ಕೂಟ ಮಹಾಜಗತ್ತು ಸಾಲಿಗ್ರಾಮ ಮುಂಬಯಿ ಅಂಗ ಸಂಸ್ಥೆಯವರಿಂದ ಶ್ರೀ ಸತ್ಯನಾರಾಯಣ ಮಹಾ ಪೂಜೆ: ಕರ್ನಾಟಕ ಬ್ಯಾಂಕ್ ಲಿಮಿಟೆಡ್ ಕಾರ್ಯಾಧ್ಯಕ್ಷ ಎ.ಅನಂತಕೃಷ್ಣರಿಗೆ ಸನ್ಮಾನ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಮುಂಬಯಿ ಸೆ.೨೭: ಕೂಟ ಮಹಾಜಗತ್ತು ಸಾಲಿಗ್ರಾಮ ಇದರ ಮುಂಬಯಿ ಅಂಗ ಸಂಸ್ಥೆಯು ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಮುಂಬಯಿ ಉಪನಗರದ ಸಾಂತಾಕ್ರೂಜ್ ಪೂರ್ವದಲ್ಲಿನ ಪ್ರಭಾತ್ ಕಾಲೋನಿ ಇಲ್ಲಿನ  ಶ್ರೀ ಪೇಜಾವರ ಮಠದ ಶಾಖೆಯ ಸಭಾಗೃಹದಲ್ಲಿ ಶ್ರೀ ಸತ್ಯಾನಾರಾಯಣ ಮಹಾ ಪೂಜೆಯನ್ನು ಹಾಗೂ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಪುರೋಹಿತರಾದ ಪುತ್ತೂರು ಕೃಷ್ಣಪ್ರಸಾದ್ ಹೊಳ್ಳ ಅವರು ತಮ್ಮ ಪೌರೋಹಿತ್ಯದಲ್ಲಿ ಶ್ರೀ ಸತ್ಯಾನಾರಾಯಣ ಮಹಾ ಪೂಜೆಯ ನೆರವೇರಿಸಿ ಪ್ರಸಾದವನ್ನು ವಿತರಿಸಿ ಅನುಗ್ರಹಿಸಿದರು.

ದಯಾನಂದ ಹೊಳ್ಳ ಮತ್ತು ಶ್ರೀಮತಿ ನಾಗರತ್ನ ಡಿ.ಹೊಳ್ಳ ಪೂಜಾಧಿಗಳಲ್ಲಿ ಸಹಭಾಗಿಗಳಾಗಿದ್ದರು.

ನಂತರ ನಡೆಸಲಾದ ಸರಳ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಂಕ್ ಲಿಮಿಟೆಡ್ ಇದರ ಕಾರ್ಯಾಧ್ಯಕ್ಷ ಎ.ಅನಂತಕೃಷ್ಣ  ಅವರನ್ನು ಕೂಟದ ಅಧ್ಯಕ್ಷ ಎಂ.ಆರ್ ಮಯ್ಯ, ಉಪಾಧ್ಯಕ್ಷ ಯು.ಎನ್ ಐತಾಳ್ ಮತ್ತು ಕಾರ್ಯದರ್ಶಿ ಪಿ.ಸಿ.ಎನ್ ರಾವ್ ಹಾಗೂ ಪದಾಧಿಕಾರಿಗಳು ಶಾಲು ಹೊದೆಸಿ, ಫಲಪುಷ್ಫ, ಸ್ಮರಣಿಕೆಗಳನ್ನಿತ್ತು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಬಿ.ಎಸ್.ಕೆ.ಬಿ.ಎಸೋಸಿಯೇಶನ್ ಮುಂಬಯಿ ಇದರ ನಿಕಟಪೂರ್ವ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಡಾ| ವ್ಯಾಸರಾಯ ನಿಂಜೂರು, ಹೆಚ್.ಬಿ.ಎಲ್ ರಾವ್, ಕರ್ನಾಟಕ ಬ್ಯಾಂಕ್‌ನ ಮಹಾ ಪ್ರಬಂಧಕ ಎಂ.ಎಸ್.ಮಹಾಬಲೇಶ್ವರ ಭಟ್, ಸಹಾಯಕ ಮಹಾ ಪ್ರಬಂಧಕ ಬಿ.ನಾಗರಾಜ ರಾವ್, ಶ್ರೀ ಪೇಜಾವರ ಮಠದ ಮುಂಬಯಿ ಶಾಖೆಯ ಆಡಳಿತಾಧಿಕಾರಿ ರಾಮದಾಸ ಉಪಾಧ್ಯಾಯ, ಪ್ರಕಾಶ್ ಆಚಾರ್ಯ, ಶ್ರೀಹರಿ ಭಟ್ ಮತ್ತು  ನಿರಂಜನ್ ಮುಂತಾದರು ಹಾಜರಿದ್ದರು.

ಕೂಟ ಮಹಾಜಗತ್ತು ಇದರ  ಅನೇಕ ಭಕ್ತಾಧಿಗಳು ಕಾರ್ಯಕ್ರಮದಲ್ಲಿ  ಭಾಗವಹಿಸಿದ್ದು ಈ ಸಂದರ್ಭದಲ್ಲಿ ಕೂಟದ ಕೋಶಾಧಿಕಾರಿ ರಮೇಶ್ ರಾವ್ ಮತ್ತು ಸದಸ್ಯರುಗಳಾದ ಪಿ.ವಿ ಐತಾಳ್, ಕೆ.ನಾರಾಯಣ ರಾವ್, ಎನ್ ಸೂರ್ಯನಾರಾಯಣ ಮತ್ತು ನಾಗರಾಜ್ ಉಪ್ಪುಂದ ಮುಂತಾದವರು ಉಪಸ್ಥಿತರಿದ್ದರು. ಶ್ರೀಮತಿ ಸಹನಾ ಪೋತಿ ಪ್ರಾರ್ಥನೆಗೈದರು. ಜತೆ ಕಾರ್ಯದರ್ಶಿ ಹೆಚ್.ಕೆ ಕಾರಂತ್ ಸ್ವಾಗತಿಸಿ ಸನ್ಮಾನಿತರನ್ನು ಪರಿಚಯಿಸಿದರು. ಪಿ.ವಿ ಐತಾಳ್  ಕಾರ್ಯಕ್ರಮ ನಿರ್ವಾಹಿಸಿದರು. ಪಿ.ಸಿ.ಎನ್ ರಾವ್ ವಂದಿಸಿದರು.

(ಚಿತ್ರ /  ವರದಿ : ರೋನ್ಸ್ ಬಂಟ್ವಾಳ್)

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)
ಅಶ್ವಿನಿ

About ಅಶ್ವಿನಿ