ದುಬೈಯಲ್ಲಿ ಅದ್ದೂರಿಯ ಪ್ರದರ್ಶನ ಕಂಡ ‘ಧೂಮ್ ಧಮಾಕಾ 2013’; ಹಾಸ್ಯ, ಸಂಗೀತ, ನೃತ್ಯವನ್ನು ಒಂದೇ ಸೂರಿನಡಿ ಕಂಡು ಪುಳಕಿತರಾದ ಪ್ರೇಕ್ಷಕರು: ಕೃಷ್ಣ-ಸುದೇಶ್‌ರಿಂದ ಹಾಸ್ಯ ರಸದೌತಣ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (38) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (4)

Dhoom Dhamaka dubai-Nov 15-2013-233 

ವರದಿ: ಎಂ.ಇಕ್ಬಾಲ್ ಉಚ್ಚಿಲ, ದುಬೈ
ಫೋಟೋ: ಅಶೋಕ್ ಬೆಳ್ಮಣ್

ದುಬೈ, ನ.16: ಒಂದೆಡೆ ನಗುವಿನ ಹೊಣಲು ಹರಿಸುವ ಹಾಸ್ಯ ಕಾರ್ಯಕ್ರಮ…ಇನ್ನೊಂದೆಡೆ ಮನಸ್ಸಿ ಅಹ್ಲಾದಕರ, ಉಲ್ಲಾಸವನ್ನು ಭರಿಸುವ ಸಂಗೀತ ರಸದೌತಣ…ಮತ್ತೊಂದೆಡೆ ನಮ್ಮನ್ನು ಕುಳಿತ ಆಸನದಲ್ಲಿಯೇ ನೃತ್ಯಕ್ಕೆ ಮೈಯೊಡ್ಡುವಂತೆ ಮಾಡಿದ ಅದ್ಭುತ, ಮೈನವರೇಳಿಸುವ ನೃತ್ಯ ಕಾರ್ಯಕ್ರಮ. ಇದೆಲ್ಲವನ್ನು ಒಂದೆ ಕಡೆ ಆಯೋಜಿಸುವ ಮೂಲಕ ನಮ್ಮಲ್ಲಿ ಹೊಸ ಚಿಲುಮೆಯನ್ನು ಹರಿಸಿದ್ದು ದುಬೈ ಆಕ್ಮೆ ಬಿಲ್ಡಿಂಗ್ ಮೆಟಿರಿಯಲ್ಸ್ ಪ್ರಾಯೋಜಕತ್ವದಲ್ಲಿ ನಡೆದ ಖ್ಯಾತ ಹಾಸ್ಯ ಕಲಾವಿದರ ಕಾಮಿಡಿ-ಸಂಗೀತ ಕಾರ್ಯಕ್ರಮ ‘ಧೂಮ್ ಧಮಾಕಾ 2013’.

Dhoom Dhamaka dubai-Nov 15-2013-221

Dhoom Dhamaka dubai-Nov 15-2013-003

Dhoom Dhamaka dubai-Nov 15-2013-060

Dhoom Dhamaka dubai-Nov 15-2013-068

Dhoom Dhamaka dubai-Nov 15-2013-057

Dhoom Dhamaka dubai-Nov 15-2013-238

Dhoom Dhamaka dubai-Nov 15-2013-267

Dhoom Dhamaka dubai-Nov 15-2013-062

Dhoom Dhamaka dubai-Nov 15-2013-061

Dhoom Dhamaka dubai-Nov 15-2013-080

Dhoom Dhamaka dubai-Nov 15-2013-002

Dhoom Dhamaka dubai-Nov 16-2013003

Dhoom Dhamaka dubai-Nov 15-2013-084

Dhoom Dhamaka dubai-Nov 15-2013-045        

Dhoom Dhamaka dubai-Nov 15-2013-049

Dhoom Dhamaka dubai-Nov 15-2013-052

ದುಬೈಯ ಇಂಡಿಯನ್ ಹೈಸ್ಕೂಲ್‌ನ ಶೇಖ್ ರಶೀದ್ ಆಡಿಟೋರಿಯಮ್‌ನಲ್ಲಿ ನಡೆದ ‘ಧೂಮ್ ಧಮಾಕಾ 2013’ ಬಗೆಬಗೆಯ ಕಾರ್ಯಕ್ರಮವನ್ನು ಒಂದೆಸೂರಿನಡಿ ತಂದು ಪ್ರೇಕ್ಷಕರ ಮನಗೆಲ್ಲುವಲ್ಲಿ ಸಂಪೂರ್ಣ ಯಶಸ್ಸನ್ನು ಕಂಡಿರುವುದು ಕಾರ್ಯಕ್ರಮದುದ್ದಕ್ಕೂ ಕಂಡು ಬಂತು.

