ದೇಶಪ್ರೇಮಕ್ಕಿಂತ ದೊಡ್ಡದೇ ಧರ್ಮಪ್ರೇಮ?…

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (2) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಆಗಸ್ಟ್ ೮,ಸಂಸತ್ ಅಧಿವೇಶನ…‘ಕೊನೆಯದಾಗಿ ನಾನು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದೇನೆ!ಇಲ್ಲಿ ಆಸೀನರಾಗಿರುವ ಸಂಸತ್ ಸದಸ್ಯರೇ ಜೋಕೆ…!!ಒಂದು ವೇಳೆ ಅಸ್ಸಾಂನಲ್ಲಿ ಸೂಕ್ತ ಪುನರ್ವಸತಿ (ಬಾಂಗ್ಲಾ ಮುಸ್ಲಿಮರಿಗೆ) ಕಲ್ಪಿಸದಿದ್ದರೆ ಮುಸಲ್ಮಾನ ಯುವಕರ ಮತ್ತೊಂದು ಸುತ್ತಿನ ಮೂಲಭೂತೀಕರಣಕ್ಕೆ ಸಿದ್ಧರಾಗಿ…’ಹಾಗಂತ ಸಂಸತ್ತಿನಲ್ಲಿ ಹೇಳಿದವನು ಯಾರೋ ಮುಲ್ಲಾನಲ್ಲ, ಮಜಲೀಸ್ ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಸಂಸದ ಅಸಾದುದ್ದೀನ್ ಓವೈಸಿ!!!

ಆಗಸ್ಟ್ 11,ಆಝಾದ್ ಮೈದಾನ,ಮುಂಬೈ… ಅಕ್ಬರುದ್ದೀನ್ ಓವೈಸಿ ಸಂಸತ್ತಿನಲ್ಲಿ ಇಂಥ ದೇಶದ್ರೋಹಿ ಹಾಗೂ ಪ್ರಚೋದನಕಾರಿ ಭಾಷಣ ಮಾಡಿದ ಮೂರೇ ದಿನದಲ್ಲಿ ಮುಂಬೈನ ಆಝಾದ್ ಮೈದಾನದಲ್ಲಿ ಪ್ರತಿಭಟನೆಗೆಂದು ನೆರೆದ ಮುಸಲ್ಮಾನ ಯುವಕರು ಮಾಡಿದ್ದೇನು? ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿದ ಯೋಧರ ಜ್ಞಾಪಕಾರ್ಥ ನಿರ್ಮಾಣ ಮಾಡಲಾಗಿರುವ‘ಅಮರ್ ಜವಾನ್’ ಸ್ಮಾರಕಕ್ಕೆ ದೊಣ್ಣೆಯಿಂದ ಬಡಿದರು, ಕಾಲಿನಿಂದ ಒದ್ದರು. ಅಷ್ಟು ಸಾಲದೆಂಬಂತೆ ಅದರ ಮೇಲೆ ಮೂತ್ರ ವಿಸರ್ಜನೆ ಮಾಡಿದರು.ಈ ಘಟನೆಯಲ್ಲಿ 58 ಪೊಲೀಸರು ಗಾಯಗೊಂಡಿದ್ದಾರೆ.ಈ ದೇಶದ ಆಂತರಿಕ ಭದ್ರತೆಯನ್ನು,ಸುವ್ಯವಸ್ಥೆಯನ್ನು ಕಾಪಾಡುವ ಪೊಲೀಸರ ಬಗ್ಗೆ ನಮಗೆಷ್ಟೇ ಕೋಪಗಳಿದ್ದರೂ ಖಾಕಿ ಬಗ್ಗೆ ಗೌರವ ಭಯ ಎರಡನ್ನೂ ಇಟ್ಟುಕೊಂಡಿದ್ದೇವೆ. ಆದರೆ ಆಝಾದ್ ಮೈದಾನದ ಪ್ರತಿಭಟನೆ ವೇಳೆ ಸಲೀಂ ಚೌಕಿಯಾ ಎಂಬ ಮುಸಲ್ಮಾನ ಯುವಕ ಪೊಲೀಸರ ರೈಫಲ್ಲನ್ನೇ ಕಸಿದುಕೊಂಡು ಬೆದರಿಸಿದ್ದಾನೆ.ಇದರ ಬೆನ್ನಲ್ಲೇ ಅಸಾದುದ್ದೀನ್ ಓವೈಸಿ ಸಂಸದರಾಗಿ ಆಯ್ಕೆಯಾಗಿರುವ ಹೈದರಾಬಾದ್‌ನಲ್ಲಿ ಪಾಕಿಸ್ತಾನದ ಬಾವುಟವನ್ನು ಹಾರಿಸಲಾಗಿದೆ!

ಇದೆಲ್ಲ ಯಾವ ಮನಸ್ಥಿತಿಯನ್ನು,ಯಾವ ಅಪಾಯಕಾರಿ ಬೆಳವಣಿಗೆಯನ್ನು ತೋರಿಸುತ್ತದೆ?

