ನ್ಯೂಜೆರ್ಸಿಯಲ್ಲಿ ಪಂಚಕಲ್ಯಾಣಪೂರ್ವಕ ಪ್ರತಿಷ್ಠಾನ ಮಹೂತ್ಸವ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಅಮೇರಿಕದ ನ್ಯೂಜೆರ್ಸಿಯಲ್ಲಿನ ಫ್ರಾಂಕ್ಲಿನ್ ಟೌನ್ ನಲ್ಲಿ ನೂತನವಾಗಿ ನಿರ್ಮಿಸಲಾದ ಜಿನಮಂದಿರದಲ್ಲಿ ಭಗವಾನ್ 1008 ಶ್ರೀ ಆದಿನಾಥಸ್ವಾಮಿ, ಪಾಶ್ರ್ವನಾಥ ಸ್ವಾಮಿ ಮತ್ತು ಮಹಾವೀರ ಸ್ವಾಮಿ ಇವರ ಪಂಚಕಲ್ಯಾಣಪೂರ್ವಕ ಪ್ರತಿಷ್ಠಾ ಮಹೋತ್ಸವವು ಜೂನ್ 29, 30 ಮತ್ತು ಜುಲಾಯಿ 1 ರಂದು ಮೂಡುಬಿದರೆಶ್ರೀ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯ ಹಾಗೂ ಪಾವನ ಮಾರ್ಗದರ್ಶನದಲ್ಲಿ ನೆರವೇರಿತು.

ಪ್ರತಿಷ್ಠಾ ಮಹೋತ್ಸವದ ಸಮಾರಂಭದಲ್ಲಿ ದಿವ್ಯ ಸಂದೇಶವನ್ನು ನೀಡಿದ ಮೂಡಬಿದಿರೆಯ ಶ್ರೀಶ್ರೀಗಳು, ಜೈನ ಧರ್ಮದ ಮಹಾನ್ ಆದರ್ಶಗಳಾದ ಅಪರಿಗ್ರಹ, ಅಹಿಂಸೆ, ಮತ್ತು ಸತ್ಯ ಇವು ಮನುಕುಲದ ಸರ್ವತೋಮುಖ ಅಭಿವೃದ್ಧಿಗೆ ಅತ್ಯಗತ್ಯವಾಗಿವೆ . ಜೈನಧರ್ಮವು ತೋರಿಸಿಕೊಟ್ಟ ಮಾರ್ಗದಲ್ಲಿ ನಡೆಯುವ ಮೂಲಕ ಮಾತ್ರ ಮನುಕುಲದ ಉಳಿವು ಸಾಧ್ಯ. ನೀತಿಯುತವಾದ ಬದುಕು ಸಮಾಜಕ್ಕೆ ಶಾಂತಿಯನ್ನು ನೀಡುತ್ತದೆ ಮತ್ತು ಮಾನವನ ಶ್ರೇಯಸ್ಸಿಗೆ ಮತ್ತು ಅಭಿವೃದ್ಧಿಗೆ ದಾರಿ ತೋರಿಸುತ್ತದೆ. ಮನುಕುಲದ ಸರ್ವತೋಮುಖ ಶ್ರೇಯೋಭಿವೃದ್ಧಿಗೆ ನೆರವಾಗುವ ಮಾರ್ಗವನ್ನು ಜಿನಭಗವಂತರು ತೋರಿಸಿಕೊಟ್ಟಿದ್ದಾರೆ ಎ0ದು ನುಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಭರತ್ ಶಾಹ ಅವರು, ಜಗತ್ತಿನ ಬಲವರ್ಧನೆಗೆ ಹಾಗೂ ಪ್ರಗತಿಗೆ ಆಚಾರ್ಯರುಗಳು ಮತ್ತು ಭಟ್ಟಾರಕರು ಕೊಟ್ಟಿರುವ ಆದರ್ಶಗಳು ಪೂರಕ ಎಂದರು.

ಮೂರು ದಿನಗಳ ಕಾಲ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಉತ್ತರ ಅಮೇರಿಕಾದಿಂದ ಬಂದ ಶ್ರಾವಕ-ಶ್ರಾವಕಿಯರಲ್ಲದೆ ಯೂರೋಪು ಮತ್ತು ಆಫ್ರಿಕಾದಿಂದ ಬಂದ ಭಕ್ತರು ಪಾಲ್ಗೊಂಡಿದ್ದರು.

 ಅಮೇರಿಕಾ ಪ್ರವಾಸವನ್ನು ಮುಗಿಸಿ ಶ್ರೀಶ್ರೀಗಳು ಜುಲಾಯಿ 4ರಂದು ಮೂಡಬಿದಿರೆಯ ಶ್ರೀಮಠಕ್ಕೆ ವಾಪಸಾದರು.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ ತಾಂತ್ರಿಕ ನಿರ್ವಾಹಕರು