ಬಳ್ಳಾರಿ: ಮರು ಮತ ಎಣಿಕೆ ಮುಕ್ತಾಯ: ಬಳ್ಳಾರಿ ಮರುಎಣಿಕೆ: ಕೊನೆಗೂ ಶಾಂತಾಗೆ ಜಯ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಬಳ್ಳಾರಿ, ಸೆ. 15: ಬಳ್ಳಾರಿ ನಗರ ಸಂಸದೀಯ ಕ್ಷೇತ್ರಕ್ಕೆ ನಡೆದಿದ್ದ ಮತದಾನದ ಮರುಎಣಿಕೆಯಲ್ಲಿ ಬಿಜೆಪಿಯ ಜೋಳದರಾಶಿ ಶಾಂತಾ ಭರ್ಜರಿ ಜಯ ದಾಖಲಿಸಿದ್ದಾರೆ.

ಆದರೆ ಫಲಿತಾಂಶವಿನ್ನೂ ಅಧಿಕೃತವಾಗಿ ಹೈಕೋರ್ಟಿನಲ್ಲಿ ಘೋಷಣೆಯಾಗಬೇಕಿದೆ. 

ಈ ಹಿನ್ನೆಲೆಯಲ್ಲಿ ಮಾತನಾಡಿರುವ ಶಾಂತಾ ಅವರು ‘ನನ್ನ ವಿರುದ್ಧ ವೃಥಾ ಆರೋಪ ಮಾಡಿದ್ದರು. ಆದರೆ ಸತ್ಯವೆಂಬುದು ಎಂದೆಂದಿಗೂ ಒಂದೇ. ಅದನ್ನು ಬದಲಾಯಿಸಲು ಯಾರಿದಂಲೂ ಆಗದು’ ಎಂದು ವಿಜಯದ ನಗೆ ಬೀರಿದ್ದಾರೆ.

‘ರೆಡ್ಡಿ ರಿಪಬ್ಲಿಕ್ ಆಫ್ ಬಳ್ಳಾರಿ’ ಎಂದು ಅವಮಾನಿಸಿದ್ದರು. ಆದರೆ ಅದು ಸತ್ಯಕ್ಕೆ ದೂರ ಎಂದು ‘ಪಬ್ಲಿಕ್ ಆಫ್ ಬಳ್ಳಾರಿ’ ಮತ್ತೊಮ್ಮೆ ಘಂಟಾಘೋಷವಾಗಿ ಹೇಳಿದ್ದಾರೆ ಎಂದು ಶಾಂತಾ ಸಂತಸ ವ್ಯಕ್ತಪಡಿಸಿದ್ದಾರೆ. ಶಾಂತಾ ತಮ್ಮ ಆಯ್ಕೆಯನ್ನು ಖಚಿತಪಡಿಸುತ್ತಿದ್ದಂತೆ ಬಳ್ಳಾರಿಯಾದ್ಯಂತ ಅವರ ಅಭಿಮಾನಿಗಳು ಮತ್ತು ಬಿಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ನಡೆಸಿದ್ದಾರೆ.

ಹತಾಶ ಹನುಮಂತಪ್ಪ: ಶಾಂತಾ ಅವರೆದುರು ಕಾಂಗ್ರೆಸ್ಸಿನ ಎನ್.ವೈ. ಹನುಮಂತಪ್ಪ ಪರಾಭವಗೊಂಡಿದ್ದಾರೆ. ಇದನ್ನು ಖುದ್ದು ಹನುಮಂತಪ್ಪ ಖಚಿತಪಡಿಸಿದ್ದು, ಮತ ಎಣಿಕೆ ಕೇಂದ್ರದಿಂದ ಹತಾಶರಾಗಿ ಹೊರನಡೆದಿದ್ದಾರೆ. ಇದರೊಂದಿಗೆ ಬಿಜೆಪಿಯ ಜೆ. ಶಾಂತಾ ಅವರು ಸಂಸದೆಯಾಗಿ ಮುಂದುವರಿಯುವುದು ಖಾತ್ರಿಯಾಗಿದೆ.