ಈ ಮುಂಬೈ ಗಲಭೆಗೂ ಮೊದಲು ಮಸೀದಿಗಳಿಂದ ಎಸ್ಸೆಮ್ಮೆಸ್ಸೊಂದು ಹೊರಬಿದ್ದಿತ್ತು.‘ಬರ್ಮಾ, ಅಸ್ಸಾಂ, ಗುಜರಾತ್ ಮತ್ತು ಕಾಶ್ಮೀರದ ನಂತರ ಇನ್ನೆಲ್ಲೋ? ಬರ್ಮಾದಲ್ಲಿ ಮುಸ್ಲಿಮರನ್ನು ಹತ್ಯೆ ಮಾಡಿದ್ದನ್ನು ವಿರೋಧಿಸುವ ಸಲುವಾಗಿ ಭಾನುವಾರ ಅಝಾದ್ ಮೈದಾನದಲ್ಲಿ ರ್ಯಾಲಿ ಇದೆ. ಅಮೆರಿಕದಲ್ಲಿ ಐವರು ಸಿಖ್ಖರನ್ನು ಕೊಂದಿದ್ದಕ್ಕೆ ಮಾಧ್ಯಮಗಳು ಹಾಗೂ ಸರ್ಕಾರ ಬೊಬ್ಬಿರಿದವು. ಆದರೆ,ಲಕ್ಷಾಂತರ ಮುಸಲ್ಮಾನರ ಜೀವಗಳಿಗೆ ಯಾವ ಬೆಲೆಯೂ ಇಲ್ಲವೆ?ಎಲ್ಲರೂ ಕಣ್ಣುಮುಚ್ಚಿಕೊಂಡಿದ್ದಾರೆ.ಈ ಎಸ್ಸೆಮ್ಮೆಸ್ಸನ್ನು ಬರುವ ಭಾನುವಾರಕ್ಕೆ ಮೊದಲು ಹಿಂದೂಸ್ಥಾನದ ಎಲ್ಲ ಮುಸಲ್ಮಾನರು, ಮಂತ್ರಿವರ್ಯರು ಹಾಗೂ ಮಾಧ್ಯಮಗಳಿಗೆ ತಲುಪಿಸಿ’.

ಈ ರೀತಿಯ ಸಂದೇಶ ಕಳುಹಿಸುವ ಮೂಲಕ ಯಾವ ಉದ್ದೇಶ ಸಾಧನೆಗಾಗಿ ಹೊರಟಿದ್ದರು? ಅಸ್ಸಾಂನಲ್ಲಿ ಸ್ಥಳೀಯರು ಹಾಗೂ ಬಾಂಗ್ಲಾದೇಶಿ ಅತಿಕ್ರಮಣಕಾರರಿಗೂ ತಿಕ್ಕಾಟ ಏರ್ಪಟ್ಟರೆ ಮುಂಬೈನ ಮುಸಲ್ಮಾನರೇಕೆ ಕೋಪಿಸಿಕೊಳ್ಳಬೇಕು?ಇಂಥದ್ದೊಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳುವ ಜರೂರತ್ತಾದರೂ ಏನಿತ್ತು?ಬರ್ಮಾದಲ್ಲಿ ರೋಹಿಂಗ್ಯ ಮುಸಲ್ಮಾನರ ಮೇಲೆ ದೌರ್ಜನ್ಯ ನಡೆಯುತ್ತಿರಬಹುದು, ಅದಕ್ಕೂ ಭಾರತೀಯ ಮುಸಲ್ಮಾನರಿಗೂ ಸಂಬಂಧವೇನು? ನಮ್ಮ ದೇಶದ ಮುಸ್ಲಿಮರು ಏಕಾಗಿ ಪ್ರತಿಭಟನೆಗೆ ಮುಂದಾದರು?

ಇಂತಹ ಮನಸ್ಥಿತಿ ಇಂದು ನಿನ್ನೆಯದಲ್ಲ!

ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ,ನಮ್ಮ ಕಣ್ಣೆದುರಿಗೆ ಬರುವುದು ಮುಸಲ್ಮಾನರ‘ಖಿಲಾಫತ್ ಚಳವಳಿ.ಇಡೀ ದೇಶ ಸ್ವಾತಂತ್ರ್ಯ ಪಡೆಯುವುದಕ್ಕಾಗಿ ಹೋರಾಡುತ್ತಿದ್ದರೆ,ಮುಸಲ್ಮಾನರು ಯಾವುದೋ ದೂರದ,ಸಂಬಂಧವೇ ಇಲ್ಲದ ಟರ್ಕಿಯ ಸುಲ್ತಾನ ಖಾಲೀಫನನ್ನು ರಕ್ಷಿಸುವಂತೆ ಬ್ರಿಟಿಷರ ಮೇಲೆ ಒತ್ತಡ ಹೇರಲು 1919ರಲ್ಲಿ ಭಾರತದಲ್ಲಿ ಖಿಲಾಫತ್ ಚಳವಳಿ ಆರಂಭಿಸಿದರು! ಅದೇ ಸಂದರ್ಭದಲ್ಲಿ(1920) ಬ್ರಿಟಿಷರ ವಿರುದ್ಧ ಅಸಹಕಾರ ಚಳವಳಿ ಆರಂಭಿಸಿದ ಗಾಂಧೀಜಿ ಮುಸಲ್ಮಾನರು ಕರೆಯದಿದ್ದರೂ ಖಿಲಾಫತ್ ಚಳವಳಿಗೆ ಬೆಂಬಲ ನೀಡಿದರು.ಅಂದು ಖಿಲಾಫತ್ ಚಳವಳಿಗೆ ತಾವು ಸ್ವ‌ಇಚ್ಛೆಯಿಂದ ಬೆಂಬಲ ಕೊಟ್ಟು ಮುಸಲ್ಮಾನರ ಮನಗೆದ್ದು ಅಸಹಕಾರ ಚಳವಳಿಗೆ ಅವರ ಬೆಂಬಲ ಪಡೆದುಕೊಂಡು ಬ್ರಿಟಿಷರ ಮುಂದೆ ಹಿಂದೂ-ಮುಸ್ಲಿಂ ಒಗ್ಗಟ್ಟಿನ ಫೋಸು ನೀಡುವ ಗಾಂಧೀಜಿ ಉದ್ದೇಶವೇನೋ ಸರಿಯಿತ್ತು. ಆದರೆ ಖಾಲೀಫನನ್ನು ರಕ್ಷಿಸಲು ಸಾವಿರಾರು ಮೈಲು ದೂರದಲ್ಲಿರುವ ಭಾರತೀಯ ಮುಸಲ್ಮಾನರು ಚಳವಳಿಗೆ ಮುಂದಾಗುತ್ತಾರೆಂದರೆ ಅವರನ್ನು ಒಗ್ಗೂಡಿಸುವ ಅಂಶ ದೇಶಪ್ರೇಮವಲ್ಲ,ಧರ್ಮಪ್ರೇಮ ಎಂಬುದನ್ನು ಅರಿತುಕೊಳ್ಳುವ ಸಾಮಾನ್ಯ ತಿಳಿವಳಿಕೆಯೂ ಗಾಂಧೀಜಿಗಿರಲಿಲ್ಲವೆ?!ಆನಂತರವಾದರೂ ಆಗಿದ್ದೇನು?ಖಿಲಾಫತ್ ಹಾಗೂ ಅಸಹಕಾರ ಚಳವಳಿಗಳು ಮುಗಿಯುವ ಮೊದಲೇ ಗಾಂಧೀಜಿಯವರ ಕಾಂಗ್ರೆಸ್ ಹಾಗೂ ಮುಸಲ್ಮಾನ ನಾಯಕರು ಕಿತ್ತಾಡಿ ಬೇರಾದರು. ಪ್ರತ್ಯೇಕ ಪಾಕಿಸ್ತಾನ ರಾಷ್ಟ್ರ ರಚನೆಯ ಕೂಗು ಜೋರಾಗಿದ್ದೇ ಅಲ್ಲಿಂದ. ಇಲ್ಲಿ ಮಲಬಾರ್ ದಂಗೆ ಅಥವಾ ಮೋಪ್ಲಾ ದಂಗೆಯನ್ನು ಮರೆಯಲು ಸಾಧ್ಯವೇ?

