ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಷನ್ ದಕ್ಷಿಣ ಕನ್ನಡ ಘಟಕ ವತಿಯಿಂದ ಎಸ್ ಎಂ ಫಾರೂಕ್ ರವರಿಗೆ ವಿದಾಯ ಕೂಟ.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಕೆ ಕೆ ಎಂ ಎ ಎಂದೇ ಜನಪ್ರಿಯ ವಾಗಿರುವ ಕುವೈಟ್ ನ ಅನಿವಾಸಿ ಭಾರತೀಯರ ಅತಿ ದೊಡ್ಡ ಸಾಮಾಜಿಕ ಕಲ್ಯಾಣ ಸಂಸ್ಥೆ ಯಾಗಿರುವ ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಷನ್ ಸಂಸ್ಥೆಯ ದಕ್ಷಿಣ ಕನ್ನಡ ಘಟಕದ  ವತಿಯಿಂದ ಕುವೈಟ್‌ನಲ್ಲಿ ತಮ್ಮ 15 ವರ್ಷದ ಯಶಸ್ವಿ ಜೀವನವನ್ನು ಪೂರೈಸಿ, ಹೆತ್ತವರ ಯೋಗಕ್ಷೇಮ ನೋಡಿಕೊಂಡು  ತವರೂರಲ್ಲಿ ತಮ್ಮ ಜೀವನ ಮುನ್ನಡೆಸಲು ಹೊರಟಿರುವ ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಷನ್ ನ ಸಕ್ರಿಯ ಕಾರ್ಯಕರ್ತ , ಸಮಾಜ ಸೇವಕ, ಜನಾಬ್ ಎಸ್ ಎಂ ಫಾರೂಕ್ ರವರನ್ನು ಆಗಸ್ಟ್ 10 2012 ರಂದು ಗೌರವಯುತ ವಾಗಿ ಬೀಳ್ಕೊಡಲಾಯಿತು.

ಹಮೀದ್ ಮೂಲ್ಕಿ ರವರ ಕಿರಾಹತ್ ಪಠಣ ದೊಂದಿಗೆ ಕಾರ್ಯಕ್ರಮವು ಆರಂಭವಾಯಿತು. ಸ್ವಾಗತ ಭಾಷಣ ಮಾಡಿದ ಕೆ ಕೆ ಎಂ ಎ ದಕ್ಷಿಣ ಕನ್ನಡ ಘಟಕ ದ ಉಪಾದ್ಯಕ್ಷ ರಾದ ಜನಾಬ್ ಬಿ. ಎಂ. ಇಕ್ಬಾಲ್ ರವರು ಮಾತನಾಡಿ ಎಸ್ ಎಂ ಫಾರೂಕ್ ರವರು ಕುವೈಟ್ ಜೀವನದಲ್ಲಿ ಸಮಾಜಕ್ಕೆ ಮಾಡಿದ ಸೇವೆಗಳ ಬಗ್ಗೆ ವಿವರಿಸಿದರು. ದಕ್ಷಿಣ ಮತ್ತು ಉಡುಪಿ ಜಿಲ್ಲೆಯ ಕುವೈಟ್ ಅನಿವಾಸಿಗಳಲ್ಲಿ ಎಸ್ ಎಂ ಫಾರೂಕ್  ರವರ ಪರಿಚಯ ವಿಲ್ಲದವರು ಸಿಗುವುದು ಕಷ್ಟ ಯಾಕೆಂದರೆ ಪ್ರತಿಯೊಬ್ಬರ ಬಗ್ಗೆ ತಿಳಿದಿರುವ ಎಸ್ ಎಂ ಫಾರೂಕ್   ಯಾರ ಸಹಾಯಕ್ಕು ಎಷ್ಟು ಹೊತ್ತಿಗೂ ತಲುಪುವಂತ ವ್ಯಕ್ತಿ. ಸಮಾಜ ಸೇವೆಯನ್ನೇ ಗುರಿ ಯಾಗಿಸಿ ಕೊಂಡಿರುವ ಎಸ್ ಎಂ ಫಾರೂಕ್  ರವರು ಕೆ ಕೆ ಎಂ ಎ ಯ ಏಳಿಗೆಗೆ ನಿರಂತರ ಶ್ರಮಿಸಿದ್ದಾರೆ.  ತನ್ನ ಅವಿರತ ಶ್ರಮ ದಿಂದಾಗಿ ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಷನ್ ದಕ್ಷಿಣ ಕನ್ನಡ ಘಟಕ ವು ಇಂದು  ಇತರ ಎಲ್ಲ ಕೆ ಕೆ ಎಂ ಎ ಘಟಕ ಗಳಿಗೆ ಮಾದರಿ ಯಾಗಿದೆ ಎಂದರು.

