ಮೆಕ್‍ಡೋನಾಲ್ಡ್ ದೋಹಾ ಲಿಟಲ್ ಸ್ಟಾರ್ ಕನ್ನಡದ ಬಾಲೆ ಸಂಜನಾ ಕಾಮತ್

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಕತಾರ್ ತುಳು ಒಕ್ಕೂಟ ಅಭಿನಂದನೆ

ದೋಹ,ಜು.3:ಅಪ್ರತಿಮ ಸಾಧನೆಯ ಬಾಲೆ ಸಂಜನಾ ಕಾಮತ್ ಮುಡಿಗೆ ಪ್ರತಿಷ್ಠಿತ ಮೆಕ್‍ ಡೋನಾಲ್ಡ್ ದೋಹಾ ಲಿಟಲ್ ಸ್ಟಾರ್ ಕಿರೀಟ ಸಂದಾಯವಾಗಿದೆ.2008ರಲ್ಲಿ ಇದೇ ಸಾಧನೆ ಮಾಡಿದ ಕೀರ್ತಿ ಈ ಬಾಲೆಯದು.ಕತಾರ್ ತುಳು ಒಕ್ಕೂಟದ ಅಧ್ಯಕ್ಷ ಸೀತರಾಮ ಶೆಟ್ಟಿ ಮತ್ತು ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಶ್ರೀಮತಿ ಮತ್ತು ಶ್ರೀ ವಿನಾಯಕ ಕಾಮತ್ ದಂಪತಿಯ ಪುತ್ರಿ,ತುಳುನಾಡ ಅಭಿಮಾನದ ಬಾಲೆ ಸಂಜನಾ ವಿದೇಶಿಯರು ನಡೆಸಿಕೊಟ್ಟ ಈ ಸ್ಪರ್ಧೆಯ ಹಲವು ಸುತ್ತಿನಲ್ಲಿ ಕ್ಯಾಟ್ ವಾಕ್,ಭಾಷಣ, ಸಮೂಹ ನೃತ್ಯ ಮತ್ತು ವ್ಯಯಕ್ತಿಕ ಪ್ರದರ್ಶನ ನೀಡಿದ್ದರು. ಸ್ಪರ್ಧೆಯಲ್ಲಿ ನಟಿ ಮಾಧುರಿ ದೀಕ್ಷಿತ್ ಅವರ ಖ್ಯಾತ ನೃತ್ಯ “ಏಕ್ ದೋ ತೀನ್ “ಗಾಯನದ ಸಂಜನಾ ನೃತ್ಯ ಅತ್ಯಂತ ಗಮನ ಸೆಳೆಯಿತು.

ಈ ಸ್ಪರ್ಧೆಯನ್ನು ಕತಾರಿನಲ್ಲಿ ಅನಿವಾಸಿಗಳಾದ ಭಾರತೀಯರು,ಯೂರೋಪ್ ಮತ್ತು ಪಿಲಿಫೈನ್ಸ್ ಪ್ರಾಯೋಜಕತ್ವದಲ್ಲಿ ಏರ್ಪಡಿಸಲಾಗಿದ್ದು, ತೀರ್ಪುಗಾರರಾಗಿ ಈವರು ಯೂರೋಪಿಯ ನ್ನರು ಮತ್ತು ಓರ್ವ ಪಿಲಿಫೈನ್ಸ್ ಅನಿವಾಸಿಗಳಾಗಿದ್ದರು ಎಂಬುದು ಇನ್ನೊಂದು ವಿಶೇಷ.

ಇದೇ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು  ಮಂಗಳೂರಿನವರೇ ಆದ ಕುಮಾರಿ ಸಾಕ್ಷಿ  ಕಾಮತ್ ತಮ್ಮದಾಗಿಸಿಕೊಂಡಿರುವುದು ತುಳುನಾಡಿನ ಗಂಡು ಮೆಟ್ಟಿದ ಕಲೆಯ ಗೌರವವನ್ನು ಇನ್ನಷ್ಟು ಎತ್ತರಕ್ಕೇರಿಸಿದೆ.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ ತಾಂತ್ರಿಕ ನಿರ್ವಾಹಕರು