ನೀವು ಬಂದರೆ ನಿಮ್ಮ ಜತೆ, ಬರದಿದ್ದರೆ ನಿಮ್ಮನ್ನು ಬಿಟ್ಟು, ನೀವೇ ಅಡ್ಡವಾದರೆ,ಮೊದಲು ನಿಮ್ಮನ್ನು ಮೆಟ್ಟಿ, ಸ್ವಾತಂತ್ರ್ಯ ಪಡೆಯುತ್ತೇವೆ ಎಂದು ವಿನಾಯಕ ದಾಮೋದರ ಸಾವರ್ಕರ್ ಹೇಳಿದಂತೆ ಮುಸಲ್ಮಾನರಿಗೆ ಹೇಳುವ ತಾಕತ್ತು ಗಾಂಧೀಜಿಗೆ ಇಲ್ಲವಾದ ಪರಿಣಾಮವೇ ಮೋಪ್ಲಾ ದಂಗೆ.ಖಿಲಾಫತ್‌ಗೆ ಬೇಷರತ್ ಬೆಂಬಲ ಕೊಡುವ ಮೂಲಕ ಗಾಂಧೀಜಿ ಮುಸಲ್ಮಾನರನ್ನು ಓಲೈಸಲು ಹೋಗಿದ್ದೇನೋ ಸರಿ, ಆದರೆ ಬ್ರಿಟಿಷರು ಖಿಲಾಫತ್ ಚಳವಳಿಯಲ್ಲಿ ಭಾಗಿಯಾಗಿದ್ದವರ ಮೇಲೆ ಲಾಠಿ ಬೀಸಿದ ಕೂಡಲೇ ಮುಸಲ್ಮಾನರು ಆರಂಭಿಸಿದ್ದೇ ಮೋಪ್ಲಾ ದಂಗೆ.1921ರಲ್ಲಿ ಕೇರಳದಲ್ಲಿ ಹಿಂದೂಗಳ ಮೇಲೆ ಮುಗಿಬಿದ್ದರು.ಅಂದು 10ಸಾವಿರ ಹಿಂದೂಗಳ ಮಾರಣಹೋಮ ನಡೆಯಿತು.ಒಂದು ಲಕ್ಷ ಹಿಂದೂಗಳು ನಿರ್ವಸತಿಗರಾದರು.ಹಿಂದೂಗಳ ಕೊಲೆ, ಅತ್ಯಾಚಾರ,ಮತಾಂತರ ನಡೆದವು.ಇತಿಹಾಸದ ಪುಟದಲ್ಲಿ ಮೋಪ್ಲಾ ದೌರ್ಜನ್ಯವಾಗಿ ದಾಖಲಾಯಿತು. ಗಾಂಧೀಜಿಯನ್ನು‘ಶತಮಾನದ ವ್ಯಕ್ತಿ’ ಎನ್ನುತ್ತಾರೆ. ಶತಮಾನದ ಮೂರ್ಖತನ ಮಾಡಿದ್ದೂ ಗಾಂಧೀಜಿಯೇ. ಇತ್ತೀಚೆಗೆ ನಡೆಸಿದ, ಅಗಸ್ಟ್ 15ರಂದು ಘೋಷಣೆಯಾದ ‘ಗಾಂಧೀ ನಂತರದ ಗ್ರೇಟೆಸ್ಟ್ ಇಂಡಿಯನ್ ಯಾರು?’ಎಂಬ ಸಮೀಕ್ಷೆಯಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ದೇಶವಾಸಿಗಳು ಆಯ್ಕೆ ಮಾಡಿದ್ದಾರೆ.ಅಂತಹ ಮಹಾನ್ ವ್ಯಕ್ತಿ ಅಂಬೇಡ್ಕರ್, ಸ್ವಾತಂತ್ರ್ಯ ಬರುವುದಕ್ಕೂ ಸಾಕಷ್ಟು ಮೊದಲೇ ಬರೆದ ತಮ್ಮ‘ಥಾಟ್ಸ್ ಆನ್ ಪಾಕಿಸ್ತಾನ್’ ಪುಸ್ತಕದಲ್ಲಿ ಏನು ಹೇಳಿದ್ದರು?‘ಹಿಂದೂಗಳು ಮುಸಲ್ಮಾನರು ಒಟ್ಟೊಟ್ಟಿಗೆ ಬದುಕಲು ಸಾಧ್ಯವಿಲ್ಲ.ಅದು ಕಾಲಾಂತರದಲ್ಲಿ ಸಾಬೀತಾಗಿದೆ.ಒಂದು ವೇಳೆ ದೇಶ ವಿಭಜನೆ ಮಾಡಿಕೊಳ್ಳುವುದೇ ಆದರೆ, ಪಾಪುಲೇಷನ್ ಎಕ್ಸ್‌ಚೇಂಜ್ (ಪಾಕ್‌ನಲ್ಲಿರುವ ಎಲ್ಲ ಹಿಂದೂಗಳನ್ನು ಭಾರತಕ್ಕೆ ಕರೆಸಿಕೊಳ್ಳಬೇಕು,ಭಾರತದಲ್ಲಿರುವ ಎಲ್ಲ ಮುಸಲ್ಮಾನರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು)ಮಾಡಿಕೊಳ್ಳಬೇಕು.ಇಷ್ಟಕ್ಕೂ ಮುಸಲ್ಮಾನರ ಬ್ರದರ್‌ಹುಡ್ ಜಾಗತಿಕ ಭ್ರಾತೃತ್ವವಲ್ಲ, ಮುಸ್ಲಿಂ ಬ್ರದರ್‌ಹುಡ್ ಅಷ್ಟೇ’ ಎಂದು ಹೇಳಿದ್ದರು. ಅದು ಮಹಾತ್ಮ ಗಾಂಧಿ ಮತ್ತು ಕಾಂಗ್ರೆಸ್ ನಾಯಕರಿಗೆ ಅರ್ಥವಾಗಲೇ ಇಲ್ಲ. ಹಾಗಾಗಿ ಈಗ ಮತ್ತೊಂದು ವಿಭಜನೆಗೆ ಭಾರತ ಸಿದ್ಧವಾಗಬೇಕಾದ ಪರಿಸ್ಥಿತಿ ಎದುರಾಗುತ್ತಿದೆ.

