ಕಡು ಬಡತನ ಕಾರ್ಮಿಕರ ವಿಸಾ ನಿಷೇಧವಿಲ್ಲ: ಸಚಿವಾಲಯ ಸ್ಪಷ್ಟನೆ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ದುಬೈ,ಸೆ.20: ವಿಸಿಟ್ ವಿಸಾ ಆಧಾರದಲ್ಲಿ ಆಗಮಿಸಿ ಕೆಲಸ ನಿರ್ವಹಿಸುತ್ತಿರುವ ನಪುಣ್ಯತೆ ಇಲ್ಲದ ಕಾರ್ಮಿಕರ ನಿಷೇಧದ ಬಗ್ಗೆ ಎದ್ದಿರುವ ವಿಷಯಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಚಿವಾಲಯ ಪತ್ರಿಕಾ ಗೋಷ್ಟಿ ಮೂಲಕ ಸ್ಪಷ್ಟನೆ ನೀಡಿದ್ದು, ಆರ್ಥಿಕವಾಗಿ ಹಿಂದುಳಿದಿರುವ  ಕಡು ಬಡತನದ ಕಾರ್ಮಿಕರ ವಿಸಾ ರದ್ದತಿ ಇಲ್ಲ ಎಂದಿದೆ.

ಕಾರ್ಮಿಕರ ವಲಯದ  ವಿಸಾ ರದ್ದತಿ ಬಗ್ಗೆ ಮಾಧ್ಯಮಗಳಲ್ಲಿ ಕಾನೂನನ್ನು ತಿರುಚಿ ಪ್ರಕಟಿಸಲಾಗುತ್ತಿದೆ ಎಂದಿರುವ  ಉನ್ನತ ಸಚಿವಾಲಯದ ಮೂಲಗಳು, ವಿಸಾ ರದ್ದತಿಯ ಕುರಿತು  ರಾಷ್ಟ್ರಾದ್ಯಂತ  ಅನಿವಾಸಿಗಳ ಆರ್ಥಿಕ ಮಟ್ಟಕ್ಕನುಗುಣವಾಗಿ ಕಾರ್ಯ ಯೋಜನೆ ರೂಪಿಸಲಾಗಿದೆಯೇ ಹೊರತು, ವಿಸಿಟ್ ವಿಸಾದಲ್ಲಿ ಕೆಲಸ ಅರಸಿ ಬಂದಿರುವ ಕಡು ಬಡತನ ಕಾರ್ಮಿಕರ ನಿಷೇಧವಿಲ್ಲ ಎಂದಿದೆ.

ತಪ್ಪು ಮೂಲಗಳಿಂದ  ಮತ್ತು ಅನಧಿಕೃತ ವ್ಯಕ್ತಿಗಳಿಂದ ಸಂಗ್ರಹಿಸಿದ ವರದಿಗಳನ್ನು ಕೆಲವು ಮಾಧ್ಯಮಗಳು ಪ್ರಕಟಿಸಿದ್ದು, ಅದು ಸತ್ಯಕ್ಕೆ ದೂರವಾದುದು ಎಂದು ಒತ್ತಿ ಹೇಳಿದೆ.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)
ನೀಲಾಂಜನ್

About ನೀಲಾಂಜನ್