ದುಬೈ: ಬೃಹತ್ ಬಾಡಿಗೆ ಮನೆ ವಿತರಣೆ ಹಗರಣ ಕೋಟ್ಯಂತರ ದಿರ್ಹಮ್‌ನೊಂದಿಗೆ ವಂಚಕ ಪರಾರಿ; ಬಾಡಿಗೆದಾರರಿಗೆ ಸಂಕಷ್ಟ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ದುಬೈ, ಸೆ. 6: ಬಾಡಿಗೆದಾರರು ಮತ್ತು ಮನೆ ಮಾಲೀಕರ ನಡುವೆ ದಲ್ಲಾಳಿಯ ಪಾತ್ರ ನಿಭಾಯಿಸಿ ಬೃಹತ್ ಪ್ರಮಾಣದ ಬಾಡಿಗೆ ಹಗರಣವೊಂದನ್ನು ನಡೆಸಿ ಕೋಟಿಗಟ್ಟಲೆ ದಿರ್ಹಮ್‌ನ್ನು ಅಕ್ರಮವಾಗಿ ಜಮಾಯಿಸಿದ ಬಳಿಕ ಮನೆ ದಲ್ಲಾಳಿಯೊಬ್ಬ ಪರಾರಿಯಾಗಿದ್ದಾನೆ. ಇತ್ತೀಚಿನ ವರ್ಷಗಳಲ್ಲೇ ದೇಶದಲ್ಲಿ ನಡೆದ ಅತ್ಯಂತ ದೊಡ್ಡ ಬಾಡಿಗೆ ಹಗರಣವೆನ್ನಲಾದ ಈ ಘಟನೆ ನಡೆದ ಬಳಿಕ ನೂರಾರು ಬಾಡಿಗೆದಾರರು ಮನೆಯಿಂದ ಹೊರಬೀಳುವ ಭೀತಿಯನ್ನು ಎದುರಿಸುತ್ತಿದ್ದಾರೆ.

ಹಗರಣದ ಸಂತ್ರಸ್ತರು ತಮ್ಮ ಸಂಕಷ್ಟಗಳನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಹಲವಾರು ಮನೆ ಮಾಲೀಕರು ದುಬೈ ಮುನಿಸಿಪಾಲಿಟಿಯ ಬಾಡಿಗೆ ಸಮಿತಿಗೆ ಎಚ್.ಎಂ.ಕೆ.,43 ಎಂಬಾತನ ವಿರುದ್ಧ ದೂರು ನೀಡಿದ್ದಾರೆ. ಸಂತ್ರಸ್ತರೂ ಶಂಕಿತನ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.

ಈ ಇಡೀ ಹಗರಣವನ್ನು ಭಾರೀ ಜಾಗರೂಕತೆಯಿಂದ ಹೆಣೆಯಲಾಗಿದೆ ಎಂದು ಸಂತ್ರಸ್ತರು ಹೇಳುತ್ತಾರೆ. ವಂಚಕ ನೀಡಿರುವ ಪಾಸ್‌ಪೋರ್ಟ್ ಪ್ರತಿಯ ಆಧಾರದಲ್ಲಿ, ಆತನನ್ನು ಸೌದಿ ರಾಷ್ಟ್ರೀಯ ಎಂದು ಹೇಳಲಾಗುತ್ತಿದೆ. ಆದರೆ, ಈ ಪಾಸ್‌ಪೋರ್ಟ್ ನಕಲಿಯಾಗಿರುವ ಸಾಧ್ಯತೆಯೂ ಇದೆ.

ತಾನು ಮನೆ ಮಾಲೀಕ ಎಂದು ಹೇಳಿಕೊಂಡು ವಂಚಕನು ನೂರಾರು ಮನೆಗಳನ್ನು ಒಳ ಬಾಡಿಗೆಗೆ ನೀಡಿದ್ದನು. ವಾಸ್ತವವಾಗಿ, ಈ ಮನೆಗಳನ್ನು ಆತ ಇತರ ಮಾಲೀಕರಿಂದ ಬಾಡಿಗೆಗೆ ಪಡೆದುಕೊಂಡಿದ್ದನು. ‘‘ಆತ ಶುದ್ಧ ಇಂಗ್ಲಿಷ್ ಮಾತನಾಡಿದ’’ ಎಂದು ಮನೆ ಮಾಲೀಕ ಜಿಮ್ಮಿ ಮರಿಯಾನೊ ಹೇಳಿದರು. ಬುರ್ಜ್ ಖಲೀಫದ ಸಮೀಪದ ಬುರ್ಜ್ ಲೋಫ್ಟ್‌ನಲ್ಲಿರುವ ತನ್ನ ಒಂದು ಬೆಡ್‌ರೂಂ ಮನೆಯನ್ನು ಅವರು ಎರಡು ವರ್ಷಗಳಿಂದ ವಂಚಿತನಿಗೆ ಬಾಡಿಗೆಗೆ ನೀಡಿದ್ದರು. ವಂಚಕ ಪ್ರತಿ ತಿಂಗಳು ಬಾಡಿಗೆ ಪಾವತಿಸುತ್ತಿದ್ದ.