ಅದಿರಲಿ, ಖಾಲೀಫನನ್ನು ಪದಚ್ಯುತಗೊಳಿಸಲು ಟರ್ಕಿಯಲ್ಲಿ ಕ್ರಾಂತಿಯಾದರೆ,ಇರಾಕ್‌ನಲ್ಲಿ ಸದ್ದಾಂ ಮೇಲೆ ಅಮೆರಿಕ ಎರಗಿದರೆ,ಅಫ್ಘಾನಿಸ್ತಾನದ ಮೇಲೆ ಬುಷ್ ದಾಳಿ ಮಾಡಿದರೆ,ಬರ್ಮಾದಲ್ಲಿ ರೋಹಿಂಗ್ಯ ಮುಸಲ್ಮಾನರನ್ನು ಹೊರದಬ್ಬಿದರೆ ಭಾರತದ ಮುಸಲ್ಮಾನರೇಕೆ ಪ್ರತಿಭಟನೆ ಮಾಡಬೇಕು?ಹಿಂದೂಗಳ ಮೇಲೇಕೆ ದೌರ್ಜನ್ಯವೆಸಗಬೇಕು?ಹೈದರಾಬಾದ್‌ನಲ್ಲೇಕೆ ಪಾಕಿಸ್ತಾನದ ಬಾವುಟ ಹಾರಿಸಬೇಕು? ಇತ್ತೀಚೆಗೆ ನಮ್ಮ ಸಕಲೇಶಪುರದಲ್ಲಿ ಟ್ಯಾಂಕರ್‌ಗೆ ಗುದ್ದಿ ಇಬ್ಬರು ಬೈಕ್ ಸವಾರ ಬ್ಯಾರಿಗಳು ಸತ್ತ ಕೂಡಲೇ ಮುಸಲ್ಮಾನರೆಲ್ಲ ಒಂದೆಡೆ ನೆರೆದು ಹಿಂದೂಗಳ ಅಂಗಡಿ ಮುಂಗಟ್ಟುಗಳನ್ನು ನಾಶಮಾಡಿದರು.ಹಾಸನದಲ್ಲಿ ರಾತ್ರಿ ವೇಳೆ ಹಿಂದೂಗಳ ೫೦ಕ್ಕೂ ಹೆಚ್ಚು ಕಾರುಗಳನ್ನು ವಿನಾಕಾರಣ ಒಡೆದು 15ಮುಸಲ್ಮಾನ ಯುವಕರು ಸಿಕ್ಕಿಹಾಕಿಕೊಂಡಿದ್ದಾರೆ!

ಇಂತಹ ಮನಸ್ಥಿತಿಗೆ ಏನೆನ್ನುವುದು?

ಪ್ರಸ್ತುತ ಪಾಕಿಸ್ತಾನದಿಂದ ಹಿಂದೂಗಳು ಸಾಲುಸಾಲಾಗಿ ಆಶ್ರಯ ಬಯಸಿ ಭಾರತಕ್ಕೆ ಬರುತ್ತಿದ್ದಾರೆ. ಪಾಕಿಸ್ತಾನದ ಹಿಂದೂ ಯುವತಿ ರಿಂಕಲ್ ಕುಮಾರಿಯನ್ನು ಅಪಹರಣ ಮಾಡಿ ಇಸ್ಲಾಂಗೆ ಬಲವಂತವಾಗಿ ಮತಾಂತರ ಮಾಡಿದ್ದಾರೆ,ಸಿಖ್ಖರ ಗುರದ್ವಾರಗಳನ್ನು ಪಾಕ್ ಸರ್ಕಾರವೇ ವಶಪಡಿಸಿಕೊಂಡಿದೆ.ಕಳೆದ ವರ್ಷ ಈದ್ ಸಂದರ್ಭದಲ್ಲಿ ನಾಲ್ವರು ಹಿಂದೂ ವೈದ್ಯರನ್ನು ಪಾಕಿಸ್ತಾನದಲ್ಲಿ ಕಗ್ಗೊಲೆಗೈದರು.ಅದನ್ನೆಲ್ಲ ಕಂಡು ಭಾರತೀಯರಾದ, ಹಿಂದೂಗಳಾದ ನಮ್ಮ ಎದೆಯಲ್ಲೂ ನೋವು ಮಡುಗಟ್ಟುತ್ತಿದೆ,ಆಕ್ರೋಶ ತಲೆಯೆತ್ತುತ್ತಿದೆ. ಹಾಗಂತ ನಾವು ಯಾವುದಾದರೂ ಮಸೀದಿ ಮೇಲೆ ಕಲ್ಲು ಬಿಸಾಡಿದ್ದೇವೆಯೇ?ಪಾಕಿಸ್ತಾನದಲ್ಲಿ ಹಿಂದೂಗಳ ರಕ್ತ ಹಿಂಡುತ್ತಿರುವವರು ಮುಸಲ್ಮಾನರು ಎಂಬುದು ಗೊತ್ತಿದ್ದರೂ ಭಾರತೀಯ ಮುಸಲ್ಮಾನರ ಮೇಲೆ ನಾವೆಂದಾದರೂ ಆಕ್ರಮಣ ಮಾಡಿದ್ದೇವೆಯೇ?1999,ಡಿಸೆಂಬರ್ 24ರಂದು ಮುಸಲ್ಮಾನ ಭಯೋತ್ಪಾದಕರು ನಮ್ಮ ಇಂಡಿಯನ್ ಏರ್‌ಲೈನ್ ವಿಮಾನವನ್ನು ತಾಲಿಬಾನ್ ನಿಯಂತ್ರಿತ ಕಂದಹಾರ್‌ಗೆ ಕೊಂಡೊಯ್ದು 180ಪ್ರಯಾಣಿಕರನ್ನು ಒತ್ತೆಯಾಗಿಟ್ಟುಕೊಂಡಾಗ ನಾವು ಭಾರತೀಯ ಮುಸ್ಲಿಮರ ಮೇಲೆ ಎರಗಿ ಬಿದ್ದಿದ್ದೇವೆಯೇ? 2000ರಲ್ಲಿ ಫಿಜಿಯ ಮೊದಲ ಭಾರತೀಯ ಮೂಲದ ಪ್ರಧಾನಿ ಮಹೇಂದ್ರಪಾಲ್ ಚೌಧರಿಯವರನ್ನು ಜಾರ್ಜ್ ಸ್ಪೀಟ್ ಎಂಬಾತ ಅಧಿಕಾರದಿಂದ ಕಿತ್ತೊಗೆದು ಅಲ್ಲಿನ ಸಮಸ್ತ ಹಿಂದೂಗಳಿಗೆ ಪ್ರಾಣ ಬೆದರಿಕೆ ಹಾಕಿದಾಗ ನಾವು ಭಾರತೀಯ ಕ್ರೈಸ್ತರು ಅಥವಾ ಮುಸಲ್ಮಾನರ ಪೂಜಾಸ್ಥಳಗಳನ್ನು ಹಾಳುಮಾಡಿದ್ದೇವೆಯೇ?1969ರಲ್ಲಿ ಅಲ್ ಅಕ್ಷಾ ಮಸೀದಿಯನ್ನು ನಾಶ ಮಾಡಲಾಗಿದೆ ಎಂಬ ವದಂತಿಗೆ ಕಿವಿಗೊಟ್ಟು ಗುಜರಾತ್‌ನ ಜಗನ್ನಾಥ ಮಂದಿರಲ್ಲಿ ಭಜಿಸುತ್ತಿದ್ದವರನ್ನು ಮುಸಲ್ಮಾನರು ಕೊಂದು ಗಲಭೆ ಆರಂಭಿಸಿದರಲ್ಲಾ,2001ರಲ್ಲಿ ತಾಲಿಬಾನಿಗಳು ಬಾಮಿಯಾನ್ ಬುದ್ಧ ಪ್ರತಿಮೆಗಳಿಗೆ ಡೈನಮೈಟ್ ಇಟ್ಟು ನಾಶ ಮಾಡಿದಾಗ ನಾವು ಭಾರತೀಯ ಮುಸ್ಲಿಮರ ಮೇಲೆ ಕತ್ತಿ ಝಳಪಿಸಬಹುದಿತ್ತಲ್ಲವೆ?

