ಮೈಸೂರು ದಸರಾ ಗಜಪಯಣಕ್ಕೆ ಚಾಲನೆ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಹಬ್ಬದ ಜಂಬೂ ಸವಾರಿಯಲ್ಲಿ ಭಾಗವಹಿಸುವ ಆನೆಗಳ ಮೊದಲ ತಂಡದ ’ಗಜಪಯಣ’ಕ್ಕೆ ಶುಕ್ರವಾರ ಹುಣಸೂರು ತಾಲೂಕು ವೀರನಹೊಸಹಳ್ಳಿ ನಾಗಪುರ ಗಿರಿಜನ ಶಾಲೆ ಬಳಿ ಚಾಲನೆ ನೀಡಲಾಯಿತು.

ರಾಹುಕಾಲ ಮುಗಿದ ಬಳಿಕ ಮಧ್ಯಾಹ್ನ 12.10ಕ್ಕೆ ಸರಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎ. ರಾಮದಾಸ್‌ ಪೂಜೆ ಸಲ್ಲಿಸಿ, ಆನೆಗಳಿಗೆ ಬೆಲ್ಲ, ಕಬ್ಬು ತಿನ್ನಿಸಿ, ಪುಷ್ಪ$ವೃಷ್ಟಿಯ ಮೂಲಕ ಗಜಪಯಣವನ್ನು ಉದ್ಘಾಟಿಸಿದರು.

12 ಗಂಟೆಗೆ ಸರಿಯಾಗಿ ಆಗಮಿಸಿದ ಸಚಿವರು ಹಾಗೂ ಗಣ್ಯರನ್ನು ಪೂರ್ಣಕುಂ¸? ಸ್ವಾಗತ ನೀಡಲಾಯಿತು. ವೀರಗಾಸೆ ಕಲಾವಿದರು, ಮಂಗಳವಾದ್ಯ ತಂಡದವರು ಉದ್ಘಾಟನಾ ಸಮಾರಂಭಕ್ಕೆ ವಿಶೇಷ ಮೆರಗು ನೀಡಿದರು. ಹುಣಸೂರು, ಎಚ್‌.ಡಿ. ಕೋಟೆ ಹಾಗೂ ಮೈಸೂರು ತಾಲೂಕಿನ ನಾಗರಿಕರು, ಮಹಿಳೆಯರು, ಮಕ್ಕಳು ಹಾಜರಿದ್ದರು. ದಸರಾ ಗಜಪಯಣ ಉದ್ಘಾಟನಾ ಸಮಾರಂಭದಲ್ಲಿ ಟಿಬೇಟಿಯನ್‌ ನಿರಾಶ್ರೀತರು, ವಿದೇಶಿಯರು ಪಾಲ್ಗೊಂಡು, ಸಂತಸದ ಕ್ಷಣಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಶ್ರಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಮೊದಲ ತಂಡದಲ್ಲಿ ಆರು ಆನೆಗಳ ತಂಡ ಮೈಸೂರು ಸೇರಲಿವೆ. ಸಮಾರಂಭದಲ್ಲಿ ಹಾಜರಿದ್ದ ನಾಲ್ಕು ಆನೆಗಳು ಹಾಗೂ ಕೆ. ಗುಡಿಯಿಂದ ಇನ್ನೆರಡು ಆನೆಗಳು ನೇರ ಮೈಸೂರಿನ ಅರಣ್ಯ ಇಲಾಖೆಯ ಶ್ರೀಗಂಧ ಕೋಟಿಗೆ ಆಗಮಿಸಿ ವಿಶ್ರಾಂತಿ ಪಡೆಯಲಿದ್ದು, ಸೆ. 10ರಂದು ಅರಮನೆಗೆ ಅವುಗಳನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಗುತ್ತದೆ.

