ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)


ಮುಂಬೈ: ಬಿಲ್ಲವ ಜಾಗೃತಿ ಬಳಗದ, ಮುಂಬಯಿ ಇದರ ವತಿಯಿಂದ 158ನೇ ಭ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ಸೆ. 2ರಂದು ಕೇಸ್ಟಿ ಸಭಾಗೃಹ, ಫ಼ೋರ್ಟ್, ಮುಂಬಯಿ ಇಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.

ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಬಿಲ್ಲವ ಜಾಗೃತಿ ಬಳಗದ ಸುರೇಶ್ ಪೂಜಾರಿ ವಹಿಸಿದ್ದು, 11 ವರ್ಷಗಳ ಹಿಂದೆ ಸ್ಥಾಪನೆಗೊಂಡ ಈ ಸಂಸ್ಥೆಯಲ್ಲಿ ಸದಸ್ಯರೆಲ್ಲರೂ  ಸಮಾನತೆ ಕಾಯ್ದುಕೊಂಡು ಉತ್ತಮ ಉದ್ದೇಶವನ್ನು ಹಮ್ಮಿಕೊಂಡು ಸಮಾಜಸೇವೆ ಮಾಡುತ್ತಿರುವುದು ಪ್ರಸಂಶನೀಯ. ಮಂಗಳೂರಿನ ಕುದ್ರೋಳಿ ಕ್ಷೇತ್ರಕ್ಕೆ 100 ವರ್ಷ ಪೂರ್ತಿಯಾಗುತ್ತಿದ್ದು ಸಮಾಜಭಾಂದವರೆಲ್ಲರೂ ಈ ವಿಶೇಷ ಕಾರ್ರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದು ವಿನಂತಿಸುತ್ತಾ, ನಾರಾಯಣ ಗುರುಗಳ ಸಂದೇಶವನ್ನು ಪಾಲಿಸುತ್ತಾ ನಾವು ಮುಂದುವರಿಯೋಣ” ಎಂದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಖ್ಯಾತ ಉದ್ಯಮಿ ಸುರೇಂದ್ರ ಪೂಜಾರಿಯವರು  “ನಾವೆಲ್ಲರೂ ಐಕ್ಯತೆಯಿಂದ ಒಂದಾಗುದರೊಂದಿಗೆ ನಮ್ಮ ಸಮುದಾಯವನ್ನು ಬಲಪಡಿಸಬೇಕು. ಗುರುಗಳ ತತ್ವವನ್ನು ಪಾಲಿಸುತ್ತಿರುವ ನಮ್ಮವರಿಂದ ಅದನ್ನು ಕಾರ್ಯರೂಪಕ್ಕೆ ತರಲು ಸಾಧ್ಯ. ಜಾಗೃತಿ ಬಳಗದಲ್ಲಿ ಉತ್ತಮ ನಾಯಕರಿದ್ದಾರೆ, ಉತ್ತಮ ಸಾಹಿತಿಗಳಿದ್ದಾರೆ. ಇವರೆಲ್ಲರ ಕೂಡುವಿಕೆಯಿಂದ ಬಳಗ ಉತ್ತಮ ಉದ್ದೇಶದಿಂದ ಮುಂದುವರಿಯುತ್ತಿರುವುದು ಸಂತೋಷದ ಸಂಗತಿ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಾಗೃತಿ ಬಳಗದ ಸ್ಥಾಪಕ ಅಧ್ಯಕ್ಷ ಸೂರು ಸಿ. ಕರ್ಕೇರ ಮಾತಾನಾಡುತ್ತಾ “ಬಳಗವು ಸ್ಥಾಪನೆಯಾದ ಅಂದಿನಿಂದಲೇ ಶಿಕ್ಷಣಕ್ಕೆ ಮಹತ್ವ ನೀಡುತಾ ಬಂದಿದ್ದು, ಸಮಾಜದಲ್ಲಿ ವಿದ್ಯಾವಂತರು ಹೆಚ್ಚಾದಾಗ ಆ ಸಮಾಜ ಪ್ರಜ್ನಾವಂತ ಸಮಾಜವಾಗಿ ರೂಪುಗೊಳ್ಳುತ್ತಿದೆ” ಎಂದರು. ಗುರುತು ಪತ್ರಿಕೆಯ ಸಂಪಾದಕ ಬಾಬು ಶಿವ ಪೂಜಾರಿಯವರು ನಾರಾಯಣ ಗುರುಗಳ ಬಗ್ಗೆ ತನ್ನ ವಿಚಾರವನ್ನು ಮಂಡಿಸಿದರು. ಉಪಾಧ್ಯಕ್ಷ ಎನ್.ಟಿ. ಪೂಜಾರಿ ಯವರು ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು ಗೌ. ಕಾರ್ಯದರ್ಶಿ ಡಿ.ಕೆ. ಅಂಚನ್, ಕೋಶಾಧಿಕಾರಿ ಜಿ ಡಿ ಕರ್ಕೇರ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾರದಾ ಎಸ್. ಕರ್ಕೇರ, ಹರೀಶ್ ಜಿ. ಪೂಜಾರಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು

ಪುರುಷೋತ್ತಮ್ ಕೋಟ್ಯಾನ್ ಅತಿಥಿಗಳನ್ನು ಸ್ವಾಗತಿಸಿದರು, ಚಿತ್ರಾಪು ಕೆ. ಎಂ. ಕೋಟ್ಯಾನ್ ಅತಿಥಿಗಳನ್ನು ಪರಿಚಯಿಸಿದರು. ಜೆ.ಎಂ. ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿದರು.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)
ಅಶ್ವಿನಿ

About ಅಶ್ವಿನಿ