ಮತ್ತೇಕೆ ಬರ್ಮಾದಲ್ಲಿ ರೋಹಿಂಗ್ಯ ಮುಸಲ್ಮಾನರಿಗೆ ಕಿರುಕುಳ ಕೊಡಲಾಗುತ್ತಿದೆ ಎಂದು ಭಾರತದಲ್ಲಿ ಇವರು ಪ್ರತಿಭಟನೆ ಮಾಡುತ್ತಿದ್ದಾರೆ?

ಯಾವ ಕಾರಣಕ್ಕಾಗಿ ಯೋಧರ ಸ್ಮಾರಕಕ್ಕೆ ಅಪಚಾರವೆಸಗಿದ್ದಾರೆ?ನಾವು ಸುಭಾಶ್ಚಂದ್ರ ಭೋಸ್,ಭಗತ್ ಸಿಂಗ್‌ರನ್ನು ಪೂಜಿಸಿದಷ್ಟೇ ಗೌರವದಿಂದ ಆಶ್ಫಾಕ್ ಖಾನ್ ಮತ್ತು ಪಾಕಿಸ್ತಾನಿ ಟ್ಯಾಂಕರ್‌ಗಳನ್ನು ನಾಶ ಮಾಡಿದ ಹವಾಲ್ದಾರ್ ಹಮೀದ್‌ರನ್ನೂ ಆರಾಧಿಸುತ್ತೇವೆ.ಇಂಥ ಸ್ವಾತಂತ್ರ್ಯ ಕಲಿಗಳ,ಯೋಧರ ಸ್ಮಾರಕಕ್ಕೂ ಒದೆಯುತ್ತಾರೆಂದರೆ ಇವರ ನಿಷ್ಠೆ ಯಾರಿಗೆ? ಧರ್ಮಕ್ಕೋ,ದೇಶಕ್ಕೋ?ಧರ್ಮವೇ ಮುಖ್ಯವೆನ್ನುವವರು 1947ರಲ್ಲೇ ಪಾಕಿಸ್ತಾನಕ್ಕೆ ತೊಲಗಬಹುದಿತ್ತಲ್ಲವೆ?ಈ ರೀತಿಯ ದೇಶದ್ರೋಹಿ ಮನಸ್ಥಿತಿಗಳನ್ನು ಎಷ್ಟು ಕಾಲ ಸಹಿಸಿಕೊಳ್ಳುತ್ತೀರಿ?

