ಹೊಸ ವೀಸಾ ನೀತಿಗೆ ಭಾರತ-ಪಾಕ್ ಸಮ್ಮತಿ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಇಸ್ಲಾಮಾಬಾದ್ : ಭಾರತ ಹಾಗೂ ಪಾಕ್ ಹೊಸ ವೀಸಾ ನೀತಿಗೆ ಶನಿವಾರ ಸಹಿ ಬೀಳಲಿದ್ದು, ಇದರಿಂದ ಎರಡು ರಾಷ್ಟ್ರಗಳ ನಡುವಿನ ವೀಸಾ ನಿಯಮಗಳು ಸಡಿಲಗೊಳ್ಳಲಿವೆ.

ಮೂರು ದಿನಗಳ ಭೇಟಿಗಾಗಿ ಇಲ್ಲಿಗೆ ಆಗಮಿಸಿರುವ ಭಾರತದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣಾ ಅವರು ಹೊಸ ವೀಸಾ ನೀತಿಯ ಒಪ್ಪಂದಕ್ಕೆ ಪಾಕಿಸ್ತಾನದ ಒಳಾಡಳಿತ ಸಚಿವ ರೆಹಮಾನ್ ಮಲ್ಲಿಕ್ ಅವರೊಂದಿಗೆ ಶನಿವಾರ ಸಹಿ ಹಾಕುವ ನಿರೀಕ್ಷೆ ಇದೆ.

ಶನಿವಾರ ಬೆಳಿಗ್ಗೆ ಕೃಷ್ಣಾ ಅವರು ಪಾಕ್‌ನ ವಿದೇಶಾಂಗ ಸಚಿವ ಹಿನಾ ರಬ್ಬಾನಿ ಖರ್ ಅವರೊಂದಿಗೆ ಮಾತುಕತೆ ನಡೆಸಿದರು. ಮಾತುಕತೆ ವೇಳೆ ಸಾಮೂಹಿಕ ಭಯೋತ್ಪಾದನೆ, ನಿಧಾನಗತಿಯಲ್ಲಿ ಸಾಗುತ್ತಿರುವ ಮುಂಬೈ ದಾಳಿಯ ಆರೋಪಿಗಳ ವಿಚಾರಣೆ, ವ್ಯಾಪಾರ ಹಾಗೂ ಗಡಿ ಸಂಬಂಧಿತ ವಿಷಯಗಳ ಕುರಿತು ಉಭಯತ್ರರರೂ ಪ್ರಸ್ತಾಪಿಸಿದರು.

ಈ ಮಧ್ಯೆ ಕೃಷ್ಣಾ ಅವರ ಭೇಟಿಯನ್ನು ಪಾಕ್ ಮಾಧ್ಯಮಗಳು ಸ್ವಾಗತಿಸಿವೆ. ಇದರಿಂದ ಎರಡು ರಾಷ್ಟ್ರಗಳ ಮಧ್ಯದ ಬಿಗುವಿನ ವಾತಾವರಣ ಸುಧಾರಿಸಲಿದೆ ಎಂದು ಬಹುತೇಕ ಪಾಕ್ ಪತ್ರಿಕೆಗಳು ವರದಿ ಮಾಡಿವೆ. ಹೊಸ ವೀಸಾ ನೀತಿಗೆ ಪಾಕ್ ಮಾಧ್ಯಮಗಳು ಭಾರಿ ಪ್ರಶಂಸೆ ವ್ಯಕ್ತಪಡಿಸಿವೆ.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)
ಅಶ್ವಿನಿ

About ಅಶ್ವಿನಿ