ಪೂಜಾ ಗಾಂಧಿಯವ್ರೇ.. ನಿಮ್ಮ ಸೇವೆ ಸಾಕು: ಕುಮಾರಸ್ವಾಮಿ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಬೆಂಗಳೂರು: ಚಿತ್ರನಟಿ ಪೂಜಾ ಗಾಂಧಿ ಮತ್ತು ತನ್ನ ಬಗ್ಗೆ ಬಿಜೆಪಿ ಸಂಸದ ಆಯನೂರು ಮಂಜುನಾಥ್ ನೀಡಿರುವ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿ ಕಾರಿದರು.

”ದಂಡುಪಾಳ್ಯ ಕ್ವೀನ್ (ಪೂಜಾ ಗಾಂಧಿ) ಇಟ್ಟುಕೊಂಡು ಕುಮಾರಸ್ವಾಮಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಯನೂರು ಮಂಜುನಾಥ್ ಹೇಳಿಕೆ ನೀಡಿದ್ದಾರೆ. ಯಾವ ನಾಯಕಿಯರನ್ನೂ ಕರೆತಂದು ನಾನು ರಾಜಕಾರಣ ಮಾಡಬೇಕಿಲ್ಲ. ಜನರನ್ನು ಸೇರಿಸಬೇಕಿಲ್ಲ. ಇತ್ತೀಚೆಗೆ ನನ್ನ ಹಾಗೂ ಪೂಜಾ ಗಾಂಧಿ ಬಗ್ಗೆ ರಾಜಕೀಯ ವಲಯ, ಸಾಮಾಜಿಕ ತಾಣ ಹಾಗೂ ಮಾಧ್ಯಮಗಳಲ್ಲಿ ಕೆಟ್ಟ ಭಾವನೆ ಬರುವಂತೆ ಚಿತ್ರಿಸಲಾಗುತ್ತಿದೆ. ಹೀಗಾಗಿ ಪೂಜಾ ಗಾಂಧಿ ಅವರೇ… ನಿಮ್ಮ ಸೇವೆ ನಮ್ಮ ಪಕ್ಷಕ್ಕೆ ಸಾಕು” ಎಂದು ಕುಮಾರಸ್ವಾಮಿ ಜೆಡಿಎಸ್ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ನುಡಿದರು.

”ಕೇಶವ ಕೃಪಾ ಕ್ವೀನ್‌ಗಳನ್ನು ಇಟ್ಟುಕೊಂಡು ಶಿವಮೊಗ್ಗದಲ್ಲಿ ಯಾರು ರಾಜಕಾರಣ ಮಾಡಿದ್ದಾರೆ? ಅಪ್ಪ- ಮಗಳು ಎಂದು ಹೇಳಿಕೊಂಡು ಯಾರು ಏನೇನು ಮಾಡುತ್ತಿದ್ದಾರೆ ಇತ್ಯಾದಿ ನಾನು ಚರ್ಚೆ ಮಾಡಲು ಹೋಗುವುದಿಲ್ಲ. ಆದರೆ, ಮಂಜುನಾಥ್ ಅವರು ತಮ್ಮ ಕೀಳು ಅಭಿರುಚಿಯನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡುವುದು ಬೇಡ,” ಎಂದು ತರಾಟೆಗೆ ತೆಗೆದುಕೊಂಡರು.

ಯಾರೋ ಆರೋಪ ಮಾಡುತ್ತಾರೆ ಎಂಬ ಮಾತ್ರಕ್ಕೆ ಪೂಜಾ ಗಾಂಧಿ ಅವರನ್ನು ಬಲಿಪಶು ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆಗೆ, ”ನನ್ನಿಂದ ಅವರ ಬದುಕು ಹಾಳಾಗಬಾರದು. ನೈತಿಕ ಬೆಂಬಲ ಕೊಟ್ಟು ಪಕ್ಷದಲ್ಲಿ ಕೆಲಸ ಮಾಡಿಕೊಂಡಿ ಹೋಗಿ ಎನ್ನುವುಷ್ಟು ಸಮಯವೂ ನನ್ನ ಬಳಿ ಇಲ್ಲ” ಎಂದರು.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ.ಅಂತರ್ಜಾಲ ವರದಿಗಾರರು