ಒಲಿಂಪಿಕ್ಸ್‌ನಲ್ಲಿ 6ಪದಕ ಗೆದ್ದವರು ಗುರುವಾರ ದಿಲ್ಲಿಯ‘ಅಮರ್ ಜವಾನ್ ಜ್ಯೋತಿ’ಗೆ ನಮಿಸಿ ಬಂದರು.ಈ ದೇಶ ಕಾಯುವ ಸೈನಿಕರ ಬಗ್ಗೆ ಅಂತಹ ಗೌರವವನ್ನು ಪ್ರತಿಯೊಬ್ಬನೂ ಇಟ್ಟುಕೊಂಡಿದ್ದಾನೆ.ಇಟ್ಟುಕೊಳ್ಳದವರು,ಸೈನಿಕರ ಸ್ಮಾರಕಕ್ಕೇ ಅಪಚಾರವೆಸಗಿದವರು ದೇಶದ್ರೋಹಿಗಳಲ್ಲದೆ ಮತ್ತಿನ್ನೇನು?ಒಂದು ವೇಳೆ,ಆರೆಸ್ಸೆಸ್ಸಿಗನೊಬ್ಬ ಅಥವಾ ಬಿಜೆಪಿಯ ಬೆಂಬಲಿಗನೊಬ್ಬ ಅಮರ್ ಜವಾನ್ ಸ್ಮಾರಕ ಬಿಡಿ,ಮುಸಲ್ಮಾನರ ಪೂಜಾಸ್ಥಳಕ್ಕೆ ಅಪಚಾರವೆಸಗಿದ್ದರೆ ಸುಮ್ಮನೆ ಇರುತ್ತಿದ್ದರೆ?ಅಝಾದ್ ಮೈದಾನದಲ್ಲಿ ಗಲಭೆ ಎಬ್ಬಿಸಿ, ಅಮರ್‌ಜವಾನ್ ಸ್ಮಾರಕಕ್ಕೆ ಅಪಚಾರವೆಸಗಿದವರನ್ನೂ ದೇಶದ್ರೋಹ ಅಪರಾಧದ ಮೇಲೆ ಬಂಧಿಸಿ ದಂಡಿಸಬೇಕು ಎಂದು ಹೇಳುವ ತಾಕತ್ತು ಯಾವ ರಾಜಕಾರಣಿ,ಯಾವ ಮಾಧ್ಯಮಕ್ಕಿದೆ?ಮತ್ತೊಂದು ವಿಷಯ ಕೇಳಿ,ಸಿಸಿಟಿವಿ ಫುಟೇಜ್‌ಗಳ ಮೂಲಕ ಅಝಾದ್ ಮೈದಾನದಲ್ಲಿ ನಡೆದ ಗಲಭೆಗೆ ಕಾರಣರಾದ 35ರಿಂದ 40ಮಂದಿಯನ್ನು ಪೊಲೀಸರು ಗುರುತಿಸಿದ್ದಾರೆ.ಆದರೆ ಈದ್ ಮುಗಿದ ಮೇಲಷ್ಟೇ ಅವರನ್ನು ಬಂಧಿಸಲಾಗುವುದು ಎಂದು ಹೇಳಿಕೆ ಹೊರಡಿಸಿದ್ದಾರೆ.2004ರಲ್ಲಿ ಕಂಚಿಯ ಯತಿಗಳಾದ ಜಯೇಂದ್ರ ಸರಸ್ವತಿಯವರನ್ನು ದೀಪಾವಳಿಯ ದಿನ ಅರೆಸ್ಟ್ ಮಾಡಿದ ಪೊಲೀಸರಿಗೆ ಗಲಭೆಕೋರ ಮುಸಲ್ಮಾನರನ್ನು ಬಂಧಿಸಲು ಈದ್ ಮುಗಿಯಬೇಕಂತೆ!