ಈ ಮೊದಲು ತಾನು ನೀಡಿರುವ ಚೆಕ್‌ಗಳನ್ನು ಮರಳಿಸುವಂತೆ ವಂಚಕ ಕಳೆದ ತಿಂಗಳು ಮರಿಯಾನೊರಲ್ಲಿ ವಿನಂತಿಸಿದನು. 2012 ಆಗಸ್ಟ್‌ನಿಂದ 2013 ಜನವರಿವರೆಗಿನ ಬಾಡಿಗೆಯುಳ್ಳ ಕಂಪೆನಿ ಚೆಕ್‌ಗಳನ್ನು ತಾನು ಅವುಗಳ ಬದಲಿಗೆ ನೀಡುವುದಾಗಿ ಆತ ಹೇಳಿಕೊಂಡನು. ತನ್ನ ವೈಯಕ್ತಿಕ ಚೆಕ್‌ಗಳನ್ನು ಯಾರೋ ಕದ್ದಿದ್ದಾರೆ ಎಂದು ಆತ ಹೇಳಿಕೊಂಡ ಬಳಿಕ ಚೆಕ್‌ಗಳನ್ನು ಮರಳಿಸಲು ಮರಿಯಾನೊ ಒಪ್ಪಿಕೊಂಡರು.

‘‘ಆತ ಸಭ್ಯನಂತೆ ಕಾಣುತ್ತಿದ್ದುದರಿಂದ ಆತನನ್ನು ನಾನು ನಂಬಿದೆ. ಅದೂ ಅಲ್ಲದೆ, ಎರಡು ವರ್ಷಗಳಿಂದ ಆತ ನಿಯಮಿತವಾಗಿ ಬಾಡಿಗೆ ಪಾವತಿಸುತ್ತಿದ್ದ’’ ಎಂದರು. ಆದರೆ, ಆಗಸ್ಟ್ 31ರ ದಿನಾಂಕ ಹೊಂದಿದ್ದ ಚೆಕ್ ಸೆಪ್ಟಂಬರ್ 3ರಂದು ವಾಪಸ್ಸಾಯಿತು.
ಮರಿಯಾನೊ ದೂರು ಸಲ್ಲಿಸಲು ಬಾಡಿಗೆ ಸಮಿತಿಗೆ ಹೋದಾಗ ಅಲ್ಲಿ ತನ್ನಂತೆಯೇ ಹಲವಾರು ಮನೆ ಮಾಲೀಕರು ಇದ್ದುದನ್ನು ಕಂಡರು. ಅವರ ಕತೆಯೂ ಅದೇ ಆಗಿತ್ತು.

ವಂಚಕನ ಶಮ್‌ಯಾನ ಎಂಟರ್‌ಟೇನ್‌ಮಂಟ್ ಸರ್ವಿಸಸ್ ಎಂಬ ಸಂಸ್ಥೆ ವಿಶ್ವಾಸಾರ್ಹ ದಲ್ಲಾಳಿ ಎಂಬ ಹೆಸರು ಪಡೆದಿತ್ತು. ಆದರೆ, ಕಾರ್ಯಕ್ರಮ ನಿರ್ವಹಣೆಗೆ ಮಾತ್ರ ಅದಕ್ಕೆ ಪರವಾನಿಗೆ ನೀಡಲಾಗಿತ್ತು. ಕಂಪೆನಿಯ ಟೆಕಾಮ್ ಕಚೇರಿ ಈಗ ಮುಚ್ಚಿದೆ.

