ರೆಫ್ರಿ ಮುದುಗಲೆ ನೂತನ ಸಾಧನೆ…

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಕೊಲಂಬೊ: ಐಸಿಸಿ ರೆಫ್ರಿ ರಂಜನ್ ಮುದುಗಲೆ ಅವರು ಐವತ್ತು ಟ್ವೆಂಟಿ೨೦ ಪಂದ್ಯಗಳಿಗೆ ಮ್ಯಾಚ್ ರೆಫ್ರಿಯಾಗಿ ಕಾರ್ಯ ನಿರ್ವಹಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ. ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ನಡುವೆ ಶನಿವಾರ ನಡೆದ ಟ್ವೆಂಟಿ೨೦ ಪಂದ್ಯದಲ್ಲಿ ರೆಫ್ರಿಯಾಗಿ ಕಾರ್ಯ ನಿರ್ವಹಿಸುವ ಮೂಲಕ ಅವರು ಈ ಹಿರಿಮೆಗೆ ಪಾತ್ರರಾಗಿದ್ದಾರೆ.

ಮುದುಗಲೆ ಅವರ ಈ ಸಾಧನೆಗೆ ಸನಿಹದಲ್ಲಿ ಇಂಗ್ಲೆಂಡ್‌ನ ಕ್ರಿಸ್ ಬ್ರಾಡ್ ಇದ್ದಾರೆ. ಇದುವರೆಗೂ ೪೬ ಟ್ವೆಂಟಿ೨೦ ಪಂದ್ಯಗಳಲ್ಲಿ ರೆಫ್ರಿಯಾಗಿ ಕಾರ್ಯ ನಿರ್ವಹಿಸಿರುವ ಅವರು, ಈ ಬಾರಿಯ ಟ್ವೆಂಟಿ೨೦ ಪಂದ್ಯಾವಳಿಯಲ್ಲಿ ಪಾಲ್ಗೊಂಡಿಲ್ಲ. ಹಾಗಾಗಿ, ಅ. ೭ರವರೆಗೆ ನಡೆಯಲಿರುವ ಟ್ವೆಂಟಿ೨೦ ವಿಶ್ವಕಪ್ ಪಂದ್ಯಾವಳಿಯಲ್ಲಿ ಕಾರ್ಯ ನಿರ್ವಹಿಸಲಿರುವ ಮುದುಗಲೆ ಅವರಿಗೆ ಬ್ರಾಡ್‌ಗಿಂತಲೂ ಹೆಚ್ಚು ಅಂತರ ಸಾಧಿಸುವ ಅವಕಾಶವಿದೆ.
ಐಸಿಸಿಯಿಂದ ಪ್ರಧಾನ ಮ್ಯಾಚ್ ರೆಫ್ರಿಯ ಸ್ಥಾನಮಾನ ಪಡೆದಿರುವ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಮುದುಗಲೆ ಅವರು, ಇದುವರೆಗೂ ಒಟ್ಟು ೧೩೬ ಟೆಸ್ಟ್, ೨೬೫ ಏಕದಿನ ಪಂದ್ಯಗಳಿಗೆ ರೆಫ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)
ಅಶ್ವಿನಿ

About ಅಶ್ವಿನಿ