ಡಿ.೧೪-೧೫:ಅಬುಧಾಬಿ ಕರ್ನಾಟಕ ಸಂಘದ ಮತ್ತು ಹೃದಯವಾಹಿನಿ ಸಂಯುಕ್ತ ಆಶ್ರಯದಲ್ಲಿ ೯ನೇ ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನ.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

 ಅಬುಧಾಬಿ ಕರ್ನಾಟಕ ಸಂಘದ ಮತ್ತು ಹೃದಯವಾಹಿನಿ ಸಂಯುಕ್ತಆಶ್ರಯದಲ್ಲಿ ಡಿಸೆಂಬರ್ ೧೪ ಮತ್ತು ೧೫ ರಂದು ಅಬುಧಾಬಿಯಲ್ಲಿ ೯ನೇ ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನ ಅದ್ದೂರಿಯಾಗಿ ನಡೆಯಲಿರುವುದು. ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರು ಶ್ರೀ ಸರ್ವೋತ್ತಮ್ ಶೆಟ್ಟಿ ಹಾಗೂ ಹೃದಯವಾಹಿನಿ ಬಳಗದ ಮುಖ್ಯಸ್ಥರಾದ ಶ್ರೀ ಮಂಜುನಾಥ್ ಸಾಗರ್ ರವರು ಮಾಧ್ಯಮ ಪ್ರಕಟಣೆಯನ್ನು ನೀಡಿದ್ದಾರೆ.

ವಿಶ್ವ ಕನ್ನಡ ಸಾಂಸ್ಕೃತಿ ಸಮ್ಮೇಳನ ಕೊಲ್ಲಿನಾಡಿನಲ್ಲಿ ಕನ್ನಡ ಸಾಹಿತ್ಯ, ಸಂಸ್ಕೃತಿ, ಜಾನಪದ, ಭರತನಾಟ್ಯ, ಯಕ್ಷಗಾನಗಳು ಅಬುಧಾಬಿಯ ಸಾಂಸ್ಕೃತಿಕ ವೇದಿಕೆಯಲ್ಲಿ ಅನಾವರಣ ಗೊಳ್ಳಲಿದೆ. ಕಳೆದ ಎಂಟು ವಿಶ್ವಕನ್ನಡ ಸಮ್ಮೇಳನ ೨೦೦೪ ರಲ್ಲಿ ಅಬುಧಾಬಿಯಲ್ಲಿ ನಡೆದಿತ್ತು. ಸಿಂಗಾಪುರ, ಬಹ್ರೈನ್, ಕುವೈಟ್, ಕತ್ತಾರ್, ದುಬಾಯಿಯಲ್ಲಿ ನಡೆದು ದಾಖಲೆಯನ್ನು ನಿರ್ಮಿಸಿದೆ.

ಯು.ಎ.ಇ. ಕನ್ನಡಿಗರ ಮಹಾಪೋಷಕರಾಗಿರುವ ಡಾ. ಬಿ. ಆರ್. ಶೆಟ್ಟಿಯವರ ಮಾರ್ಗದರ್ಶನ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿ, ಉಪಾಧ್ಯಕ್ಷರಾದ ಶ್ರೀ ಸಿರಾಜ್ ಜಫ್ರಿ, ಕಾರ್ಯದರ್ಶಿ ಶ್ರೀ ಮನೋಹರ್ ತೋನ್ಸೆ, ಖಜಾಂಚಿ ಶ್ರೀ ಯೊಗೇಶ್ ಪ್ರಭು ಮತ್ತು ಕಾರ್ಯಕಾರಿ ಸಮಿತಿಯ ಪೂರ್ವಭಾವಿಯ ತಯಾರಿಯ ಕಾರ್ಯಯೋಜನೆಯ ಪೂರ್ಣ ವಿವರ ಅತೀ ಶೀಘ್ರದಲ್ಲಿ ಪ್ರಕಟಣೆಯಾಗಲಿದೆ.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ.ಅಂತರ್ಜಾಲ ವರದಿಗಾರರು