ಜಿ.ಪಂ.ಅಧ್ಯಕ್ಷೆ ಬಾಗ್ಯ ಶಿವಮೂರ್ತಿ, ಮೇಯರ್‌ ಎಂ.ಸಿ. ರಾಜೇಶ್ವರಿ, ಹುಣಸೂರು ಶಾಸಕ ಎಚ್‌.ಪಿ. ಮಂಜುನಾಥ್‌, ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಅಧ್ಯಕ್ಷ ಜಿ.ಟಿ. ದೇವೇಗೌಡ, ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ನಂಜುಂಡಸ್ವಾಮಿ, ಜಿಲ್ಲಾಧಿಕಾರಿ ಪಿ.ಎಸ್‌. ವಸ್ತ್ರದ್‌, ಪಾಲಿಕೆ ಆಯುಕ್ತ ಡಾ.ಎಂ.ಆರ್‌. ರವಿ, ಮುಡಾ ಆಯುಕ್ತ ಡಾ.ಸಿ.ಜೆ. ಬೆಟಸೂರ ಮಠ, ನಗರ ಪೊಲೀಸ್‌ ಆಯುಕ್ತ ಕೆ.ಎಲ್‌. ಸುಧೀರ್‌, ಜಿ.ಪಂ.ಸಿ‌ಇ‌ಒ ಡಾ. ಅಜ¿… ನಾಗಭೂಷಣ್‌, ಎಸ್ಪಿ ಆರ್‌. ದಿಲೀಪ್‌, ಹುಲಿ ಸಂರಕ್ಷಣೆ ಯೋಜನಾಧಿಕಾರಿ ಬಿ.ಜೆ. ಹೊಸಮಠ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾರ್ಕಂಡೆಯ, ಪ್ರಭಾರ ಡಿಸಿಪಿ ದೇವರಾಜ್‌ ಸಹಿತ ಹಿರಿಯ ಅಧಿಕಾರಿಗಳು, ತಾಲೂಕು ಪಂಚಾಯಿತಿ, ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಜಿ.ಪಂ.ಉಪಾಧ್ಯಕ್ಷರು, ಸದಸ್ಯರು ಹಾಜರಿದ್ದರು.

ಇವು ಜಂಬೂ ಸವಾರಿಯಲ್ಲಿ ಭಾಗವಹಿಸುವ 12 ಆನೆಗಳು

ಬಲರಾಂ : ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿ ಹೊರಲಿರುವ ಬಲರಾಂ (54) ಅಂದಾಜು ತೂಕ 4950, ತಿತಿಮತಿ ಆನೆ ಶಿಬಿರ, 1977ರಲ್ಲಿ ಕೊಡಗು ಜಿಲ್ಲೆ ಕಟ್ಟೆಪುರದಲ್ಲಿ ಹಿಡಿಯಲಾಗಿತ್ತು. 16 ವರ್ಷಗಳಿಂದ ಭಾಗವಹಿಸುತ್ತಿರುವ ಈ ಆನೆ 12 ವರ್ಷಗಳಿಂದ ಚಿನ್ನದ ಅಂಬಾರಿ ಹೋರುತ್ತಿದ್ದು, ಈ ಬಾರಿ ಕೂಡ ಇದೇ ಆನೆ ಅಂಬಾರಿ ಹೊರಲಿದೆ.

ಅಭಿಮನ್ಯು : ತಿತಿಮತಿ ಆನೆ ಶಿಬಿರದ 46ರ ಹರೆಯದ ಅಭಿಮನ್ಯು 1987ರಲ್ಲಿ ಕೊಡಗು ಜಿಲ್ಲೆ ಹೆಬ್ಬಳದಲ್ಲಿ ಸಿಕ್ಕಿದ್ದು, ಅಂದಾಜು 4320 ಕೆಜಿ ತೂಕವಿದೆ. ಕಾಡಾನೆ ಹಿಡಿದು ಪಳಗಿಸುವಲ್ಲಿ ಪರಿಣಿತಿ ಪಡೆದಿರುವ ಅಭಿಮನ್ಯು, 13 ವರ್ಷಗಳಿಂದ ದಸರಾ ಹಬ್ಬದಲ್ಲಿ ಭಾಗವಹಿಸುತ್ತಿದೆ.

ಅರ್ಜುನ : 1968ರಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಖೆಡ್ಡಾಕ್ಕೆ ಬಿದ್ದಿದ್ದ 52 ವರ್ಷದ ಅರ್ಜುನ ಬಳ್ಳೆ ಆನೆ ಶಿಬಿರದ್ದು. 4820 ಕೆ.ಜಿ. ತೂಕದ ಈ ಅರ್ಜುನ ಒಂದು ಬಾರಿ ಚಿನ್ನದ ಅಂಬಾರಿ ಹೊತ್ತಿರುವ ಅನುಭವ ಹೊಂದಿದ್ದು, ಅನೇಕ ವರ್ಷಗಳಿಂದ ದಸರಾದಲ್ಲಿ ಭಾಗವಹಿಸುತ್ತಿದೆ.

ಗಜೇಂದ್ರ: ಕೆ. ಗುಡಿ ಆನೆ ಶಿಬಿರದ 57 ವರ್ಷದ ಗಜೇಂದ್ರ 4560 ಕೆ.ಜಿ. ತೂಕವಿದೆ. ಇದನ್ನು 1987ರಲ್ಲಿ ಕಟ್ಟೆಪುರದಲ್ಲಿ ಹಿಡಿಯಲಾಗಿದೆ. ಕಾಡಾನೆ ಪಳಗಿಸುವ ಗಜೇಂದ್ರ ಅತ್ಯಂತ ಬಲಿಷ್ಠ ಆನೆ. 15 ವರ್ಷಗಳಿಂದ ದಸರಾದಲ್ಲಿ ಭಾಗವಹಿಸುತ್ತಿದ್ದು, ಉತ್ಸವದ ಪಟ್ಟದ ಆನೆ ಜವಾಬ್ದಾರಿ ಹೊತ್ತಿರುತ್ತದೆ.

ಶ್ರೀರಾಮ: ಕೆ.ಗುಡಿಯ 55 ವರ್ಷದ ಶ್ರೀರಾಮ 4450 ಕೆ.ಜಿ. ತೂಕವಿದೆ. ತಿತಿಮತಿ ಅರಣ್ಯ ಪ್ರದೇಶದಲ್ಲಿ ಇದನ್ನು 1969ರಲ್ಲಿ ಹಿಡಿಯಲಾಗಿದೆ. ತುಂಬಾ ಧೈರ್ಯ ಶಾಲಿ ಆನೆ ಇದೆಂದು ಅರಣ್ಯಾಧಿಕಾರಿಗಳು ಬಣ್ಣಿಸಿದ್ದಾರೆ. 15 ವರ್ಷಗಳಿಂದ ಉತ್ಸವದಲ್ಲಿ ಭಾಗವಹಿಸುತ್ತಿರುವ ಈ ಆನೆಯನ್ನು ಅರಮನೆ ಪೂಜಾ ವಿಧಿ ವಿಧಾನಗಳಲ್ಲಿ ಬಳಸಿಕೊಳ್ಳಲಾಗುತ್ತದೆ.

ವಿಜಯ: ದುಬಾರೆ ಆನೆ ಶಿಬಿರದ 54 ವರ್ಷದ ಹೆಣ್ಣಾನೆ ವಿಜಯ 3250 ಕೆ.ಜಿ. ತೂಕವಿದ್ದು, ಸೌಮ್ಯ ಸ್ವಭಾವನ್ನು ರೂಢಿಸಿಕೊಂಡಿದೆ. 1963ರಲ್ಲಿ ದುಬಾರೆ ಅರಣ್ಯದಲ್ಲಿ ಇದನ್ನು ಹಿಡಿಯಲಾಗಿದ್ದು, ಏಳು ವರ್ಷಗಳಿಂದ ಉತ್ಸವದಲ್ಲಿ ಾಗವಹಿಸುತ್ತಿದೆ.

