ದುಬೈ ಅನಿವಾಸಿ ಉದ್ಯೋಗಸ್ಥರ ನಿವೃತ್ತಿ ವೇತನಕ್ಕೆ ಬೆಂಬಲಿಸಿದ ವಿಶ್ವ ಬ್ಯಾಂಕ್

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ದುಬೈ,ಸೆ.20: ದುಬೈಯಲ್ಲಿ ಉದ್ಯೋಗಸ್ಥರಾಗಿರುವ ಅನಿವಾಸಿಗಳಿಗೆ ಕಡ್ಡಾಯವಾಗಿ ನಿವೃತ್ತಿ ವೇತನ ನಿಯಮವನ್ನು ಕಾರ್ಯಗತಗೊಳಿಸುವ ಯೋಜನೆಗೆ ವಿಶ್ವ ಬ್ಯಾಂಕ್ ಬೆಂಬಲ ಸೂಚಿಸಿದೆ.

ಈ ಕುರಿತು ಎಮರೇಟ್ ಅಲ್ ಯ್ಯೂಂ ಪತ್ರಿಕೆಯೊಂದು ವರದಿ ಮಾಡಿದ್ದು, ವಿಶ್ವ ಬ್ಯಾಂಕ್  ಈ ಬಗ್ಗೆ ಅಧ್ಯಾಯನ ನಡೆಸಿ ದುಬೈ ಡಿಪಾರ್ಟ್ ಮೆಂಟ್ ಆಫ್ ಎಕಾನಮಿ ಡೆವಲಪ್‍ಮೆಂಟ್ (ಡಿಇಡಿ) ಗೆ ಒತ್ತಾಯಿಸಿದೆ.ಈ ಯೋಜನೆಯಲ್ಲಿ  ಸಂಗ್ರಹಿಸಿದ ಮೊತ್ತವನ್ನು ಯುಎಇಯ ವ್ಯವಹಾರ ವರ್ತುಲದಲ್ಲಿಯೂ ತೊಡಗಿಸಿಕೊಳ್ಳಬಹುದು ಎಂದು ವಿಶ್ವ ಬ್ಯಾಂಕ್ ತನ್ನ ಕೋರಿಕೆಯಲ್ಲಿ ಸೂಚಿಸಿದೆ ಎಂದು  ಬ್ಯಾಂಕ್ ಅಧೀಕೃತ ಮೂಲಗಳು ತಿಳಿಸಿವೆ.

ವಿಶ್ವ ಬ್ಯಾಂಕಿನ ಈ ಸೂಚನೆಯನ್ನು ಅನುಮೋದಿಸಿರುವ ಡಿಇಡಿ ಡೆಪ್ಯುಟಿ ಡೈರೆಕ್ಟರ್ ಅಲಿ ಇಬ್ರಾಹಿಂ, ಉದ್ಯೋಗಿಗಳ ಭವಿಷ್ಯದ ಸ್ಥಿರತೆ ಮತ್ತು ಉತ್ಪಾದನಾ ವಲಯದ ಉನ್ನತಿಗೆ ವಿಶ್ವಬ್ಯಾಂಕ್ ನೀಡಿರುವ ಸೂಚನೆ ಮಹತ್ತರವಾದುದು ಎಂದು ಬಣ್ಣಿಸಿದ್ದಾರೆ. ಇದನ್ನು  ಮಹತ್ತರವಾದ ಯೋಜನೆಯನ್ನಾಗಿ ಕಾರ್ಯಗತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಅನಿವಾಸಿ ಉದ್ಯೋಗಸ್ಥರು ನಿವೃತ್ತಿ ಹೊಂದಿದಾಗ ತಮ್ಮ ಕುಟುಂಬದೊಂದಿಗೆ ಉತ್ತಮ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದರಲ್ಲದೆ, ವಿಶ್ವಬ್ಯಾಂಕ್‍ನ ಈ ಅಧ್ಯಾಯನ ವರದಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹತ್ತರವಾದ ಯೋಜನೆಗೆ ನಾಂದಿ ಹಾಡಲಿದೆ ಎಂದರು.

ದುಬೈಯ ಸರಕಾರ ಮತ್ತು ಖಾಸಗಿ ಸಂಸ್ಥೆಗಳ ಸಹಕಾರದೊಂದಿಗೆ ಈ ಯೋಜನೆಯನ್ನು ಈಗಾಗಲೇ ಹಂತ ಹಂತವಾಗಿ ಕಾರ್ಯಗತಗೊಳಿಸಲು ಸಜ್ಜಾಗಿದೆ ಎಂದು ಅಲಿ ಇಬ್ರಾಹಿಂ ತಿಳಿಸಿದ್ದಾರೆ.

 

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)
ನೀಲಾಂಜನ್

About ನೀಲಾಂಜನ್