ಹಾಸ್ಯಲೋಕದ ದಿಗ್ಗಜರೆಂದೇ ಖ್ಯಾತರಾಗಿರುವ ಕೃಷ್ಣ ಮತ್ತು ಸುದೇಶ್(ಸೋನಿ ಟಿವಿಯ ಕಾಮಿಡಿ ಸರ್ಕಸ್‌ನ ವಿಜೇತ/ಬಾಲಿವುಡ್ ನಟರು)ರ ಹಾಸ್ಯಮಯ ಕಾರ್ಯಕ್ರಮ ನೆರೆದ ಪ್ರೇಕ್ಷಕರನ್ನು ಹೊಟ್ಟೆಹುಣ್ಣಾಗುವಷ್ಟು ನಗಿಸಿತು. ಇವರಿಬ್ಬರ ಹಾಸ್ಯ ಚಟಾಕಿ, ನಟನೆ ಬಹಳಷ್ಟು ಮೆಚ್ಚುಗೆಗೆ ಪಾತ್ರವಾಯಿತು.

ದುಬೈಯ ಆಕ್ಮೆ ಬಿಲ್ಡಿಂಗ್ ಮೆಟಿರಿಯಲ್ಸ್‌ನ ಮಾಲಕ ಹಾಗೂ ಖ್ಯಾತ ಹಾಡುಗಾರ, ಬಹುಮುಖ ಪ್ರತಿಭೆ ಎಂದೇ ಗುರುತಿಸಲ್ಪಡುವ ಹರೀಶ್ ಶೇರಿಗಾರ್ ನೇತೃತ್ವದಲ್ಲಿ ಮೂಡಿಬಂದ ‘ಧೂಮ್ ಧಮಾಕಾ 2013’ ಯುಎಇಯಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಿದೆ.

Dhoom Dhamaka dubai-Nov 15-2013-024

Dhoom Dhamaka dubai-Nov 15-2013-025

Dhoom Dhamaka dubai-Nov 15-2013-026

Dhoom Dhamaka dubai-Nov 15-2013-027

Dhoom Dhamaka dubai-Nov 15-2013-028

Dhoom Dhamaka dubai-Nov 15-2013-031

Dhoom Dhamaka dubai-Nov 15-2013-032

Dhoom Dhamaka dubai-Nov 15-2013-033

Dhoom Dhamaka dubai-Nov 15-2013-034

Dhoom Dhamaka dubai-Nov 15-2013-035

Dhoom Dhamaka dubai-Nov 15-2013-036

Dhoom Dhamaka dubai-Nov 15-2013-037

Dhoom Dhamaka dubai-Nov 15-2013-038

Dhoom Dhamaka dubai-Nov 15-2013-039

Dhoom Dhamaka dubai-Nov 15-2013-040

Dhoom Dhamaka dubai-Nov 15-2013-041

ಹೊಸ ಬಗೆಯ ಹಾಸ್ಯಚಟಾಕಿಗಳನ್ನು ಸಿಡಿಸಿದ ಹಾಸ್ಯಕ್ಷೇತ್ರದ ಖ್ಯಾತ ಹಾಸ್ಯ ಕಲಾವಿದರಾದ ಮುಂಬೈಯ ಕೃಷ್ಣ ಮತ್ತು ಸುದೇಶ್ ದುಬೈಗರಿಗೆ ಹಾಸ್ಯದ ಬಾಡೂಟವನ್ನೇ ಬಡಿಸಿದರು. ಜೊತೆಗೆ ಹರೀಶ್ ಶೇರಿಗಾರ್‌ರನ್ನೂ ವೇದಿಕೆಗೆ ಬರಮಾಡಿಕೊಂಡು ಅವರೊಂದಿಗೆ ತಮ್ಮ ಹಾಸ್ಯದ ಅಭಿನಯವನ್ನು ಮುಂದುವರಿಸಿ, ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಾಡುವಂತೆ ಮಾಡಿದರು.

