ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (1) ಸಮ್ಮತ (0) ಅಸಮ್ಮತ (0) ಖಂಡನೆ (1) ಅಭಿಪ್ರಾಯವಿಲ್ಲ (0)

petrol-priceಹೊಸದಿಲ್ಲಿ, ಜೂ.30: ಇರಾಕ್ ಬಿಕ್ಕಟ್ಟು ಅಂತಾ ರಾಷ್ಟ್ರೀಯ ತೈಲ ಮತ್ತು ಕರೆನ್ಸಿ ಮಾರುಕಟ್ಟೆಯ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡು ತ್ತಿರುವ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕೇಂದ್ರ ಸರಕಾರ ಮತ್ತೆ ಏರಿಸಿದೆ.

ಪೆಟ್ರೋಲ್ ಲೀಟರ್‌ಗೆ 1.69 ರೂಪಾಯಿ ಹಾಗೂ ಡೀಸೆಲ್ ಲೀಟರ್‌ಗೆ 50 ಪೈಸೆಯಷ್ಟು ಏರಿಕೆ ಮಾಡಲಾಗಿದೆ. ಸೋಮವಾರ ಮಧ್ಯರಾತ್ರಿಯಿಂದಲೇ ಹೊಸ ಬೆಲೆಗಳು ಅನ್ವಯವಾಗುತ್ತವೆ. ಇದರಲ್ಲಿ ಸ್ಥಳೀಯ ತೆರಿಗೆಗಳು ಮತ್ತು ‘ವ್ಯಾಟ್’ ಸೇರಿಲ್ಲ. ಆದುದರಿಂದ ಬೆಲೆ ಏರಿಕೆಯ ಪ್ರಮಾಣ ನಗರದಿಂದ ನಗರಕ್ಕೆ ಬೇರೆಬೇರೆಯಾಗಿರುತ್ತದೆ.

ಉದಾಹರಣೆಗೆ, ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 73.58 ರೂಪಾಯಿಯಾಗಲಿದ್ದು, 2.02 ರೂಪಾಯಿಯಷ್ಟು ಏರಿಕೆಯಾಗಿದೆ.

ಹಾಗೆಯೇ ಡೀಸೆಲ್ ಬೆಲೆ ಲೀಟರ್‌ಗೆ 57.84 ರೂಪಾಯಿಯಾಗಿದೆ. ಅಂದರೆ 56 ಪೈಸೆ ಏರಿಕೆಯಾದಂತಾಗಿೆ.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (1) ಸಮ್ಮತ (0) ಅಸಮ್ಮತ (0) ಖಂಡನೆ (1) ಅಭಿಪ್ರಾಯವಿಲ್ಲ (0)

About ಗ.ಕ ಮಂಗಳೂರು ವಾರ್ತಾ ವಿಭಾಗ