ವಿಕ್ಕಿ ಡೊನರ್ ನಟಿ ಯಾಮಿಗೆ ಅಪಘಾತ…

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಬಾಲಿವುಡ್ ಅಂಗಳಕ್ಕೆ ವಿಕ್ಕಿ ಡೊನರ್ ಚಿತ್ರದ ಮೂಲಕ ಕಾಲಿರಿಸಿದ್ದ ಯಾಮಿ ಗೌತಮ್ ಗೆ ಅಪಘಾತಕ್ಕೀಡಾಗಿದ್ದಾರೆ. ತಮಿಳು ಚಿತ್ರವೊಂದರ ಹಾಡಿನ ಚಿತ್ರೀಕರಣ ಸಂದರ್ಭದಲ್ಲಿ ಉಲ್ಲಾಸದಿಂದ ಉತ್ಸಾಹದಿಂದ ಕುಣಿಯುತ್ತಿದ್ದ ನಟಿ ಯಾಮಿ ಕಾಲಿಗೆ ಬೈಕ್ ಬಡಿದು ಪೆಟ್ಟು ಬಿದ್ದಿದೆ.

ಪಿಟಿ‌ಐ ಮೂಲಗಳ ಪ್ರಕಾರ, ತೀವ್ರ ಪೆಟ್ಟು ತಿಂದ ಯಾಮಿ ಅವರನ್ನು ತಕ್ಷಣವೇ ವೈದ್ಯರ ಬಳಿ ಕರೆದುಕೊಂಡು ಹೋಗಲಾಯಿತು.ಆದರೆ, ಶೂಟಿಂಗ್ ಅರ್ಧಕ್ಕೆ ಇಲ್ಲುವ ಸೂಚನೆ ಸಿಕ್ಕಿದ್ದನ್ನು ಗಮನಿಸಿದ ಯಾಮಿ, ’ನನಗೆ ಹೆಚ್ಚು ಪರಿಣಾಮಕಾರಿ ಮೆಡಿಸನ್ ಕೊಟ್ಟುಬಿಡಿ ಇನ್ನೆರಡು ಗಂಟೆಯಲ್ಲಿ ನಾನು ಶೂಟಿಂಗ್ ಸ್ಥಳಕ್ಕೆ ಹೋಗಬೇಕು ಎಂದು ಡಾಕ್ಟರ್ ಹತ್ತಿರ ಕೇಳಿಕೊಂಡರಂತೆ. ಯಾಮಿಯ ಈ ನಡೆಯಿಂದ ಇಡೀ ಚಿತ್ರತಂಡ ಪ್ರಶಂಸೆಗೆ ಪಾತ್ರವಾಗಿದೆಯಂತೆ.

ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ಉಲ್ಲಾಸ ಉತ್ಸಾಹ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಯಾಮಿ ನಂತರ ಬಾಲಿವುಡ್ ಗೆ ಜಿಗಿದಿದ್ದರು. ಇತ್ತೀಚೆಗೆ ಬಾಲಿವುಡ್ ನಲ್ಲಿ ತುಂಬಾ ಚರ್ಚೆಗೆ ಈಡಾದ ವಿಕ್ಕಿ ಡೊನರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು.

ಮೂಲತಃ ಕಿರುತೆರೆಯಿಂದ ಜನಪ್ರಿಯತೆ ಗಳಿಸಿದ 28 ವರ್ಷದ ಯಾಮಿ, ಯೆ ಪ್ಯಾರ್ ನ ಹೋಗಾ ಕಮ್ ಹಾಗೂ ಚಾಂದ್ ಕೆ ಪಾರ್ ಚಲೋ ಧಾರಾವಾಹಿಗಳ ಮೂಲಕ ಮನೆ ಮಂದಿಗೆ ಚಿರಪರಿಚಿತರು.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)
ಅಶ್ವಿನಿ

About ಅಶ್ವಿನಿ