ಹೊಸವಿನ್ಯಾಸವನ್ನು ಅಳವಡಿಸಿ, ಮನಮೋಹಕ ರೀತಿಯಲ್ಲಿ ನಿರ್ಮಿಸಲಾದ ವೇದಿಕೆ ಕಲಾವಿದರಿಗೆ ಇನ್ನಷ್ಟು ಹುರಿದುಂಬಿಸುವಂತೆ ಮಾಡಿದ್ದು, ಸಂಗೀತ, ಹಾಸ್ಯ, ನೃತ್ಯ ಕಾರ್ಯಕ್ರಮವಂತೂ ಭರ್ಜರಿಯಾಗಿ ಮೂಡಿಬಂತು. ಜೊತೆಗೆ ಕಾರ್ಯಕ್ರಮ ಆರಂಭದಿಂದ ಅಂತ್ಯದ ವರೆಗೆ ಅಚ್ಚುಕಟ್ಟಾಗಿ ನಡೆಯುವ ಮೂಲಕ ಹರೀಶ್ ಶೇರಿಗಾರ್ ಮತ್ತೆ ‘ಧೂಮ್ ಧಮಾಕ’ದ ಮೂಲಕ ಮಿಂಚಿದ್ದಾರೆ.

ಕೆಲಸ-ಕಾರ್ಯದ ಒತ್ತಡದಲ್ಲಿರುವ ಕರಾವಳಿ ಭಾಗದ ಜನರಿಗೆ ಸಂತಸ, ಉಲ್ಲಾಸದ ರಸದೌತಣ ನೀಡಿದ ‘ಧೂಮ್ ಧಮಾಕಾ 2013’, ಮುಂಬೈ ಮೂಲದ ಖ್ಯಾತ ಹಾಸ್ಯ, ಸಂಗೀತ ಕಲಾವಿದರು, ಕರಾವಳಿ ಭಾಗದ ಹೆಸರಾಂತ ಹಾಡುಗಾರರು ತಮ್ಮ ಚಾಕಚಕ್ಯತೆಯನ್ನು ಪ್ರದರ್ಶಿಸಿ, ಕಾರ್ಯಕ್ರಮದುದ್ದಕ್ಕೂ ಅದ್ಭುತ ಪ್ರದರ್ಶನವನ್ನು ನೀಡಿದರು.

Dhoom Dhamaka dubai-Nov 15-2013-042

Dhoom Dhamaka dubai-Nov 15-2013-030

Dhoom Dhamaka dubai-Nov 15-2013-029

Dhoom Dhamaka dubai-Nov 15-2013-023

Dhoom Dhamaka dubai-Nov 15-2013-022

Dhoom Dhamaka dubai-Nov 15-2013-021

Dhoom Dhamaka dubai-Nov 15-2013-020

Dhoom Dhamaka dubai-Nov 15-2013-019

Dhoom Dhamaka dubai-Nov 15-2013-018

Dhoom Dhamaka dubai-Nov 15-2013-017

Dhoom Dhamaka dubai-Nov 15-2013-016

Dhoom Dhamaka dubai-Nov 15-2013-015

Dhoom Dhamaka dubai-Nov 15-2013-014

Dhoom Dhamaka dubai-Nov 15-2013-013

ಕಾರ್ಯಕ್ರಮವನ್ನು ನೋಡಿ ಆನಂದಿಸಲು ತುದಿಗಾಲಲ್ಲಿ ನಿಂತ ಜನ ಕಾರ್ಯಕ್ರಮ ಆರಂಭದಿಂದ ಕೊನೆಯ ವರೆಗೆ ಆಸನ ಬಿಟ್ಟು ಕದಡದಂತೆ ಮಾಡಿತು. ಜೊತೆಗೆ ಕುಟುಂಬ ಸಮೇತರಾಗಿ ಬಂದು ಕಾರ್ಯಕ್ರಮವನ್ನು ಕಣ್ಣಾರೆಕಂಡು ಪುಳಕಿತರಾದರು.

ಮುಂಬೈ ಮೂಲದ ಖ್ಯಾತ ಸಿನಿಮಾ ಹಾಡುಗಾರರಾಗಿರುವ ಗೌರವ್ ಬಂಗಿಯ, ಝೀ ಟಿವಿಯ 1997ರ ಸರಿಗಮಪದ ವಿಜೇತೆ, ಹಿಂದಿ ಹಾಗೂ ಮರಾಠಿ ಸಿನಿಮಾಗಳಲ್ಲಿ ಹಾಡುವ ಮೂಲಕ ಉತ್ತುಂಗದ ಶಿಖರವನ್ನೇರಿದ ಅಮೃತನಾತು ತಮ್ಮ ಸುಮಧುರ ಕಂಠದ ಮೂಲಕ ಸಂಗೀತ ರಸಿಕರ ಮನಗೆಲ್ಲುವಂತೆ ಮಾಡಿದರು.