ಖ್ಯಾತ ಅಂಕಣಕಾರ ಸಂದೀಪ್ ಬಾಲಕೃಷ್ಣ ತಮ್ಮ ಇತ್ತೀಚಿನ ಲೇಖನವೊಂದರಲ್ಲಿ ಗಮನಾರ್ಹ ಅಂಶವೊಂದನ್ನು ಉಲ್ಲೇಖಿಸಿದ್ದಾರೆ.ಬಾಂಗ್ಲಾದೇಶಿ ಅಕ್ರಮ ವಲಸಿಗರ ವಿಚಾರದಲ್ಲಿ ಮುಸ್ಲಿಂ ರಾಷ್ಟ್ರಗಳೇ ಹೇಗೆ ನಡೆದುಕೊಂಡಿವೆ ಅಂದುಕೊಂಡಿರಿ?1995-1997ರ ಸುಮಾರಿಗೆ ತನ್ನ ದೇಶದಲ್ಲಿ 1ಲಕ್ಷಕ್ಕೂ ಅಧಿಕ ಅಕ್ರಮ ಬಾಂಗ್ಲಾ ವಲಸಿಗರಿದ್ದಾರೆಂದು ಮುಸ್ಲಿಂ ಬಾಹುಳ್ಯದ ಮಲೇಷ್ಯಾಗೆ ತಿಳಿದು ಬಂತು.ವರ್ಷಕ್ಕೆ 50ಸಾವಿರ ಕುಶಲಮತಿಗಳಿಗೆ ತಾನು ಉದ್ಯೋಗ, ಅಶ್ರಯ ನೀಡುವುದಾಗಿ ಬಾಂಗ್ಲಾ ಜತೆ ಒಪ್ಪಂದ ಮಾಡಿಕೊಂಡಿದ್ದ ಮಲೇಷ್ಯಾ ಅಕ್ರಮ ವಲಸಿಗರು ತುಂಬಿಕೊಳ್ಳುತ್ತಿದ್ದಾರೆ ಎಂದು ಗೊತ್ತಾದ ಕೂಡಲೇ ಆ ಟ್ರೀಟಿಯನ್ನೇ ಏಕಾ‌ಏಕಿ ರದ್ದು ಮಾಡಿತು. ಅಷ್ಟೇ ಅಲ್ಲ, ಅವರನ್ನು ವಾಪಸ್ ಕಳುಹಿಸಿತು.ಕಟ್ಟಾ ಇಸ್ಲಾಮಿಕ್ ರಾಷ್ಟ್ರಗಳು ಹಾಗೂ ಇಸ್ಲಾಮಿಕ್ ರಾಜಾಡಳಿತ ಹೊಂದಿರುವ ಸೌದಿ ಅರೇಬಿಯಾ,ಕತಾರ್‌ಗಳೂ ಹಿಂದೆ ಮುಂದೆ ನೋಡದೇ,ಅವರೂ ಮುಸ್ಲಿಮರು ಎಂದು ಯೋಚಿಸದೇ ಬಾಂಗ್ಲಾದೇಶಿಯರನ್ನು ಹೊರದಬ್ಬಿದವು. ಇನ್ನು ಮುಂಬೈ ಮುಸಲ್ಮಾನರು ವಕಾಲತ್ತು ವಹಿಸಲು ಬಂದಿರುವ ಬರ್ಮಾದ ರೋಹಿಂಗ್ಯ ಮುಸ್ಲಿಮರ ವಿಷಯಕ್ಕೆ ಬನ್ನಿ.ಈ ರೋಹಿಂಗ್ಯ ಮುಸ್ಲಿಮರು ಬರ್ಮಾದಲ್ಲಿರುವ ಮಿಲಿಟರಿ ಆಡಳಿತದ ಕಟ್ಟುನಿಟ್ಟಿನ ವ್ಯವಸ್ಥೆಗೆ ಹೊಂದಿಕೊಳ್ಳಲಾಗದೆ ನೆರೆಯ ಬಾಂಗ್ಲಾದೇಶಕ್ಕೆ ಓಡಿಬಂದರು. ಅವರನ್ನು ಬಾಂಗ್ಲಾದೇಶ ವಾಪಸ್ ದಬ್ಬಿತು. ಒಂದುವೇಳೆ ಇವರ ಇಸ್ಲಾಮಿಕ್ ಬ್ರದರ್‌ಹುಡ್ ಅಷ್ಟೊಂದು ಗಟ್ಟಿಯೆನ್ನುವುದಾದರೆ ಮುಸ್ಲಿಂ ರಾಷ್ಟ್ರವಾದ ಬಾಂಗ್ಲಾ ರೋಹಿಂಗ್ಯ ಮುಸ್ಲಿಮರನ್ನು ಏಕೆ ತನ್ನೊಳಕ್ಕೆ ಬಿಟ್ಟುಕೊಳ್ಳಲಿಲ್ಲ?ಮುಸ್ಲಿಂ ರಾಷ್ಟ್ರಗಳೇ ಮುಸಲ್ಮಾನರಿಗೆ ಆಶ್ರಯ ನೀಡದಿರುವಾಗ ಅಸ್ಸಾಂನಲ್ಲಿ ನಮ್ಮ ಜನರ ಅನ್ನ-ನೀರು ಕಸಿದುಕೊಂಡವರನ್ನು ಹೊರಹಾಕಬೇಕೆಂದರೆ ಏಕೆ ಕೋಪಿಸಿಕೊಳ್ಳಬೇಕು ಹೇಳಿ?

ಪ್ರಸ್ತುತ ಇಡೀ ದೇಶವಾಸಿಗಳ ಮನಗೆದ್ದಿರುವ‘ಸತ್ಯಮೇವ ಜಯತೆ’ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಸಿ‌ಎನ್‌ಎನ್-ಐಬಿ‌ಎನ್ ಚಾನೆಲ್ ಅಮೀರ್ ಖಾನ್ ಅವರನ್ನು ಸಂದರ್ಶಿಸಿತು.‘ಹೆಣ್ಣು ಭ್ರೂಣ ಹತ್ಯೆ ಮತ್ತು ಇತರ ವಿಷಯಗಳಂತೆ ಧಾರ್ಮಿಕ ಅಸಹನೆ ಕೂಡ ನಮ್ಮ ಸಮಾಜ ಎದುರಿಸುತ್ತಿರುವ ಸಮಸ್ಯೆಗಳಲ್ಲೊಂದು. ನೀವೊಬ್ಬ ಮುಸ್ಲಿಮನಾಗಿ, ಮುಸ್ಲಿಂ ಸಮಾಜದ ಒಂದು ಭಾಗವಾಗಿ ಈ ಸಮಸ್ಯೆ ನಿಮ್ಮನ್ನೂ ