ತಿಮ್ಮಪ್ಪನಿಗೆ ಇಸ್ರೊ ಮುಖ್ಯಸ್ಥರ ಮೊರೆ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ತಿರುಪತಿ: ದೇಶದ ಬಾಹ್ಯಾಕಾಶ ಯೋಜನೆಗಳ ಮಹತ್ವದ ಘಟ್ಟ ಎನಿಸಿರುವ 100ನೇ ಬಾಹ್ಯಾಕಾಶ ಸಾಹಸಕ್ಕೆ ಕ್ಷಣಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಯಶ ದೊರಕಿಸುವಂತೆ ತಿಮ್ಮಪ್ಪನನ್ನು ಕೋರಲು ಇಸ್ರೊ ಮುಖ್ಯಸ್ಥ ಕೆ.ರಾಧಾಕೃಷ್ಣನ್ ಅವರು ಶುಕ್ರವಾರ ತಿರುಪತಿಗೆ ಭೇಟಿ ನೀಡಿದ್ದರು.

ರಾಧಾಕೃಷ್ಣನ್ ಅವರು ತಿಮ್ಮಪ್ಪನ ಭಕ್ತರಾಗಿದ್ದು, ಪ್ರತಿಯೊಂದು ಉಪಗ್ರಹದ ಉಡಾವಣೆಗೂ ಮುಂಚೆ ತಿರುಪತಿಗೆ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.

ಫ್ರಾನ್ಸ್‌ನ 720 ಕೆ.ಜಿ. ತೂಕದ ದೂರಸಂವೇದಿ ಉಪಗ್ರಹ ಹಾಗೂ ಜಪಾನ್‌ನ 15 ಕೆ.ಜಿ.ತೂಕದ ವ್ಯೋಮನೌಕೆಯೊಂದನ್ನು ಕಕ್ಷೆಗೆ ಸೇರಿಸುವ ಸಲುವಾಗಿ ಇಸ್ರೊದ ಉಡ್ಡಯನ ವಾಹನ ಪಿಎಸ್‌ಎಲ್‌ವಿ-ಸಿ21 ಶ್ರೀಹರಿಕೋಟಾದಿಂದ ಭಾನುವಾರ ಉಡಾವಣೆಯಾಗಲಿದೆ.

ಈ ಉಡ್ಡಯನ ವಾಹನದ ಪ್ರತಿಕೃತಿಯೊಂದನ್ನು ತಿಮ್ಮಪ್ಪನ ಪಾದದ ಬಳಿಯಿಟ್ಟು, ರಾಧಾಕೃಷ್ಣನ್ ಪ್ರಾರ್ಥನೆ ಸಲ್ಲಿಸಿದರು ಎಂದು ಮೂಲಗಳು ತಿಳಿಸಿವೆ.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ.ಅಂತರ್ಜಾಲ ವರದಿಗಾರರು