ಬಹುಕೋಟಿ ಡೀಲ್; 40 ಕೋಟಿ ಒಪ್ಪಂದಕ್ಕೆ ಸೈನಾ ಸಹಿ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

 

ಪ್ರಸ್ತುತ ಭಾರತೀಯ ಕ್ರೀಡಾರಂಗದಲ್ಲಿ ಬಹುಬೇಡಿಕೆಯ ತಾರಾ ಆಟಗಾರ್ತಿ ಎನಿಸಿಕೊಂಡಿರುವ ಸೈನಾ ನೆಹ್ವಾಲ್, ರಿತಿ ಸ್ಫೋರ್ಟ್ಸ್ ಮ್ಯಾನಜ್‌ಮೆಂಟ್ ಕಂಪೆನಿ ಜತೆ 40 ಕೋಟಿ ರೂಪಾಯಿಗಳ ಭಾರಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಈ ಮೂಲಕ ದೇಶದಲ್ಲಿ ಕ್ರಿಕೆಟೇತರ ಕ್ರೀಡೆಯಲ್ಲಿ ತೊಡಗಿಸಿಕೊಂಡವರ ಪೈಕಿ ಅತಿ ಹೆಚ್ಚು ಗಳಿಕೆ ಪಡೆದ ಆಟಗಾರ್ತಿಯೆಂಬ ಹೆಗ್ಗಳಿಕೆಗೆ ಸೈನಾ ಪಾತ್ರವಾಗಿದ್ದಾರೆ.

ರಿತಿ ಸ್ಫೋರ್ಟ್ ಜತೆ ಒಪ್ಪಂದ ಮಾಡಿಕೊಂಡಿರುವುದು ಸಂತಸಕ್ಕೆ ಕಾರಣವಾಗಿದೆ ಎಂದು ಮೂರು ವರ್ಷಗಳ ಒಪ್ಪಂದಕ್ಕೆ ಸಹಿ ಮಾಡಿರುವ ಲಂಡನ್ ಒಲಿಂಪಿಕ್ಸ್ ಕಂಚಿನ ಪದಕಧಾರಿ ಸೈನಾ ತಿಳಿಸಿದರು.

ಈಗ ಸೈನಾ ಒಡಂಬಡಿಕೆ, ಕಾರ್ಪೋರೇಟ್ ಪ್ರೊಫೈಲ್, ಪೇಟೆಂಟ್, ಡಿಜಿಟಲ್ ಹಕ್ಕು, ಬ್ರ್ಯಾಂಡ್ ಸಂಸ್ಥೆಗಳು, ಚಿತ್ರಗಳು ಹಾಗೂ ಇತರ ವಾಣಿಜ್ಯ ಹಕ್ಕುಗಳನ್ನು ನಿರ್ವಹಿಸುವ ಹಕ್ಕನ್ನು ರಿತಿ ಸ್ಫೋರ್ಟ್ ಮ್ಯಾನೇಜ್‌ಮೆಂಟ್ ಕಂಪೆನಿ ಪಡೆದುಕೊಂಡಿದೆ.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ.ಅಂತರ್ಜಾಲ ವರದಿಗಾರರು