ಕೆ ಕೆ ಎಂ ಎ ದಕ್ಷಿಣ ಕನ್ನಡ ಘಟಕ ದ ಕಾರ್ಯದರ್ಶಿ ರಫೀಕ್ ಮೂಲ್ಕಿ ಅವರು ಮಾತನಾಡುತ್ತಾ, ಯುವಜನಾಂಗಕ್ಕೆ ಆದರ್ಶರಾದ ಎಸ್ ಎಂ ಫಾರೂಕ್  ರವರು ಕೆ ಕೆ ಎಂ ಎ ಯ ಅಭಿವೃದ್ಧಿಗೆ ತಮ್ಮ ಅನುಭವವನ್ನು ಧಾರೆಯೆರೆದು, ನಮಗೆ ಬಹಳಷ್ಟು ಪಾಠಗಳನ್ನು ಕಲಿಸಿರುವರು, ಅವರ ಮೌಲಿಕ ಧ್ಯೇಯಗಳನ್ನು ನಾವು ಪಾಲಿಸಿಕೊಳ್ಳಬೇಕೆಂದು ಕರೆಯಿತ್ತರು. ಕೆ ಕೆ ಎಂ ಎ ಉನ್ನತಿಗೆ ಬಹಳಷ್ಟು ಶ್ರಮಿಸಿ, ಭದ್ರ ಬುನಾದಿ ಹಾಕಿರುವರೆಂದು ತಿಳಿಸಿದರು.
ಕೆ ಕೆ ಎಂ ಎ ದಕ್ಷಿಣ ಕನ್ನಡ ಘಟಕದ ಅಧ್ಯಕ್ಷರು ಎಸ್ ಎಂ ಫಾರೂಕ್  ರವರ ಹಿರಿಯ ಸಹೋದರರು ಆಗಿರುವ ಎಸ್ ಎಂ ಬಸೀರ್ ರವರು ಮಾತನಾಡಿ  ಸಹೋದರ ಎಸ್ ಎಂ ಫಾರೂಕ್  ರವರ ಮೇಲೆ ಕುವೈಟ್ ನ ಅನಿವಾಸಿ ಗಳು ಇಟ್ಟಿರುವ ಪ್ರೀತಿ ಮತ್ತು ವಿಶ್ವಾಸ ಗಳನ್ನು ಶ್ಲಾಘಿಸಿದರು.

ನಜೀರ್ ಬೋಳಾರ್ ರವರು ಮಾತನಾಡಿ ತಂದೆ ತಾಯಿಯವರ ಸೇವೆ ಮಾಡುವ ಭಾಗ್ಯ ಎಲ್ಲರಿಗೂ ಸಿಗುದಿಲ್ಲ ಅಂತಹ ಭಾಗ್ಯ ಫಾರೂಕ್ ರವರಿಗೆ ಸಿಕ್ಕಿದೆ.  ಇಲ್ಲಿರುವ ಉತ್ತಮ ಕೆಲಸ ಮತ್ತು ಅತ್ಯುತ್ತಮ ಜೀವನ ತೊರೆದು ತಂದೆ ತಾಯಿಯವರ ಸೇವೆ ಮಾಡಲು ಹೊರಟಿರುವ ಫಾರೂಕ್ ರವರು ಎಲ್ಲರಿಗೂ ಒಂದು ಮಾದರಿ ಎಂದರು.

