ಮಾತೃಭೂಮಿಗಾಗಿ ಹುತಾತ್ಮನಾದ ಹವಾಲ್ದಾರ್ ಅಬ್ದುಲ್ ಹಮೀದ್‌ನನ್ನೇ ಮರೆತ ಭಾರತ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಹೊಸದಿಲ್ಲಿ, ಸೆ.11: ಭಾರತ ಮತ್ತು ಪಾಕಿಸ್ತಾನದ ನಡುವೆ 1965ರಲ್ಲಿ ನಡೆದ ಯುದ್ಧದಲ್ಲಿ ತನ್ನ ಮಾತೃಭೂಮಿಯ ರಕ್ಷಣೆಗಾಗಿ ಸೆ.10ರಂದು ವೀರಮರಣವನ್ನು ಹೊಂದಿದ ಹವಾಲ್ದಾರ್ ಅಬ್ದುಲ್ ಹಮೀದ್‌ನನ್ನು ಆತನ ಕುಟುಂಬಿಕರ ಜತೆಗೆ ಒಂದಷ್ಟು ಜನ ಇಂದು ನೆನಪಿಸಿಕೊಳ್ಳುತ್ತಿರಬಹುದು. ಆದರೆ ದೇಶವಾಸಿಗಳು ಧೀಮಂತ ಯೋಧನೊಬ್ಬನನ್ನು ಮಾತ್ರ ಸಂಪೂರ್ಣವಾಗಿ ಮರೆತೇ ಬಿಟ್ಟಿದ್ದಾರೆ.

ಇಂಡೊ-ಪಾಕ್ ಯುದ್ಧದ ವೇಳೆ ವೀರ ಯೋಧ ಅಬ್ದುಲ್ ಹಮೀದ್ ದೇಶ ರಕ್ಷಣೆಗಾಗಿ ಶತ್ರು ದೇಶದ ಹಲವಾರು ಯುದ್ಧ ಟ್ಯಾಂಕರ್‌ಗಳನ್ನು ಸ್ಫೋಟಿಸಿ ಧ್ವಂಸ ಮಾಡಿದ್ದ. ಆತನ ಶೌರ್ಯಕ್ಕಾಗಿ ಭಾರತೀಯ ಸೇನೆ ತನ್ನ ಅತ್ಯುನ್ನತ ಗೌರವವಾದ ಪರಮ ವೀರ ಚಕ್ರವನ್ನು ನೀಡಿತ್ತು.

1966ರಲ್ಲಿ ನಡೆದ ಗಣರಾಜ್ಯೋತ್ಸವದಂದು ಆತನ ಪತ್ನಿ ರಸೂಲನ್ ಬೀಬಿ ಮರಣೋತ್ತರವಾಗಿ ವೀರ ಚಕ್ರ ಪ್ರಶಸ್ತಿಯನ್ನು ಅಂದಿನ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್‌ರಿಂದ ಸ್ವೀಕರಿಸಿದ್ದರು.

ಉತ್ತರ ಪ್ರದೇಶದ ಗಾಝಿಪುರ ಜಿಲ್ಲೆಯ ದಮುಪುರ ಗ್ರಾಮದಲ್ಲಿ 1933ರ ಜುಲೈ 1ರಂದು ಜನಿಸಿದ್ದ ಅಬ್ದುಲ್ ಹಮೀದ್, ಭಾರತೀಯ ಸೇನೆಯ 4ನೆ ಬೆಟಾಲಿಯನ್‌ನಲ್ಲಿ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದರು.

1965ರ ಇಂಡೊ-ಪಾಕ್ ಯುದ್ಧದಲ್ಲಿ ವೀರ ಮರಣವನ್ನು ಹೊಂದಿದ್ದರು.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ ಮಂಗಳೂರು ವಾರ್ತಾ ವಿಭಾಗ