ದೀಪಿಕಾ ಪಡುಕೋಣೆ ಮೇಲೆ ಕಣ್ಣಿಟ್ಟ ’ಕಿಕ್’ ಸಾಜಿದ್

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

‘ಏಕ್ ಥಾ ಟೈಗರ್’ ಚಿತ್ರದ ನಂತರ ಸಲ್ಮಾನ್ ಖಾನ್ ಗ್ರಾಫ್ ಅದೆಷ್ಟು ಏರಿದೆ ಅಂದರೆ ಸನ್ನಿ ಲಿಯೋನ್ ನೋಡಿದರೆ ಬರುವ ಜ್ವರವನ್ನೂ ಮೀರಿಸಿದೆ. ಬಾಲಿವುಡ್ ಬೆಡಗಿಯರು ನಾಮುಂದು ತಾಮುಂದು ಎನ್ನುತ್ತಾ ಸಲ್ಲು ಜೊತೆ ರೊಮ್ಯಾನ್ಸ್ ಮಾಡುವ ತಮ್ಮ ಅಭಿಲಾಷೆಯನ್ನು ಬಹಿರಂಗವಾಗಿಯೇ ಹೇಳಿಕೊಳ್ಳುತ್ತಿದ್ದಾರೆ. ಇದೀಗ ಡೇರ್ ಸ್ಟಾರ್ ದೀಪಿಕಾ ಪಡುಕೋಣೆ ಸರದಿ. ಸಲ್ಲೂ ಜೊತೆ ದೀಪಿಕಾಗೆ ರೊಮಾನ್ಸ್ ಮಾಡಲು ಭಾರಿ ಅರ್ಜೆಂಟ್ ಅಂತೆ!

ಮಾಧ್ಯಮಗಳಿಗೆ ಬಂದ ಸುದ್ದಿ ಪ್ರಕಾರ, ದೀಪಿಕಾ ಪಡುಕೋಣೆ ಇತ್ತೀಚಿಗೆ ತೀರಾ ಹೆಚ್ಚಾಗಿ ಸಲ್ಮಾನ್ ಖಾನ್ ಹೆಸರನ್ನು ಜಪಿಸುತ್ತಿದ್ದಾರೆ, ’ಏಕ್ ಥಾ ಟೈಗರ್’ ಗಳಿಕೆಯಲ್ಲಿ ದಾಖಲೆ ಸ್ಥಾಪಿಸಿದ ಮೇಲಂತೂ ದೀಪಿಕಾರ ಸಲ್ಲೂ ಭಜನೆ ಅದೆಷ್ಟು ಹೆಚ್ಚಾಗಿದೆ ಎಂದರೆ, ಸಲ್ಲೂರ ಮುಂದಿನ ಚಿತ್ರ ’ಕಿಕ್’ ನಾಯಕಿಯಾಗಿ ಆಯ್ಕೆಯಾಗಲು ದೀಪಿಕಾ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಇನ್ನೂ ಪ್ರಯತ್ನ ಫಲ ನೀಡಿಲ್ಲ.

ಸಲ್ಲು ’ಕಿಕ್’ ಚಿತ್ರವನ್ನು ನಿರ್ದೇಶಿಸಲಿರುವ ಸಾಜಿದ್, ಈ ಚಿತ್ರದ ನಾಯಕಿಯಾಗಿ ’ಸೋನಾಕ್ಷಿ ಸಿನ್ಹಾ’ ಹಾಗೂ ’ಏಂಜಲಾ ಜಾನ್ಸನ್’ ಅವರಿಬ್ಬರಲ್ಲಿ ಒಬ್ಬರನ್ನು ಆಯ್ಕೆಮಾಡಲು ನಿರ್ಧರಿಸಿದ್ದರು. ಆದರೆ ’ಸೋನಾಕ್ಷಿ ಸಿನ್ಹಾ’ ಅಭಿನಯದ ಇತ್ತೀಚಿನ ಚಿತ್ರ ’ಜೋಕರ್’ ಬಾಕ್ಸ್ ಆಫೀಸ್ ನಲ್ಲಿ ಅಷ್ಟೇನೂ ಸದ್ದು ಮಾಡದಿದ್ದರಿಂದ ಶಾಜಿದ್ ಈಗ ಸೋನಾಕ್ಷಿ ಬಗ್ಗೆ ಮೀನಮೇಷ ಎಣಿಸುತ್ತಿದ್ದಾರೆ.

ಇತ್ತ, ದೀಪಿಕಾ ಪಡುಕೋಣೆ ಅಭಿನಯದ ’ಕಾಕ್ ಟೈಲ್’ ಚಿತ್ರ ಸಾಕಷ್ಟು ಗೆಲವು ದಾಖಲಿಸಿರುವುದರ ಜೊತೆಗೆ ದೀಪಿಕಾ ಅಭಿನಯದ ಬಗ್ಗೆ ಎಲ್ಲೆಡೆ ಮೆಚ್ಚುಗೆ ಮಾತುಗಳು ಕೇಳಿಬಂದಿವೆ. ಹೀಗಾಗಿ, ಸೋನಾಕ್ಷಿಗಿಂತ ದೀಪಿಕಾರೇ ಒಂದು ಕೈ ಮೇಲೆ ಎಂಬಂಥ ಭಾವನೆ ಸಹಜವಾಗಿ ಸಾಜಿದ್ ಮನದಲ್ಲಿ ಮೂಡಿದೆ. ಈ ಇಬ್ಬರಲ್ಲಿ ಯಾರು ಸಲ್ಮಾನ್ ಖಾನ್ ಜೊತೆ ರೊಮಾನ್ಸ್ ಮಾಡುವ ಅವಕಾಶ ಗಿಟ್ಟಿಸಲಿದ್ದಾರೆ ಎಂಬುದು ಸದ್ಯದ ಪ್ರಶ್ನೆ. ತಕ್ಕಡಿ ದೀಪಿಕಾ ಕಡೆಗೇ ವಾಲುತ್ತಿದೆಯಂತೆ…

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)
ಅಶ್ವಿನಿ

About ಅಶ್ವಿನಿ