ಪ್ರತಿಭಾವಂತ ಮತ್ತು ಪ್ರಸಿದ್ಧ ಸಂಗೀತಗಾರರಾದ ಮಂಗಳೂರಿನ ರಾಜ್‌ಗೋಪಾಲ್ ಹಾಗೂ ಅವರ ತಂಡದವರ ಸಂಗೀತವಂತೂ ಕಾರ್ಯಕ್ರಮದುದ್ದಕ್ಕೂ ಅದ್ಭುತವಾಗಿ ಮೂಡಿಬಂತು.

Dhoom Dhamaka dubai-Nov 15-2013-050

Dhoom Dhamaka dubai-Nov 15-2013-051

Dhoom Dhamaka dubai-Nov 15-2013-065

Dhoom Dhamaka dubai-Nov 15-2013-066

Dhoom Dhamaka dubai-Nov 15-2013-069

Dhoom Dhamaka dubai-Nov 15-2013-070

Dhoom Dhamaka dubai-Nov 15-2013-071

Dhoom Dhamaka dubai-Nov 15-2013-072

Dhoom Dhamaka dubai-Nov 15-2013-073

Dhoom Dhamaka dubai-Nov 15-2013-074

Dhoom Dhamaka dubai-Nov 15-2013-075

Dhoom Dhamaka dubai-Nov 15-2013-076

Dhoom Dhamaka dubai-Nov 15-2013-077

Dhoom Dhamaka dubai-Nov 15-2013-078

ಜೊತೆಗೆ ದುಬೈಯಲ್ಲಿ ಚಿರಪರಿತರಾಗಿರುವ ಬಹುಮುಖ ಪ್ರತಿಭೆ, ಕಾರ್ಯಕ್ರಮದ ರೂವಾರಿ ಹರೀಶ್ ಶೇರಿಗಾರ್, ಖ್ಯಾತ ಹಾಡುಗಾರರಾದ ಸಂದೇಶ್, ಅಕ್ಷತಾ ರಾವ್, ಇಮ್ತಿಯಾಝ್, ಮೆಲ್ವಿನ್ ಡಿಸೋಜ, ಝಮೀಲ್, ಪ್ರೇಮಾ ಡಿಸೋಜರ ಹಾಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಹರೀಶ್ ಶೇರಿಗಾರ್‌ರ ಪುತ್ರಿ ಅಕ್ಷತಾ ಶೇರಿಗಾರ್ ಕೂಡಾ ತಂದೆಯೊಂದಿಗೆ ಚೆನ್ನೈ ಎಕ್ಸ್‌ಪ್ರೆಸ್‌ನ ಹಾಡಿಗೆ ಸಾಥ್ ನೀಡುವ ಮೂಲಕ ಅಪ್ಪನ ಜೊತೆ ಸಂಗೀತ ಲೋಕಕಕ್ಕೆ ಬರುವ ಮುನ್ಸೂಚನೆ ನೀಡಿದರು.

ವಿನೋದ್ ಸಿಕ್ವೇರ ನೇತೃತ್ವದ ಒಷಿಯನ್ ಕಿಡ್ಸ್ ಹಾಗೂ ಪ್ರಸನ್ನ ಕುಮಾರ್ ನೇತೃತ್ವದ Boys Zone ತಂಡದವರಿಂದ ನಡೆದ ಮನಮೋಹಕ, ಮನಸೂರೆಗೊಳಿಸುವಂಥ ನೃತ್ಯ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರೆಗು ತಂದುಕೊಟ್ಟಿತು.