ಮೂಲಗಳ ಪ್ರಕಾರ ಎಣಿಕೆ ಕಾರ್ಯ ಎಲ್ಲವೂ ಮುಗಿದಿದ್ದು, ಚುನಾವಣಾಧಿಕಾರಿ ಫಲಿತಾಂಶವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಹೈಕೋರ್ಟಿನಿಂದ ಅಂತಿಮ ಅನುಮೋದನೆ ಪಡೆದು ಅಧಿಕೃತವಾಗಿ ಫಲಿತಾಂಶ ಘೋಷಣೆಯಾಗುವದಷ್ಟೇ ಬಾಕಿಯಿದೆ.

ಮರು ಮತ ಎಣಿಕೆ ಫಲಿತಾಂಶ ಹೀಗಿದೆ:

ಶಾಂತಾ: 4,02,213 ಮತಗಳು
ಹನುಮಂತಪ್ಪ: 3,99,970 ಮತಗಳು

ಬಳ್ಳಾರಿ:  2009ರಲ್ಲಿ ನಡೆದ ಬಳ್ಳಾರಿ (ಪರಿಶಿಷ್ಟ ಪಂಗಡ ಮೀಸಲು) ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಶನಿವಾರ ಬೆಳಿಗ್ಗೆ ಆರಂಭವಾದ ಮರು ಮತ ಎಣಿಕೆಯ ಕಾರ್ಯವು ಮಧ್ಯಾಹ್ನಕ್ಕೆ ಮುಕ್ತಾಯವಾಯಿತು.

2009ರ ಚುನಾವಣೆಯಲ್ಲಿ ಪರಾಭವ ಗೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಎನ್. ವೈ. ಹನುಮಂತಪ್ಪ ಅವರು ಪ್ರತಿ ಸುತ್ತಿನಲ್ಲಿಯೂ ಮುನ್ನಡೆಯನ್ನು ಸಾಧಿಸುತ್ತಾ ಬಂದರು. ಮಧ್ಯಾಹ್ನ ಮರು ಎಣಿಕೆಯ ಎಲ್ಲಾ ಸುತ್ತುಗಳು ಮುಗಿದಿದ್ದು, ಹನುಮಂತಪ್ಪ ಅವರು ಎಣಿಕೆ ಕೇಂದ್ರದಿಂದ ಹೊರನಡೆದರು.

ಬಿಜೆಪಿ ಪಕ್ಷದ ಹಾಲಿ ಸಂಸದೆ  ಜೆ. ಶಾಂತಾ ಅವರು ಮೊದಲ ಸುತ್ತಿನಿಂದ ಕೊನೆಯ ಸುತ್ತಿನವರೆಗೂ ಹಿನ್ನಡೆಯಲ್ಲಿಯೇ ಸಾಗಿದರು.

ಚುನಾವಣಾಧಿಕಾರಿಗಳಿಂದ ಅಂತಿಮವಾಗಿ ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದೆ.

7ನೇ ಸುತ್ತಿನ ಮುಕ್ತಾಯ.

ಕಾಂಗ್ರೆಸ್ ಹಾಗೂ ಸಾರ್ವಜನಿಕರು, ಬಿಎಸ್ಆರ್ ಕಾಂಗ್ರೆಸ್, ರೆಡ್ಡಿ ಸಹೋದರರ ಕುತೂಹಲಕ್ಕೆ ಕಾರಣವಾಗಿರುವ ಬಳ್ಳಾರಿ ಲೋಕಸಭೆಯ ಮರು ಮತ ಎಣಿಕೆ ಕಾರ್ಯ ಶನಿವಾರ ಬೆಳಿಗ್ಗೆ ಆರಂಭಗೊಂಡಿದ್ದು, ಏಳನೇ ಸುತ್ತಿನ ಮುಕ್ತಾಯದ ಹಂತದಲ್ಲಿ ಕಾಂಗ್ರೆಸ್‌ನ ಎನ್.ವೈ.ಹನುಮಂತಪ್ಪ ಅವರು ಬಿಜೆಪಿಯ ಜೆ.ಶಾಂತಾಗಿಂತ ಮುನ್ನಡೆ ಸಾಧಿಸಿದ್ದಾರೆ.

ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ದುಕೊಂಡು ಬಂದಿರುವ ಹನುಮಂತಪ್ಪ, ಪ್ರತಿಸ್ಪರ್ಧಿ ಹಾಗೂ ಹಾಲಿ ಸಂಸದೆ ಜೆ.ಶಾಂತಾ ಅವರಿಗಿಂತ 12,743 ಮತಗಳ ಮುನ್ನಡೆ ಸಾಧಿಸಿದ್ದಾರೆ.

7ನೇ ಸುತ್ತಿನ ಮುಕ್ತಾಯದಲ್ಲಿ ಕಾಂಗ್ರೆಸ್ ಪಕ್ಷದ ಎನ್.ವೈ.ಹನುಮಂತಪ್ಪನವರು 1,78,188 ಮತ ಪಡೆದಿದ್ದರೆ, ಬಿಜೆಪಿಯ ಜೆ.ಶಾಂತಾ ಅವರು 1,65,445 ಮತ ಗಳಿಸಿದ್ದು, ಫಲಿತಾಂಶ ಏನಾಗಲಿದೆ ಎಂಬುದು ಎಲ್ಲರಲ್ಲೂ ಕುತೂಹಲ ಹುಟ್ಟಿಸಿದೆ.

ಏಳನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದ್ದು, ಒಟ್ಟು 18 ಸುತ್ತುಗಳ ಮತ ಎಣಿಕೆ ನಡೆಯಲಿದೆ. ಇನ್ನು ಕೆಲವು ಗಂಟೆಗಳಲ್ಲಿ ಅಂತಿಮ ಫಲಿತಾಂಶ ಹೊರಬೀಳಲಿದೆ.

ನ್ಯಾಯಾಲಯದ ಆದೇಶದಂತೆ ಬಳ್ಳಾರಿ ಲೋಕಸಭೆ ಚುನಾವಣೆಯ ಮರುಮತ ಎಣಿಕೆ ನಡೆಯುತ್ತಿದೆ. ಈ ಸಂಬಂಧ ಚುನಾವಣೆ ಆಯೋಗದಿಂದ ಐದು ಜನ ವೀಕ್ಷಕರನ್ನು ನೇಮಕ ಮಾಡಲಾಗಿದೆ. ವೀಕ್ಷಕರು ಬಳ್ಳಾರಿಗೆ ಆಗಮಿಸಿದ್ದು, ಮಹಾರಾಷ್ಟ್ರದಿಂದ ಹಿರಿಯ ಐಎಎಸ್ ಅಧಿಕಾರಿ ಆರ್.ಎಲ್.ಮೊಹಪಾಲ್ ವಾಲ್ ವೀಕ್ಷಕರಾಗಿ ಆಗಮಿಸಿದ್ದಾರೆ. ಕೇಂದ್ರ ಚುನಾವಣಾ ಆಯೋಗದ ಕಾರ್ಯದರ್ಶಿ ಸುಮಿತ್ ಮುಖರ್ಜಿ ಹಾಜರಿದ್ದಾರೆ.

   ವಿವರ     ಹನುಮಂತಪ್ಪ     ಜೆ. ಶಾಂತಾ     ವ್ಯತ್ಯಾಸ

1ನೇ ಸುತ್ತು     –     –     –
2ನೇ ಸುತ್ತು     51,957     50,236     1,721
3ನೇ ಸುತ್ತು     78,296     74,724     3,572
4ನೇ ಸುತ್ತು     1,01,287     1,01,111     173
5ನೇ ಸುತ್ತು     1,26,760     1,23,635     3,125

2009ರ ಮತ‌ಎಣಿಕೆಯ ವಿವರ:

ಶಾಂತಾ (ಬಿಜೆಪಿ): 4,02,213
ಹನುಮಂತಪ್ಪ (ಕಾಂಗ್ರೆಸ್): 3,99,970
ಟಿ. ನಾಗೇಂದ್ರ (ಬಿ‌ಎಸ್‌ಪಿ): 14,712
ರಾಮಾಂಜಿನಪ್ಪ (ಪಕ್ಷೇತರ): 16,167

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)
ಅಶ್ವಿನಿ

About ಅಶ್ವಿನಿ