ಕತಾರ್‌ ಡ್ಯೂಟಿ ಫ್ರೀ ಬಂಪರ್‌ ಬಹುಮಾನ ಗೆದ್ದ ಭಾರತೀಯ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ದುಬೈ: ಕತಾರ್‌ನಲ್ಲಿ ವಾಸಿಸುತ್ತಿರುವ ಭಾರತೀಯ ಪ್ರಜೆಯೊಬ್ಬರು ಇತ್ತೀಚಿನ ಕತಾರ್‌ ಡ್ನೂಟಿ ಫ್ರೀ(ಕ್ಯೂಡಿಎಫ್) ಡಾಲರ್‌ ಮಿಲಿಯನೇರ್‌ ಡ್ರಾದಲ್ಲಿ ಬಂಪರ್‌ ಬಹುಮಾನ ಗೆದ್ದಿದ್ದಾರೆ.

ಕತಾರ್‌ ಎಮಿರಿ ಏರ್‌ಫೋರ್ನಲ್ಲಿ ವಿಮಾನ ತಂತ್ರಜ್ಞರಾಗಿ ದುಡಿಯುತ್ತಿರುವ ಸತೀಶ್‌ ಬಾಬು ಅವರು ಎಪ್ರಿಲ್‌ನಲ್ಲಿ ದೋಹಾದಿಂದ ತಿರುವನಂತಪುರಕ್ಕೆ ವಿಮಾನವೇರುವ ಮುನ್ನ ತಮ್ಮ ‘ಅದೃಷ್ಟದ ಟಿಕೆಟ್‌’ ಖರೀದಿಸಿದ್ದರು.

ಇಬ್ಬರು ಮಕ್ಕಳ ತಂದೆಯಾಗಿರುವ 50ರ ಹರೆಯದ ಸತೀಶ್‌ ಬಾಬು ಕಳೆದ 15 ವರ್ಷಗಳಿಂದ ಕತಾರ್‌ ದೋಹಾದ ನಿವಾಸಿಯಾಗಿದ್ದಾರೆ. 10 ಲಕ್ಷ ಯುಎಸ್‌ ಡಾಲರ್‌ ಗೆಲ್ಲುವುದಕ್ಕೆ ಟಿಕೆಟ್‌ ಖರೀದಿಸುವುದು ಕಳೆದ ನಾಲ್ಕು ವರ್ಷಗಳಿಂದ ಊರಿಗೆ ಹೊರಟಾಗಲೆಲ್ಲ ತನಗೆ ಹವ್ಯಾಸವಾಗಿ ಬಿಟ್ಟಿತ್ತು.

”ಕೊನೆಗೂ ಬಹುಮಾನ ಗೆದ್ದಿರುವುದಕ್ಕೆ ನನಗೆ ಅತ್ಯಂತ ಸಂತಸವಾಗಿದೆ ಮತ್ತು ಈಗ ನಾನು ನನ್ನನ್ನು ಅದೃಷ್ಟಶಾಲಿಯೆಂದು ಕರೆಯಬಹುದಾಗಿದೆ. ಬಹುಮಾನ ಗೆದ್ದಿರುವುದರಿಂದ ನನಗೆ ಹೆಚ್ಚು ಭದ್ರತೆಯ ಭಾವನೆ ಉಂಟಾಗುತ್ತಿದೆ. ನಾನು ನನ್ನ ಕುಟುಂಬದ ಭವಿಷ್ಯವನ್ನು ಹೆಚ್ಚು ಉತ್ತಮವಾಗಿ ರೂಪಿಸಬಹುದಾಗಿದೆ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ತೊಡಗಿಸಬಹುದಾಗಿದೆ” ಎಂದವರು ನುಡಿದರು.

ಇದೇ ವೇಳೆ ಇನ್ನೋರ್ವ ಭಾರತೀಯ ಆಶಿಷ್‌ ಅಹುಜಾ ಅವರು ಮರ್ಸಿಡಿಸ್‌ ಬೆನ್‌j ಎಸ್‌ಎಲ್‌ಎಸ್‌ ಎಎಂಜಿಯ ಇತ್ತೀಚಿನ ಡ್ರಾದಲ್ಲಿ ಕತಾರ್‌ ಸುಂಕ ಮುಕ್ತ ಕಾರನ್ನು ಗೆದ್ದಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ.ಅಂತರ್ಜಾಲ ವರದಿಗಾರರು