ಪೂರ್ವರಜೆ ಪ್ರಯಾಣಕ್ಕೆ ಅಗ್ಗದ ದರದಲ್ಲಿ ಯುಎಇ-ಎತಿಹಾದ್ ಏರ್ ಲೈನ್ಸ್ ಟಿಕೇಟು ಮಾರಾಟ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ದುಬೈ,ಸೆ.21:ಯುಎಇ ಏರ್ ಲೈನ್ಸ್ ಮತ್ತು ಇಥಿಯಾಡ್ ಏರ್ ಲೈನ್ಸ್ ಅಗ್ಗದ ದರದಲ್ಲಿ ಪ್ರಯಾಣಿಕರ ಪೂರ್ವ ರಜೆ ವಿಮಾನ ಪ್ರಯಾಣದ ಟಿಕೇಟು ಮಾರಾಟ ಆರಂಭಿಸಿದೆ. ಇದು ಸೆಪ್ಟೆಂಬರ್ ತಾ.20ರಿಂದ ತಾ.22ರ ಶನಿವಾರ ಮಧ್ಯರಾತ್ರಿಯವರೆಗೆ ಮಾತ್ರ ಅವಕಾಶವಿದ್ದು, ಸೆಪ್ಟೆಂಬರ್ ತಾ.20 ರಿಂದ ಡಿಸೆಂಬರ್ 5ರವರೆಗೆ  ಹಲವು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಗಳ  ಪ್ರಯಾಣಕ್ಕೆ ಮೀಸಲಿರಿಸಿದೆ.

ದುಬೈ ಎಮಿರೇಟ್ ಏರ್ ಲೈನ್ಸ್ ಶೇ.10ರಷ್ಟು ಎಕಾನಮಿ ಕ್ಲಾಸ್ ಪ್ರಯಾಣ ದರವನ್ನು ಕಡಿತಗೊಳಿಸಿದ್ದು, ಮುಂದಿನ ಮೂರು ದಿನಗಳವರೆಗೆ ಸುಮಾರು 32 ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ವಿಸ್ತರಿಸಿದೆ.ಇದರಲ್ಲಿ ಭಾರತದ ಬಹುತೇಕ ನಗರಗಳು, ಯೂರೋಪ್, ಉತ್ತರ ಮತ್ತು ದಕ್ಷಿಣ ಅಮೇರಿಕಾ,ಕೊಲ್ಲಿ ರಾಷ್ಟ್ರಗಳು ಮತ್ತು ಆಫ್ರಿಕಾದ ವಿಮಾನ ನಿಲ್ದಾಣಗಳು ಒಳಗೊಂಡಿವೆ.

ಅಬುಧಾಬಿಯ ಇತಿಯಾದ್ ಕೂಡ ತನ್ನ ವಿಮಾನ ಪ್ರಯಣ ದರದಲ್ಲಿ ಕಡಿತಗೊಳಿಸಿ ಮಾರಾಟ ಮಾಡುತ್ತಿದ್ದು, ಅಬುಧಾಬಿ, ಅಲ್ ಐನ್ , ದುಬೈ ಮತ್ತು ರಾಸ್ ಅಲ್ ಖೈಮ್ಹಾಗಳಿಗೆ ವಿಸ್ತರಿಸಿದೆ.

ಎಮಿರೇಟ್ ಏರ್ ಲೈನ್ಸ್ ವಿಮಾನದ ದರ ದುಬೈ-ಕರಾಚಿಗೆ ದಿರಹಂ 1,080, ದುಬೈ-ಚೆನ್ನೈ ದಿರಹಂ 1,370, ದುಬೈ-ವಿಯನ್ನಾ ದಿರಹಂ 2,380 ,ದುಬೈ-ವಾಶಿಂಗ್ಟನ್ ದಿರಹಂ 6,100 ನಿಗಧಿಪಡಿಸಿದ್ದು, ಎರಡು ಮಾರ್ಗದ ದರ ಇದಾಗಿದೆ.

ಇಥಿಯಾಡ್ ಏರ್ ಲೈನ್ಸ್  ಅಬುಧಾಬಿ-ಅಡ್ಡೀಸ್ ಅಬಾಬ್ ದಿರಹಂ 990  ಹಾಗು ಅಬುಧಾಬಿ-ಚೆನ್ನೈ ದಿರಹಂ 1,090 ನಿಗಧಿಪಡಿಸಿದ್ದು, ಇದು ಕೂಡ ಎರಡು ಮಾರ್ಗದ ದರವಾಗಿದೆ.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)
ನೀಲಾಂಜನ್

About ನೀಲಾಂಜನ್