‘‘ನಾನು ಇನ್ನೊಮ್ಮೆ 60,000 ದಿರ್ಹಮ್ ಬಾಡಿಗೆಯಾಗಿ ನೀಡದಿದ್ದರೆ ಮನೆ ಖಾಲಿ ಮಾಡಿಸುವ ಎಚ್ಚರಿಕೆಯನ್ನು ಮನೆ ಮಾಲೀಕರು ನೀಡಿದ್ದಾರೆ’’ ಎಂದು ಆಸ್ಟ್ರೇಲಿಯನ್ ಕನ್ಸಲ್ಟೇಂಟ್ ಜಾನ್ ಹೇಳಿದರು. ಅವರು ‘ದಿ ಗ್ರೀನ್ಸ್’ನಲ್ಲಿರುವ ತನ್ನ ಒಂದು ಬೆಡ್‌ರೂಮ್ ಮನೆಯ ಬಾಡಿಗೆ ಒಪ್ಪಂದವನ್ನು ಎರಡು ವಾರಗಳ ಹಿಂದೆ ಶಮ್‌ಯಾನಕ್ಕೆ ಒಂದೇ ಚೆಕ್‌ನಲ್ಲಿ ಪೂರ್ಣ ಬಾಡಿಗೆ ಕೊಟ್ಟು ನವೀಕರಿಸಿದ್ದರು.

Authorities probe missing rent funds

Dubai: A firm accused of cheating tenants out of their annual rent money was not a properly licenced real estate company early investigation reveals, says the top official at Real Estate Regulatory Authority (RERA).

Marwan Bin Ghlaita, Chief Executive Officer of RERA, told Gulf News in an exclusive interview yesterday that after receiving up to 15 complaints from residents living in Old Town as well as The Greens, that a company known as Shamyana Entertainment Services was not licenced by the Dubai Land Department.

“We are investigating the case, this is an events company. It is not a proper [real estate] company,” Bin Ghalita said.

Unconfirmed estimates suggest as many as 400 tenants may be forced to seek alternative shelter given that the leases they have signed may not be legally binding.

Before a real estate company is licensed with the Land Department, pointed out Bin Ghalita, it must post a Dh5 million bond as a surety to cover any liabilities stemming from possible wrongdoings and to protect consumer interests.

In this case, Bin Ghalita said since the company did not have a proper real estate licence and no bond was posted making it difficult to recoup losses for tenants who have been unable to track down the owner of the company, identified as a H.M.K.

Officials with RERA are now working with Dubai Economic Department to glean more details about the missing company owner who has left no forwarding address for tenants to make claim.

Calls placed by Gulf News yesterday to the firm went unanswered at the Al Attar Tower on Shaikh Zayed Road.

Consumer protection officials within DED are looking into the missing funds on behalf of out-of-pocket tenants, Bin Ghalita said.

Tenants allege that the company owner asked for a year’s rent up front on properties he sublet and neither the man, nor the money has been seen since. Tenants have complained to Dubai Police and the Dubai Rent Committee and its unclear what recourse remains for people to reclaim lost funds.

The first indication that there was a serious problem appears to have first surfaced, Bin Ghalita said yesterday, when a renting tenant went to the Land Department to register his property but was refused because the events company was not listed as a licenced real estate firm.

Ahmad, 33, an Egyptian who is one of the victims, told Gulf News of the company owner that he and other victims “think he is Syrian, but he showed us all a Saudi passport when we were doing paperwork. We now think it was a fake.”

Ahmad paid one year’s rent to the events company for a one bedroom apartment in the Greens and now faces an uncertain future.

“We do not know what to do, we are not sure if we can make a court case without a lawyer and we are worried about hiring one as lawyers cost a lot of money,” Ahmad said.

Some of victims, he said, have outstanding bills from DEWA, as they paid to pay their bills and the accounts are in his name.

“We are scared that DEWA will cut the water and electricity because of the outstanding charges, and we cannot even pay the bills because it is not in our name.”

He also confided that some of the victims are worried that the events company may have rented the same apartments to more than just one party and more trouble lies ahead.

Ahmad said that after a flurry of conversations with other victims, word among the affected tenant community is that the man in question did not own the apartments.

“Some people rented their homes from him a year ago and before he left, he convinced them to renew their lease by telling them that he would give them two months free rent and other incentives. They renewed and paid the full amount in a single cheque,” Ahmed said.

The victims have created a Facebook page called Shamyana Victims which can be found at

http://www.facebook.com/?ref=logo#!/ShamyanaVictims   which is calling for affected residents to meet tomorrow at Al Thayyal 1 in the Greens at 7 pm.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ.ಅಂತರ್ಜಾಲ ವರದಿಗಾರರು