ಕಾರ್ಯಕ್ರಮದ ಪ್ರಧಾನ ಬಿಂದು ಎಸ್ ಎಂ ಫಾರೂಕ್ ರವರು ಮಾತನಾಡಿ ಕುವೈಟ್ ನಿಂದ ದೂರ ವಾದರೂ ಯಾರ ಮನಸಿನಿಂದಲೂ ದೂರವಾಗುದಿಲ್ಲ ಎಲ್ಲೆ ಇದ್ದರೂ ಕೆ ಕೆ ಎಂ ಎ ಯ ಏಳಿಗೆ ಗಾಗಿ ಶ್ರಮಿಸುತ್ತೇನೆ, ಕೆ ಕೆ ಎಂ ಎ ಯಿಂದ ಬಹಳಷ್ಟು ಕಲಿತಿದ್ದೇನೆ ಎಂದ ಅವರು ಕೆ ಕೆ ಎಂ ಎ ಗೆ  ಉಜ್ವಲ ಭವಿಷ್ಯವನ್ನು ಹಾರೈಸಿದರು. ಇದೇ ರೀತಿ ಎಲ್ಲರ ಪ್ರೀತಿ ವಿಶ್ವಾಸ ಯಾವತ್ತೂ ಇರಲಿ ಎಂದರು. ಫಾರೂಕ್ ರವರ ಭಾವನೆಗಳು ಮನ ತುಂಬಿ ಮಾತು ಮೌನ ವಾಗಿತ್ತು ಹ್ರದಯ ಉಕ್ಕಿ ಹರಿಯುತಿತ್ತು.

ಕೆ ಕೆ ಎಂ ಎ ದಕ್ಷಿಣ ಕನ್ನಡ ಘಟಕ ದ ವತಿಯಿಂದ ಎಸ್ ಎಂ ಫಾರೂಕ್ ರವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಆಭರಣ ಎಂಬ ಬಿರುದು ಮತ್ತು ಸ್ಮರಣ ಫಲಕ, ನೆನಪಿನ ಕಾಣಿಕೆ ಇತ್ತು ಸನ್ಮಾನಿಸಲಾಯಿತು .

ಮೃದು ಸ್ವಭಾವದ, ಮಿತಭಾಷಿ, ದಯಾಳು, ಎಲ್ಲರೊಂದಿಗೆ ಬೆರೆಯುವ ಗೌರವಯುತ ಎಸ್ ಎಂ ಫಾರೂಕ್ ಅವರ ವ್ಯಕ್ತಿತ್ವವನ್ನು ಸಮಿತಿ ಸದಸ್ಯರು ಕೊಂಡಾಡಿದರು. ಮುಂದಿನ ಸ್ವದೇಶಿ ಜೀವನ ಸುಖ:-ಶಾಂತಿ ನೆಮ್ಮದಿಯಿಂದ ಸಾಗಲಿ  ಅಲ್ಲಾಹನು ಶ್ರೀಯುತರಿಗೆ ಆಯುರಾರೋಗ್ಯ ಭಾಗ್ಯ ಸದಾ ಕರುಣಿಸಲೆಂದು ಅಪೇಕ್ಷಿಸಿದರು.

ಜನಾಬ್ ಸಯ್ಯದ್ ರಫೀಕ್ ಮೂಲ್ಕಿ ನಿರೂಪಿಸಿದ ಈ ಬೀಳ್ಕೊಡಿಗ ಸಮಾರಂಭ ವನ್ನು ಜನಾಬ್ ಜಬ್ಬಾರ್ ಗುರುಪುರ ರವರ ಧನ್ಯವಾದ ಸಮರ್ಪಣೆ ಯೊಂದಿಗೆ ಮುಕ್ತಾಯಗೊಳಿಸಲಾಯಿತು.

no images were found

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)
ಅಶ್ವಿನಿ

About ಅಶ್ವಿನಿ