Dhoom Dhamaka dubai-Nov 15-2013-001

Dhoom Dhamaka dubai-Nov 15-2013-005

Dhoom Dhamaka dubai-Nov 15-2013-010

Dhoom Dhamaka dubai-Nov 15-2013-044

Dhoom Dhamaka dubai-Nov 16-2013001

Dhoom Dhamaka dubai-Nov 16-2013002

Dhoom Dhamaka dubai-Nov 16-2013004

Dhoom Dhamaka dubai-Nov 16-2013005

Dhoom Dhamaka dubai-Nov 15-2013-048

Dhoom Dhamaka dubai-Nov 15-2013-054

Dhoom Dhamaka dubai-Nov 15-2013-056

Dhoom Dhamaka dubai-Nov 15-2013-059

Dhoom Dhamaka dubai-Nov 15-2013-063

Dhoom Dhamaka dubai-Nov 15-2013-067

Dhoom Dhamaka dubai-Nov 15-2013-081

Dhoom Dhamaka dubai-Nov 15-2013-083

Dhoom Dhamaka dubai-Nov 15-2013-085

Dhoom Dhamaka dubai-Nov 15-2013-086

Dhoom Dhamaka dubai-Nov 15-2013-088

ದುಬೈಯ ರಾಶಿದ್ ಪಿಡಿಯಾಟ್ರಿಕ್ ಸೆಂಟರ್ ಹಾಗೂ ಮಂಗಳೂರಿನ ಸ್ನೇಹಾಚಾರಿಟೇಬಲ್ ಟ್ರಸ್ಟ್‌ಗೆ ಸಹಾಯಹಸ್ತವನ್ನು ನೀಡುವ ಉದ್ದೇಶದಿಂದ ಹರೀಶ್ ಶೇರಿಗಾರ್ ಹಗಲು ರಾತ್ರಿ ಎನ್ನದೆ ಸಾಮಾಜಿಕ ಕಳಕಳಿಯಿಂದ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಜನರ ದಂಡೇ ಹರಿದು ಬರುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದೆ.

ಅನಿಲ್, ಊರ್ವಶಿ ಹಾಗೂ ಎರ್ಲ್‌ ಅವರ ಕಾರ್ಯಕ್ರಮ ನಿರೂಪಣೆ ಕೂಡಾ ಖುಷಿಕೊಟ್ಟಿತು.

Dhoom Dhamaka dubai-Nov 15-2013-155

Dhoom Dhamaka dubai-Nov 15-2013-159

Dhoom Dhamaka dubai-Nov 15-2013-160

Dhoom Dhamaka dubai-Nov 15-2013-161

Dhoom Dhamaka dubai-Nov 15-2013-164

Dhoom Dhamaka dubai-Nov 15-2013-216

Dhoom Dhamaka dubai-Nov 15-2013-219

Dhoom Dhamaka dubai-Nov 15-2013-220

Dhoom Dhamaka dubai-Nov 15-2013-224

Dhoom Dhamaka dubai-Nov 15-2013-230

Dhoom Dhamaka dubai-Nov 15-2013-231

Dhoom Dhamaka dubai-Nov 15-2013-232

Dhoom Dhamaka dubai-Nov 15-2013-234

Dhoom Dhamaka dubai-Nov 15-2013-235

Dhoom Dhamaka dubai-Nov 15-2013-236

Dhoom Dhamaka dubai-Nov 15-2013-237

Dhoom Dhamaka dubai-Nov 15-2013-240

ಕಾರ್ಯಕ್ರಮಕ್ಕೆ ಚಾಲನೆ

ಕಾರ್ಯಕ್ರಮದ ಆರಂಭದಲ್ಲಿ ನೆರೆದ ಗಣ್ಯಾಥಿಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದುಬೈ ಫರ್ಲಿನ್ ಟಿಂಬರ್ಸ್‌ನ ಕಮಲ್, ದುಬೈ ಯುನೈಟೆಡ್ ಎಜೆನ್ಸಿಯ ವಿಕಾಸ್ ನೇಲಾನಿ, ದುಬೈ ಟ್ರಾನ್ಸ್‌ಟೆಕ್ ಟ್ರೇಡಿಂಗ್‌ನ ಸುನಿಲ್ ಗೈಹಾನಿ, ದುಬೈ ಗೋಲ್ಡನ್ ಟಿಂಬರ್‌ನ ಮೆಹ್ತಾ, ಡೂನ್ಸ್ ಅಪಾರ್ಟ್‌ಮೆಂಟ್‌ನ ಮೈಕಲ್ ಡಿಸೋಜ, ನಾರಾಯಣ್ ಸೆಲ್ವಾನಿ, ರೇಡಿಯೋ ಸ್ಪೈಸ್‌ನ ಹರ್ಮನ್ ಲೂಯಿಸ್, ಫೋರ್ಚುನ್ ಹೊಟೇಲ್ಸ್ ಮಾಲಕ ಪ್ರವೀಣ್ ಶೆಟ್ಟಿ, ಅಬುಧಾಬಿ ಕರ್ನಾಟಕ ಸಂಘದ ಸರ್ವೋತಮ ಶೆಟ್ಟಿ, ಹರೀಶ್ ಶೇರಿಗಾರ್, ಅವರ ಧರ್ಮಪತ್ನಿ ಶರ್ಮಿಳಾ ಶೇರಿಗಾರ್, ಸಹೋದರ ದಿನೇಶ್ ಶೇರಿಗಾರ್ ಸೇರಿದಂತೆ ಮತ್ತಿತರ ಗಣ್ಯರು ಹಾಜರಿದ್ದರು.

