ನಿರಾಶ್ರಿತ ತಮಿಳರ ತ್ವರಿತ ಪುನರ್ವಸತಿ: ರಾಜಪಕ್ಸೆಗೆ ಪ್ರಧಾನಿ ಆಗ್ರಹ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಹೊಸದಿಲ್ಲಿ,ಸೆ.20: ಭಾರತ ಪ್ರವಾಸ ದಲ್ಲಿರುವ ಶ್ರೀಲಂಕಾ ಅಧ್ಯಕ್ಷ ಮಹೀಂದಾ ರಾಜಪಕ್ಸೆ ಗುರುವಾರ ಪ್ರಧಾನಿ ಮನಮೋಹನ್‌ಸಿಂಗ್‌ರನ್ನು ಹೊಸದಿಲ್ಲಿಯಲ್ಲಿ ಭೇಟಿಯಾಗಿ ಪ್ರಮುಖ ದ್ವಿಪಕ್ಷೀಯ ವಿಷಯಗಳ ಬಗ್ಗೆ ಚರ್ಚಿಸಿದರು.

ದ್ವೀಪರಾಷ್ಟ್ರ ಶ್ರೀಲಂಕಾವನ್ನು ದಶಕಗಳಿಂದ ಕಾಡುತ್ತಿರುವ ಜನಾಂ ಗೀಯ ಸಮಸ್ಯೆಗೆ ಪರಿಹಾರ ಹಾಗೂ ತಮಿಳು ನಿರಾಶ್ರಿತರ ಪುನರ್ವಸತಿ ಕಾರ್ಯಗಳನ್ನು ತ್ವರಿತಗೊಳಿಸುವಂತೆ ಮನಮೋಹನ್‌ಸಿಂಗ್ ಶ್ರೀಲಂಕಾ ಅಧ್ಯಕ್ಷರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪ್ರಧಾನಿ ಮನ ಮೋಹನ್‌ಸಿಂಗ್ ರಾಜಪಕ್ಸೆಯವರ ಗೌರವಾರ್ಥ ತನ್ನ ನಿವಾಸದಲ್ಲಿ ಔತಣ ಕೂಟವನ್ನು ಏರ್ಪಡಿಸಿದ್ದರು. ಸಾಂಚಿಯಲ್ಲಿ ಬೌದ್ಧ ವಿಶ್ವವಿದ್ಯಾನಿಲಯದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಮಧ್ಯ ಪ್ರದೇಶ ಸರಕಾರ ಆಹ್ವಾನ ನೀಡಿರುವ ಹಿನ್ನೆಲೆಯಲ್ಲಿ ರಾಜಪಕ್ಸೆ ಭಾರತಕ್ಕಾಗಮಿ ಸಿದ್ದಾರೆ.

ಪ್ರಧಾನಿ ಜೊತೆ ಇಂದು ನಡೆಸಿದ ಸುದೀರ್ಘ ಮಾತುಕತೆಯಲ್ಲಿ ಶ್ರೀಲಂಕಾ ಅಧ್ಯಕ್ಷರು, ತಮಿಳು ನಿರಾಶ್ರಿತರ ಪುನರ್ವ ಸತಿಗಾಗಿ ತನ್ನ ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರ ನೀಡಿದರು. ಏತನ್ಮಧ್ಯೆ ರಾಜಪಕ್ಸೆಯವರ ಭಾರತ ಭೇಟಿಗೆ ವಿವಿಧ ತಮಿಳು ಸಂಘಟನೆ ಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ರಾಜಪಕ್ಸೆ ವಿರುದ್ಧ ಪ್ರತಿಭಟನೆ ನಡೆಸಲು ಸುಮಾರು 1 ಸಾವಿರ ಬೆಂಬಲಿಗರೊಂ ದಿಗೆ ಸಾಂಚಿಗೆ ತೆರಳುತ್ತಿದ್ದ ಎಂಡಿಎಂಕೆ ನಾಯಕ ವೈಕೋ ಅವರನ್ನು ನಾಗಪುರದ ಬಳಿ ಪೊಲೀಸರು ಬಂಧಿಸಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ ಮಂಗಳೂರು ವಾರ್ತಾ ವಿಭಾಗ