ಬ್ರೇಕ್ ನಿಯಂತ್ರಣ ಕಡಿದುಕೊಂಡ ಕಾರು ಚಾಲಕನ ಜೀವ ರಕ್ಷಿಸಿದ ಯುಎಇ ಪೊಲೀಸ್ !

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ರಾಸ್ ಅಲ್ ಖೈಮ್ಹಾ,ಸೆ.21: ಬ್ರೇಕ್ ನಿಯಂತ್ರಣ ತಪ್ಪಿ 138 ಕಿ.ಮೀ.ವೇಗದಲ್ಲಿ ಚಲಿಸುತ್ತಿದ್ದ ಕಾರನ್ನು ಚಾಣಾಕ್ಷತನದಿಂದ ರಕ್ಷಿಸಿದ ಯುಎಇ ಪೊಲೀಸರು  ಪ್ರಾಣಾಯದ ಭೀತಿಯಲ್ಲಿದ್ದ ಎಮಿರೇಟ್ ನಿವಾಸಿಯ ಜೀವ ರಕ್ಷಿಸಿದ ಘಟನೆ ವರದಿಯಾಗಿದೆ.

ಕಳೆದ ಒಂದು ತಿಂಗಳಲ್ಲಿ ಇದು ಎರಡನೇ ಘಟನೆಯಾಗಿದ್ದು,ಎಮಿರೇಟಿ ಮೊಹಮ್ಮೆದ್ ಅಬ್ದುಲ್ಲ್ಹಾ ಅವರು ಬುಧವಾರ ಮಧ್ಯರಾತ್ರಿ ರಾಸ್ ಅಲ್ ಖೈಮ್ಹಾ ದಿಂದ ಉಮ್ಮ್ ಅಲ್ ಖ್ವಾಯಿನ್ ರಸ್ತೆಯಲ್ಲಿ ಕಾರು ಚಾಲಿಸುತ್ತಿದ್ದಾಗ ಬ್ರೇಕ್ ನಿಯಂತ್ರಣ ತಪ್ಪಿತ್ತು.

ತಕ್ಷಣವೇ ಪೊಲೀಸರಿಗೆ ಫೋನಾಯಿಸಿದ ಇವರು ತನ್ನ ಕಾರು ನಿಯಂತ್ರಣ ತಪ್ಪಿ ಪ್ರಾಣಾಪಾಯದಲ್ಲಿರುವುದಾಗಿ ತಿಳಿಸಿದರು. ಕಾರ್ಯಪ್ರವೃತ್ತರಾದ ಪೊಲೀಸರು ಅಂಬುಲೆನ್ಸ್,ವಾಹನ ಸಹಿತ ಶಾರ್ಜಾ ರಸ್ತೆಯಲ್ಲಿ ಕಾರನ್ನು ಬೆನ್ನಟ್ಟಿ ನಿಯಂತ್ರಿಸಲು ಸಜ್ಜಾದರು.

ನಿಯಂತ್ರಣ ತಪ್ಪಿದ ಕಾರಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಪೊಲೀಸ್ ವಾಹನಗಳನ್ನು ಚಾಲಿಸಿದ್ದಲ್ಲದೆ, ಚಾಲಕನಿಗೆ  ಮೊಬೈಲ್ ಸಂಪರ್ಕದ ಮೂಲಕ ತಮ್ಮ ವಾಹನಕ್ಕೆ ಗುದ್ದುವಂತೆ ಸೂಚನೆ ನೀಡಿದರು. ಹೀಗೆ ಮೂರು ಬಾರಿ ಪೊಲೀಸ್ ವಾಹನಕ್ಕೆ ಗುದ್ದಿದ ಪರಿಣಾಮ ಸುಮಾರು 138 ಕಿ.ಮೀ.ವೇಗದಲ್ಲಿ ಚಲಿಸುತ್ತಿದ್ದ ಕಾರು ನಿಧಾನವಾಗಿ ವೇಗ ಕಳೆದುಕೊಂಡು ಶಾರ್ಜಾದ ಜಂಕ್ಷನ್-95ರಲ್ಲಿ ನಿಂತಿತು ಎನ್ನಲಾಗಿದೆ. ಭಾರೀ ಅವಘಡ ಮತ್ತು ಚಾಲಕನ ಜೀವ ಹೋಗುವ ಸಂದರ್ಭವನ್ನು ನಿಭಾಯಿಸಿದ ಯುಎಇ ಪೊಲೀಸರ ಸಾಧನೆ ಮೆಚ್ಚುವಂತಹದ್ದು ಎಂದು ಹಲವು ಅಭಿಪ್ರಾಯಿಸಿದ್ದಾರೆ.

ಜೀವ ರಕ್ಷಿಸಿಕೊಂಡ ಎಮಿರೇಟಿ ಅಬ್ದುಲ್ಲ್ಹಾ ,ಮತ್ತೆ ಜೀವ ಪಡೆದ ಸಂತಸದಲ್ಲಿ ಪೊಲೀಸರನ್ನು ಅಭಿನಂದಿಸಿದರು.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)
ನೀಲಾಂಜನ್

About ನೀಲಾಂಜನ್