dhoom_161113-175

dhoom_161113-176

dhoom_161113-177 (1)

dhoom_161113-177

ಕಾರ್ಯಕ್ರಮದಲ್ಲಿ ಮುಂದಿನ ಜನವರಿಯಲ್ಲಿ ಬಿಡುಗಡೆಗೊಳ್ಳಲಿರುವ ‘ನಿರೆಲ್’ ತುಳು ಸಿನಿಮಾದ ಪ್ರಮೋ ಬಿಡುಗಡೆಗೊಳಿಸಲಾಯಿತು. ಸಿನಿಮಾದ ನಿರ್ಮಾಪಕ ಶೋಧನ್ ಪ್ರಸಾದ್ ಸೇರಿದಂತೆ ಚಿತ್ರ ನಾಯಕ, ನಾಯಕಿಯರು, ಇತರ ಕಲಾವಿದರು ಕೂಡಾ ಈ ವೇಳೆ ಹಾಜರಿದ್ದರು. ಹಾಸ್ಯ ಕಲಾವಿದ ಕೃಷ್ಣ ಸಿನಿಮಾದ ಪ್ರಮೋ ಬಿಡುಗಡೆಗೊಳಿಸಿ, ಶುಭ ಹಾರೈಸಿದರು. 

Dhoom Dhamaka dubai-Nov 15-2013-006

Dhoom Dhamaka dubai-Nov 15-2013-009

Dhoom Dhamaka dubai-Nov 15-2013-011

Dhoom Dhamaka dubai-Nov 15-2013-241

Dhoom Dhamaka dubai-Nov 15-2013-242

Dhoom Dhamaka dubai-Nov 15-2013-243

Dhoom Dhamaka dubai-Nov 15-2013-244

Dhoom Dhamaka dubai-Nov 15-2013-245

Dhoom Dhamaka dubai-Nov 15-2013-246

Dhoom Dhamaka dubai-Nov 15-2013-247

Dhoom Dhamaka dubai-Nov 15-2013-248

Dhoom Dhamaka dubai-Nov 15-2013-249

Dhoom Dhamaka dubai-Nov 15-2013-250

Dhoom Dhamaka dubai-Nov 15-2013-251

Dhoom Dhamaka dubai-Nov 15-2013-252

Dhoom Dhamaka dubai-Nov 15-2013-253

Dhoom Dhamaka dubai-Nov 15-2013-254

Dhoom Dhamaka dubai-Nov 15-2013-255

Dhoom Dhamaka dubai-Nov 15-2013-256

Dhoom Dhamaka dubai-Nov 15-2013-257

Dhoom Dhamaka dubai-Nov 15-2013-258

Dhoom Dhamaka dubai-Nov 15-2013-259

Dhoom Dhamaka dubai-Nov 15-2013-260

Dhoom Dhamaka dubai-Nov 15-2013-261

Dhoom Dhamaka dubai-Nov 15-2013-262

Dhoom Dhamaka dubai-Nov 15-2013-263

ಈ ಸಂದರ್ಭದಲ್ಲಿ ದುಬೈಯ ರಾಶಿದ್ ಪಿಡಿಯಾಟ್ರಿಕ್ ಸೆಂಟರ್‌ನ ಫೈಝಿ ಯವರು ಹರೀಶ್ ಶೇರಿಗಾರ್‌ಗೆ ಪ್ರಮಾಣಪತ್ರವೊಂದನ್ನು ನೀಡಿ ಅಭಿನಂದಿಸಿದರು.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (38) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (4)

About ಗ.ಕ ವಾರ್ತಾ ವಿಭಾಗ ದುಬೈ, ಗಲ್ಫ್

ಗಲ್ಫ್ ಕನ್ನಡಿಗ ವಾರ್ತಾ ವಿಭಾಗ ದುಬೈ... ಹೆಚ್ಚಿನ ಮಾಹಿತಿಗೆ - Contact: uae@gulfkannadiga.com