ಮುಂದಿನ ಕೇಂದ್ರ ಸಂಪುಟ ಸಭೆ ತಿಹಾರ್ ಜೈಲಿನಲ್ಲಿ! ; ಡಿವೈಎಫ್‌ಐ 9ನೆ ಅಖಿಲ ಭಾರತ ಸಮ್ಮೇಳನದಲ್ಲಿ ಯೆಚೂರಿ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಬೆಂಗಳೂರು, ಸೆ. 11: ಕೇಂದ್ರ ಯುಪಿಎ ಸರಕಾರ ಅಲಿಬಾಬಾ ಮತ್ತು 40 ಕಳ್ಳರ ತಂಡದಂತ್ತಿದ್ದು, ಮುಂದಿನ ಕೇಂದ್ರ ಸಂಪುಟ ಸಭೆ ತಿಹಾರ್ ಜೈಲಿನಲ್ಲಿ ನಡೆಯಲಿದೆ ಎಂದು ರಾಜ್ಯಸಭಾ ಸದಸ್ಯ ಸೀತಾರಾಮ್ ಯೆಚೂರಿ ವ್ಯಂಗ್ಯವಾಡಿದ್ದಾರೆ.ಮಂಗಳವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ಹಮ್ಮಿಕೊಂಡಿದ್ದ 9ನೆ ಅಖಿಲ ಭಾರತ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕೇಂದ್ರ ಯುಪಿಎ ಸರಕಾರ ಹಗರಣಗಳಲ್ಲಿ ಮುಳುಗಿದ್ದು, ಬಹತೇಕ ಸಚಿವರು ಹಗರಣಗಳ ಪಾಲುದಾರರಾ ಗಿದ್ದಾರೆ. ಕಾಮನ್ವೆಲ್ತ್ ಹಗರಣ, 2ಜಿ ಹಗರಣ, ಕಲ್ಲಿದ್ದಲು ಹಗರಣದಲ್ಲಿ ಸಿಲುಕಿರುವ ಹಲವು ಸಚಿವರು ಕೆಲವೇ ದಿನಗಳಲ್ಲಿ ಜೈಲು ಸೇರಲಿದ್ದಾರೆ ಎಂದು ಯೆಚೂರಿ ಭವಿಷ್ಯ ನುಡಿದರು.

ನಮ್ಮಲ್ಲಿ ಎಪಿಎಲ್ ಹಾಗೂ ಬಿಪಿಎಲ್ ಎಂಬ ಎರಡು ರೀತಿಯ ಭಾರತಗಳಿವೆ. ಬಿಪಿಎಲ್ ಭಾರತದಲ್ಲಿ ಬಡವರನ್ನು ಸುಲಿದು ತಿನ್ನಲಾಗುತ್ತಿದೆ. ಬೆಲೆ ಏರಿಕೆ ಹಾಗೂ ಸಾಲದ ಸುಳಿಗೆ ಸಿಲುಕಿ ಜನರು ತತ್ತರಿಸುತ್ತಿದ್ದಾರೆ. ತೈಲ ಬೆಲೆಯನ್ನು ಏರಿಸುವ ಮೂಲಕ ಖಾಸಗಿ ತೈಲ ಕಂಪೆನಿಗಳಿಗೆ ಹಗಲು ದರೋಡೆಗೆ ಸರಕಾರ ಅವಕಾಶ ಮಾಡಿಕೊಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸಮಾವೇಶದಲ್ಲಿ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ,ಡಿವೈಎಫ್‌ಐ ರಾಷ್ಟ್ರಾಧ್ಯಕ್ಷ ಪಿ.ಶ್ರೀರಾಮಕೃಷ್ಣನ್, ಪ್ರಧಾನ ಕಾರ್ಯದರ್ಶಿ ತಪಸ್ ಸಿನ್ಹಾ, ಮಾಜಿ ಶಾಸಕ ಜಿ.ವಿ.ಶ್ರೀರಾಮ ರೆಡ್ಡಿ, ಕೇರಳದ ಮಾಜಿ ಸಚಿವ ಎಂ.ಎ.ಬೇಬಿ ಸೇರಿದಂತೆ ಹಲವು ವಿದೇಶಿ ಗಣ್ಯರು ಉಪಸ್ಥಿತ ರಿದ್ದರು.

ಕೋಮು ಗಲಭೆಗೆ ಬಿಜೆಪಿ ಸಂಚು; ಅಸ್ಸಾಂ ಗಲಭೆಯ ಹಿಂದೆ ಬಿಜೆಪಿಯ ಕೈವಾಡ’

ಸಂಸತ್ ಚುನಾವಣೆಗೆ ಇನ್ನೂ ಎರಡು ವರ್ಷಗಳು ಬಾಕಿ ಇರುವಾ ಗಲೇ ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿದೆ. ಅಡ್ವಾಣಿ, ನರೇಂದ್ರ ಮೋದಿ, ಸುಷ್ಮಾ ಸ್ವರಾಜ್ ಎಲ್ಲರೂ ಸಹ ಪ್ರಧಾನಮಂತ್ರಿ ರೇಸ್‌ನಲ್ಲಿದ್ದಾರೆ.ಅಡ್ವಾಣಿಯವರಿಗೆ ಪ್ರಧಾನಿಯಾ ಗುವುದು ಸಾಧ್ಯವಿಲ್ಲ ಎಂದು ಗೊತ್ತಾದ ಮೇಲೆ ಹತಾಶರಾಗಿ ಯಾವುದೇ ಪಕ್ಷಕ್ಕೂ ಬಹುಮತ ಸಿಗುವುದಿಲ್ಲ ಎಂದು ಅವರು ನುಡಿಯುತ್ತಿದ್ದಾರೆ ಎಂದು ಯಚೂರಿ ಕುಟುಕಿದರು.

ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಕೋಮು ಗಲಭೆಗಳನ್ನು ಸೃಷ್ಟಿಸಿ ಅಧಿಕಾರಕ್ಕೆ ಬರಲು ಬಿಜೆಪಿ ಸಂಚು ರೂಪಿಸಿದ್ದು, ಅಸ್ಸಾಂ ಗಲಭೆ ಹಿಂದೆ ಬಿಜೆಪಿಯ ಕೈವಾಡವಿದೆ.ಆ ಮೂಲಕ ಚುನಾವಣೆಗಳನ್ನು ಗೆಲ್ಲಲು ಬಿಜೆಪಿ ಸಂಚು ರೂಪಿಸಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ ಮಂಗಳೂರು ವಾರ್ತಾ ವಿಭಾಗ