ವಿಕ್ರಮ: ದುಬಾರೆ ಆನೆ ಶಿಬಿರದ 40 ವರ್ಷದ, 3820 ತೂಕದ ವಿಕ್ರಮ 1990ರಲ್ಲಿ ದೊಡ್ಡಬೆಟ್ಟದಲ್ಲಿ ಹಿಡಿಯಲಾಗಿದ್ದು, ಕಳೆದ ಎಂಟು ವರ್ಷಗಳಿಂದ ದಸರಾದಲ್ಲಿ ಭಾಗವಹಿಸಿದ ಅನುಭವ ಪಡೆದಿದೆ.

ಹರ್ಷ: 46 ವರ್ಷದ, ದುಬಾರೆ ಆನೆ ಶಿಬಿರದ ಹರ್ಷ, 3290 ಕೆ.ಜಿ. ತೂಕವಿದ್ದು, 1990ರಲ್ಲಿ ದೊಡ್ಡಬೆಟ್ಟ ಪ್ರದೇಶದಲ್ಲಿ ಹಿಡಿಯಲಾಗಿದೆ. 10 ವರ್ಷಗಳಿಂದ ದಸರಾದಲ್ಲಿ ಭಾಗವಹಿಸುತ್ತಿದೆ.

ಕಾವೇರಿ: ದುಬಾರೆ ಕಾವೇರಿ 3152 ಕೆ.ಜಿ. ತೂಕವಿದ್ದು, 34 ವರ್ಷವಾಗಿದೆ. 2009ರಲ್ಲಿ ಸೋಮವಾರ ಪೇಟೆ ಆಡಿನಾಡೂರಲ್ಲಿ ಇದನ್ನು ಹಿಡಿಯಲಾಗಿದ್ದು, 2ನೇ ಬಾರಿ ದಸರಾದಲ್ಲಿ ಭಾಗವಹಿಸುತ್ತಿದೆ.

ಕಾಂತಿ: ದಸರಾ ಆನೆಗಳಲ್ಲಿಯೆ ಹಿರಿಯ ಆನೆ ಎಂಬ ಹೆಗ್ಗಳಿಕೆಯ ಕಾಂತಿ ಬಂಡೀಪುರ ಆನೆ ಶಿಬಿರದ್ದಾಗಿದ್ದು, 3290 ಕೆ.ಜಿ. ತೂಕವಿದೆ. 1968ರಲ್ಲಿ ಖೆಡ್ಡಾ ಮೂಲಕ ಇದನ್ನು ಹಿಡಿಯಲಾಗಿತ್ತು. 9 ಬಾರಿ ದಸರಾದಲ್ಲಿ ಭಾಗವಹಿಸಿದ ಅನುಭವ ಪಡೆದಿದೆ.

ಚೈತ್ರ: ಬಂಡೀಪುರ ಆನೆ ಶಿಬಿರದ ಚೈತ್ರ 41 ವರ್ಷದ್ದಾಗಿದ್ದು, 3462 ಕೆ.ಜಿ.ತೂಕವಿದೆ. ಶಾಂತ ಸ್ವಭಾವದ ಚೈತ್ರ ಎರಡನೇ ಬಾರಿ ದಸರಾದಲ್ಲಿ ಭಾಗವಹಿಸುತ್ತಿದೆ.

ಗೋಪಾಲ ಸ್ವಾಮಿ: ತಿತಿಮತಿ ಆನೆಶಿಬಿರದಲ್ಲಿ 3242 ಕೆ.ಜಿ.ತೂಕದ ಗೋಪಾಲ ಸ್ವಾಮಿ 30 ವರ್ಷದ್ದಾಗಿದ್ದು, ಶಾಂತ ಹಾಗೂ ಬಲಶಾಲಿ ಆನೆಯಾಗಿದೆ. ಸಕಲೇಶಪುರದ ಹೆತ್ತೂರಿನಲ್ಲಿ 2009ರಲ್ಲಿ ಹಿಡಿದಿದ್ದ ಈ ಆನೆ ಮೊದಲ ಬಾರಿಗೆ ಈ ಬಾರಿ ದಸರಾದಲ್ಲಿ ಭಾಗವಹಿಸುತ್ತಿದೆ.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)
ಅಶ್ವಿನಿ

About ಅಶ್ವಿನಿ