ಕುವೈತ್ ನಲ್ಲಿ ವಿವೇಕ್ ಬೆಳ್ಮಣ್ ನವರ ಪ್ರಪ್ರಥಮ ಬಾರಿಗೆ ಸ್ಕೆಚ್ ಕಲಾ-ಪ್ರದರ್ಶನ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಕುವೈತ್: ವಿ ಬೆಳ್ಮಣ್ ಕ್ರಿಯೇಶನ್ಸ್ ವಿಶೇಷ್ ನವರ ಕುವೈಟಿನಲ್ಲಿ ಮೊಟ್ಟ ಮೊದಲ ಬಾರಿಗೆ ಏಕ ವ್ಯಕ್ತಿ ಪೆನ್ಸಿಲ್ ಸ್ಕೆಚ್ ಕಲಾ ಪ್ರದರ್ಶನ ಮಿನಿ ವಂಡರ್ ನ್ಯೂ ಸಾಲ್ಮೀಯ ಪ್ಲೇ ಸ್ಕೂಲ್ ರುಮೈತಿಯದಲ್ಲಿ ವಿಭಿನ್ನ ರೀತಿಯಲ್ಲಿ ಬಹು ಅದ್ದೂರಿಯಾಗಿ ನಡೆಯಿತು.

ಈ ಮಾದರಿಯ ಪ್ರದರ್ಶನ ಕುವೈಟಿನಲ್ಲಿ ಮೊಟ್ಟಮೊದಲ ಬಾರಿಗೆ ಕರ್ನಾಟಕದಂಚಿಗೆ ನಡೆಸಿದ ಹೆಗ್ಗಳಿಕೆ ವಿವೇಕ್ ಶೆಟ್ಟಿ ಬೆಳ್ಮಣ್ ರವರದ್ದಾಗಿದೆ.ಇವರು ತಮ್ಮ ಪ್ರಭುದ್ದತೆಯನ್ನು ತಮ್ಮ ವೈಚಿತ್ರತೆಯಲ್ಲಿ ತೋರಿಸಿಕೊಟ್ಟಿದ್ದಾರೆ.

ಬೆಳಿಗ್ಗೆ ೧೦.೩೦ಗಂಟೆಗೆ ಪ್ರಿಥ್ವಿ ವಿ ಶೆಟ್ಟಿಯವರ ಪ್ರಾರ್ಥನೆಯೊಂಡಿಗೆ ಪ್ರಾರಂಭವಾಗಿ ಮುಖ್ಯ ಅತಿಥಿಗಳಾದ ಶ್ರೀ ಮಾನ್ ಎಚ್.ಕೆ ಮೊಹನ್ ಇಂಡಿಯನ್ ಎಂಬಸಿ ಕುವೈತ್ ಹಾಗೂ ಶ್ರೀ ಮಾನ್ ಬಿ ನಾಗರಾಜ್ ಶೆಟ್ಟಿ(ಮಾಜಿ ಮಂತ್ರಿ ಕರ್ನಾಟಕ ಸರಕಾರ)ರವರ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ ಮುಖ್ಯ ಚಿತ್ರವಾದ ಹನುಮಾನ್ ಚಿತ್ರವನ್ನು ಅನಾವರಣ ಮಾಡುವ ಮೂಲಕ ಪ್ರದರ್ಶನಕ್ಕೆ ಚಾಲನೆ ಕೊಟ್ಟರು.

ವಿ ಬೆಳ್ಮಣ್ ಕ್ರಿಯೇಶನ್ಸ್ -ವಿಶೇಷ್ ನ ಕತ್ರೃ ಹಾಗೂ ಪ್ರಯೋಜಕರಾದ ಶ್ರೀ ವಿವೇಖ್ ಶೆಟ್ಟಿ ಬೆಳ್ಮಣ್ ನವರು ಈ ದಿನದ ಮಹತ್ವ ಹಾಗೂ ಯಾವುದೇ ರೀತಿಯ ಪ್ರಾರಂಭಿಕ ಅಧ್ಯಯನ ಅಥವಾ ತರಬೇತಿಗಳನ್ನೂ ಪಡೆದುಕೊಳ್ಳದೆಯೇ ತಮ್ಮಲ್ಲಿ ಈ ಕಲೆಯನ್ನೊಳವದಿಸಿಕೊಂಡ ವಿಚಾರವನ್ನು ಸೇರಿದ ಮಹಾ ಸಭೆಗೆ ವಿವರಿಸಿ ಸಭಿಕನ್ನೂ ಅಚ್ಚರಿಗೊಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ವೈಶಿಷ್ಟ್ಯಮಯ ಕಲಾಕೃತಿಗಲ ವೀಕ್ಷನೆಯು ಈ ದಿನದ ಮುಖ್ಯ ಕಾರ್ಯಕ್ರಮವಾಗಿತ್ತು. ವಿ ಬೆಳ್ಮಣ್ ನ ಕಲಾ ಚಾತುರ್ಯತೆ ಈ ಕಲಾಕೃತಿಗಳಲ್ಲಿ ಮಿಂಚುತ್ತಿತ್ತು.

ಅತಿಥಿಗಳನ್ನೊಳಗೊಂಡು ವೀಕ್ಷಕರೆಲ್ಲಾ ಕಲಾಕಾರನ ಕೈಚಳಕ ಮೆಚ್ಚಿಕೊಂಡು ಮುಂದೆಯೂ ಇಂತಹ ಪ್ರದರ್ಶನಗಳನ್ನು ನಡೆಸಿಕೊಡುವಂತೆಯೂ ಕೇಳಿಕೊಂಡರು. ವಯಸ್ಸಿಗನುಗುಣವಾಗಿ ಮಕ್ಕಳಿಗೆ ಹಾಗೂ ದೊಡ್ಡವರಿಗೆ ಚಿತ್ರ ಕಲಾ ಸ್ವರ್ಧೆಗಳನ್ನೂ ಹಾಗೂ ವಿಜೇತರಿಗೆ ಬಹುಮಾನಗಳನ್ನಿತ್ತು ಸನ್ಮಾನಿಸಲಾಯಿತು.

ಈ ದಿನದ ಕಲಾಸೊಬಗನ್ನು ಬಿತ್ತರಿಸುವ ಸ್ನರಣ-ಸಂಚಿಕೆಯನ್ನೂ ಇಲ್ಲಿ ಬಿಡುಗಡೆಗೊಳಿಸಲಾಯಿತು.

ಶ್ರೀಮತಿ ಶಾಲಿನಿ ವಿಜಯ ಶೆಟ್ಟಿಯವರು ಈ ದಿನದ ಕಾರ್ಯಕ್ರಮವನ್ನೂ ತುಂಬಾ ಸೊಗಸಾಗಿ ನಡೆಸಿಕೊಟ್ಟಿದ್ದರು.

ಕಾರ್ಯಕ್ರಮದ ಕೊನೆಯದಾಗಿ ಸೇರಿದ ಎಲ್ಲಾ ಜನರಿಗೂ ಹಾಗೂ ಕಾರ್ಯಕರ್ತರಿಗೂ ವಿ.ಬೆಳ್ಮಣ್ ತಮ್ಮ ಮನದಾಳದ ಕೃತಜ್ಞತೆಯನ್ನು ಸಲ್ಲಿಸಿದರು

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)
ಅಶ್ವಿನಿ

About ಅಶ್ವಿನಿ