ಮಮತಾ ಬಂಗಾಳದ ‘ಹೆಣ್ಣುಹುಲಿ’: ಶೀವಸೇನೆ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

 

ಕೇಂದ್ರ ಯುಪಿಎ ಸರಕಾರದ ಬೆಂಬಲ ಹಿಂಪಡೆದಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನು ‘ಬಂಗಾಳದ ಹೆಣ್ಣುಹುಲಿ’ ಎಂದು ಶೀವಸೇನಾ ಪಕ್ಷ ಬಣ್ಣಿಸಿದೆ.

ಕೇಂದ್ರದ ಜನ ವಿರೋಧಿ ನೀತಿಗಳ ವಿರುದ್ಧ ಮಂಗಳವಾರ ಸಿಡಿದೆದ್ದಿದ್ದ ಮಮತಾ, ಯುಪಿಎ ಜತೆಗಿನ ಮೈತ್ರಿ ಮುರಿಯಲು ನಿರ್ಧರಿಸಿದ್ದರು. ಇದರಿಂದಾಗಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ-2 ಸರಕಾರವು ಅಲ್ಪಮತಕ್ಕೆ ಕುಸಿದಿದೆ.

19 ಸದಸ್ಯ ಬಲವನ್ನು ಹೊಂದಿರುವ ಟಿಎಂಸಿ ಬೆಂಬಲ ವಾಪಾಸ್ ಪಡೆದಿರುವ ನಿರ್ಧಾರವನ್ನು ಸ್ವಾಗತಿಸಿರುವ ಎನ್‌ಡಿಎ ಪ್ರಮುಖ ಮಿತ್ರಪಕ್ಷವಾಗಿರುವ ಶೀವಸೇನೆ, ಇದೀಗ ಇತರ ಯುಪಿಎ ಮಿತ್ರಪಕ್ಷಗಳು ಸಹ ಇದೇ ಹಾದಿಯನ್ನು ಹಿಡಿಯಬೇಕು ಎಂದಿದೆ.

ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೊಟ್ಟ ಮಾತಿಗೆ ತಕ್ಕಂತೆ ನಡೆದಿದ್ದಾರೆ. ಈ ಮೂಲಕ ಬಂಗಾಳ ಹೆಣ್ಣುಹುಲಿ ಎನಿಸಿಕೊಂಡಿದ್ದಾರೆ. ಮಮತಾ ನಿರ್ಧಾರವನ್ನು ಶಿವಸೇನೆ ಸ್ವಾಗತಿಸುತ್ತಿದೆ ಎಂದು ಮುಖಂಡ ಸಂಜಯ್ ರಾವುತ್ ತಿಳಿಸಿದ್ದಾರೆ.

ಚಿಲ್ಲರೆ ಉದ್ಯಮದಲ್ಲಿ ಎಫ್‌ಡಿಐಗೆ ಅವಕಾಶ, ಡೀಸೆಲ್ ಬೆಲೆ ಏರಿಕೆ, ಅಡುಗೆ ಸಿಲಿಂಡರ್ ಪೂರೈಕೆಗೆ ಮಿತಿ ಹಾಕಿರುವ ಕೇಂದ್ರ ಸರಕಾರವು ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ 72 ಗಂಟೆಗಳ ಗಡುವನ್ನು ಟಿಎಂಸಿ ನೀಡಿತ್ತು. ಆದರೆ ಕೇಂದ್ರ ಸರಕಾರದಿಂದ ಯಾವುದೇ ಪೂರಕವಾದ ನಿಲುವು ವ್ಯಕ್ತವಾಗದ ಹಿನ್ನಲೆಯಲ್ಲಿ ಮೈತ್ರಿ ಮುರಿಯಲು ಮಮತಾ ನಿರ್ಧರಿಸಿದ್ದರು.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ.ಅಂತರ್ಜಾಲ ವರದಿಗಾರರು