಹಣ ಸರ್ಕಾರಕ್ಕೆ ಉಳಿತಾಯವಾಗಿದೆ. ಈ ಎಲ್ಲ ಅಂಶಗಳನ್ನೂ ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟು ಆಧಾರ್‌ಕಾರ್ಡ್‌ಅನ್ನು ಕಡ್ಡಾಯ ಮಾಡುವಂತೆ ಸರ್ಕಾರ ಮತ್ತೊಮ್ಮೆ ಮನವಿ ಮಾಡಿಕೊಳ್ಳಲಿದೆ.

Chidambaram bang- Oct5-2013-006

ಈ ವಿಚಾರವಾಗಿ ಈಗ ಸುಪ್ರೀಂಕೋರ್ಟ್ ಅಂತಿಮ ತೀರ್ಪು ಕೊಟ್ಟಿಲ್ಲ. ಈಗ ಕೊಟ್ಟಿರುವುದು ಕೇವಲ ಮಧ್ಯಂತರ ತೀರ್ಪು ಮಾತ್ರ. ಈ ಹಿನ್ನೆಲೆಯಲ್ಲಿ ಮುಂದಿನ ವಿಚಾರಣೆ ಸಂದರ್ಭದಲ್ಲಿ ಅಟಾರ್ನಿ ಜನರಲ್ ಅವರೇ ಸುಪ್ರೀಂಕೋರ್ಟ್‌ನಲ್ಲಿ ಸರ್ಕಾರದ ಪರವಾಗಿ ವಾದ ಮಾಡಿ ಆಧಾರ್ ಕಾರ್ಡ್‌ಅನ್ನು ಕಡ್ಡಾಯ ಮಾಡುವುದರಿಂದ ಸರ್ಕಾರದ ಸೌಲಭ್ಯಗಳು ಅರ್ಹರಿಗೆ ಸಿಗುತ್ತವೆ ಮತ್ತು ದುರುಪಯೋಗವಾಗುವುದನ್ನು ತಡೆಗಟ್ಟಬಹುದು ಎಂಬುದನ್ನು ವಾಸ್ತವಿಕ ಸಂಗತಿಗಳ ಮೂಲಕ ಮನವರಿಕೆ ಮಾಡಿಕೊಡಲಿದ್ದಾರೆ ಎಂದರು.

Chidambaram bang- Oct5-2013-005

ಬ್ಯಾಂಕ್‌ಗಳಿಗೆ ಷೇರು ಬಂಡವಾಳವನ್ನು ನೀಡಲು ಸರ್ಕಾರ ನಿರ್ಧರಿಸಿದ್ದು, 14 ಸಾವಿರ ಕೋಟಿ ರೂ.ಗಳನ್ನು ನೀಡಲು ನಿರ್ಧಾರ ಮಾಡಲಾಗಿತ್ತು. ಆದರೆ, ಈಗಿನ ಲೆಕ್ಕಾಚಾರದ ಪ್ರಕಾರ ಈ ಹಣ ಇನ್ನೂ ಹೆಚ್ಚಾಗಲಿದ್ದು, ಇದರಿಂದ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲ ಪಡೆದುಕೊಳ್ಳಲು ಜನರಿಗೆ ಅನುಕೂಲವಾಗಲಿದೆ. ಆರ್ಥಿಕ ಚಟುವಟಿಕೆ ವಿಕಸನಕ್ಕೆ ಇದು ಅವಕಾಶಧ ಮಾಡಿಕೊಡಲಿದೆ ಎಂದರು.

ಬಡವರಿಗೆ, ಸಾಮಾನ್ಯ ವರ್ಗದವರಿಗೆ ಬ್ಯಾಂಕಿನಿಂದ ಸೌಲಭ್ಯ,ಆದ್ಯತೆ ಸಿಗಬೇಕು: ಚಿದು

Chidambaram bang- Oct5-2013-004

ಬೆಂಗಳೂರು: ಬಡವರು ಮತ್ತು ಶ್ರೀಸಾಮಾನ್ಯನ ಆಶೋತ್ತರಗಳಿಗೆ ಬ್ಯಾಂಕ್‌ಗಳು ಪ್ರಮುಖವಾಗಿ ಸ್ಪಂದಿಸಬೇಕು, ಆದ್ಯತೆ ನೀಡಬೇಕು ಎಂದು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಒತ್ತಿ ಹೇಳಿದ್ದಾರೆ.

ಸ್ಟೇಟ್ ಬ್ಯಾಂಕ್ ಆ್ ಮೈಸೂರು ಶತಮಾನೋತ್ಸವದ ಅಂಗವಾಗಿ 101 ಶಾಖೆಗಳನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಶ್ರೀಮಂತರು ಮತ್ತು ಕಾರ್ಪೊರೇಟ್ ಸಂಸ್ಥೆಗಳಿಗೆ ಸಾಲ ಕೊಡುವುದು ನಿಮ್ಮ ಆದ್ಯತೆಯಾಗಬಾರದು.

Chidambaram bang- Oct5-2013-002

ಅವರಿಗೆ ನೀವು ಸಹಾಯ ಮಾಡದಿದ್ದರೂ ಬೇರೆ ಮೂಲದಿಂದ ಸಹಾಯ ಪಡೆದುಕೊಳ್ಳುವಷ್ಟು ಶಕ್ತಿ ಅವರಿಗಿದೆ. ನಿಮ್ಮ ಆದ್ಯತೆ ಮತ್ತು ಗಮನ ಬಡವರು ಮತ್ತು ಶ್ರೀಸಾಮಾನ್ಯನ ಕಡೆಗೆ ಇರಬೇಕು. ಸಾಲ ನೀಡುವಾಗ, ಸೌಲಭ್ಯ ಕಲ್ಪಿಸುವಾಗ ಬಡವರು ಮತ್ತು ಶ್ರೀಸಾಮಾನ್ಯರಿಗೆ ಹೆಚ್ಚಿನ ಒತ್ತು ನೀಡಿ. ಇತ್ತೀಚಿನ ವರ್ಷಗಳಲ್ಲಿ ಬಡವರು ಮತ್ತು ಶ್ರೀಸಾಮಾನ್ಯರಲ್ಲಿ ಪ್ರಾಮಾಣಿಕತೆ ಹೆಚ್ಚಾಗುತ್ತಿದೆ.

ಪಡೆದ ಸಾಲವನ್ನು ಈ ವರ್ಗದ ಜನ ಪ್ರಾಮಾಣಿಕರಾಗಿ ಮರುಪಾವತಿ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ಕೆಲವೇ ದಿನಗಳಲ್ಲಿ ಚಾಲ್ತಿ ಖಾತೆ ಕೊರತೆಯನ್ನು 70 ಬಿಲಿಯನ್ ಡಾಲರ್‌ಗೆ ತಗ್ಗಿಸಲಾಗುವುದು ಹಾಗೂ ಅಭಿವೃದ್ಧಿ ದರವನ್ನು ಶೇ.8ರ ದರದಲ್ಲಿ ಕಾಯ್ದುಕೊಳ್ಳಲಾಗುವುದು. ಮುಂದಿನ ವರ್ಷ ದೇಶದ ಆರ್ಥಿಕ ಅಭಿವೃದ್ಧಿ ದರ ಶೇ.6 ರಿಂದ 7ಕ್ಕೆ ಮುಟ್ಟಲಿದ್ದು, ಎರಡನೆ ವರ್ಷದಲ್ಲಿ ಶೇ.8ರಷ್ಟು ಅಭಿವೃದ್ಧಿ ದರ ಕಾಯ್ದುಕೊಳ್ಳಲಾಗುವುದು ಎಂದರು.

Chidambaram bang- Oct5-2013-001

ಸಮಾರಂಭದಲ್ಲಿ ಎಸ್‌ಬಿಎಂ ಅಧ್ಯಕ್ಷ ಶರತ್‌ಶರ್ಮ ಮಾತನಾಡಿ, ಶತಮಾನೋತ್ಸವದ ಅಂಗವಾಗಿ ಇಂದು 101 ಶಾಖೆಗಳನ್ನು ಆರಂಭಿಸಲಾಗಿದೆ. ಇದರಲ್ಲಿ 32 ಶಾಖೆಗಳು ಅರೆನಗರ ಪ್ರದೇಶಕ್ಕೆ ಹಾಗೂ 31 ಶಾಖೆಗಳು ಗ್ರಾಮೀಣ ಭಾಗಕ್ಕೆ, 2 ಶಾಖೆಗಳು ಎನ್‌ಆರ್‌ಐ, 11 ಕಾರ್ಪೊರೇಟ್ ಶಾಖೆಗಳು ಸೇರಿದಂತೆ 101 ಶಾಖೆಗಳನ್ನು ಇಂದು ಉದ್ಘಾಟನೆ ಮಾಡಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಎಸ್‌ಬಿಐ ಅಧ್ಯಕ್ಷ ವಿಶ್ವನಾಥ್ ಕೂಡ ಹಾಜರಿದ್ದರು.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (1) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ ವಾರ್ತಾ ವಿಭಾಗ ದುಬೈ, ಗಲ್ಫ್

ಗಲ್ಫ್ ಕನ್ನಡಿಗ ವಾರ್ತಾ ವಿಭಾಗ ದುಬೈ... ಹೆಚ್ಚಿನ ಮಾಹಿತಿಗೆ - Contact: uae@gulfkannadiga.com