ಡಿವೈಎಫ್‌ಐ ವತಿಯಿಂದ ಸ್ವಾತಂತ್ರ ಸಂರಕ್ಷಣಾ ಜಾಥಾ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಗೌರಿಬಿದನೂರು, ಸೆ. 11: ಬೆಂಗಳೂರಿನಲ್ಲಿ ಸೋಮವಾರದಿಂದ ಪ್ರಾರಂಭವಾದ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ವತಿಯಿಂದ ನಡೆಯಲಿರುವ 9ನೆ ಅಖಿಲ ಭಾರತ ಸಮ್ಮೇಳನದ ಅಂಗವಾಗಿ ತಾಲೂಕಿನ ವಿದುರಾಶ್ವತ್ಥದ ಸತ್ಯಾಗ್ರಹ ಸ್ಮಾರಕದಿಂದ ಸ್ವಾತಂತ್ರ್ಯ ಸಂರಕ್ಷಣಾ ಜಾಥಾವನ್ನು ಹಿರಿಯ ಸ್ವಾತಂತ್ರ್ಯ ಹೋರಾಟ ಗಾರರಾದ ಬಾದಿಮರಳೂರಿನ ಚಂದ್ರವೌಳಿ ಆರಾಧ್ಯರು ಉದ್ಘಾಟಿಸಿದರು.

ನಂತರ ಅವರು ಈ ಹಿಂದೆ ವಿದುರಾಶ್ವತ್ಥ ಧ್ವಜಾರೋಹಣ ಸತ್ಯಾಗ್ರಹ ಸಂದರ್ಭದಲ್ಲಿ ಹಾಡಿದಂತಹ ಲಾವಣಿಯನ್ನು ನೆನಪಿಸಿಕೊಂಡು ಸುಶ್ರಾವ್ಯವಾಗಿ ಹಾಡಿ ಜಾಥಾ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಹಿರಿಯ ಮಾರ್ಕ್ಸ್‌ವಾದಿ ನಾಯಕ ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಮಾತನಾಡಿ, ಸ್ವಾತಂತ್ರ್ಯ ಬಂದು ಕೇವಲ 65 ವರ್ಷಗಳಲ್ಲಿಯೇ ದೇಶ ಮತ್ತೊಂದು ಸ್ವಾತಂತ್ರ್ಯ ಹೋರಾಟಕ್ಕೆ ಸಜ್ಜಾಗಬೇಕಾದ ಪರಿಸ್ಥಿತಿ ಬಂದೊದಗಿದೆ. ಅಮೆರಿಕ ಸಾಮ್ರಾಜ್ಯ ಶಾಹಿಗಳು ದೇಶದ ಅರ್ಥವ್ಯವಸ್ಥೆಯನ್ನು ನಿಯಂತ್ರಣ ಮಾಡುತ್ತಿದ್ದು, ದೇಶದ ಸಾರ್ವ ಭೌಮತೆಗೆ ದಕ್ಕೆ ಉಂಟಾಗಿದೆ. ಈ ಬಗ್ಗೆ ದೇಶದ ಯುವ ಜನತೆ ಜಾಗೃತರಾಗಿ ದೇಶದ ಸ್ವಾತಂತ್ರ ಉಳಿಸಬೇಕಾದ ಜವಾಬ್ದಾರಿ ಯುವ ಸಮುದಾಯಕ್ಕೆ ಇದೆ ಎಂದರು.

ಜಿಲ್ಲಾ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ, ಜಿ.ಪಂ. ಉಪಾಧ್ಯಕ್ಷೆ, ಸಾವಿತ್ರಮ್ಮ, ಜಿ.ಪಂ.ಸದಸ್ಯೆ ನಾರಾಯಣಮ್ಮ, ಸಿದ್ದಗಂಗಪ್ಪ, ಸಿ.ಸಿ.ಅಶ್ವತ್ಥಪ್ಪ, ಆನೂಡಿ ನಾಗರಾಜ್, ರವಿಚಂದ್ರರೆಡ್ಡಿ, ಒಬಲರಾಜ್, ಶ್ರೀನಿವಾಸರೆಡ್ಡಿ, ಆರ್.ಎನ್.ರಾಜು, ಮುಂತಾದವರು ಭಾಗವಹಿಸಿದ್ದರು.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ ಮಂಗಳೂರು ವಾರ್ತಾ ವಿಭಾಗ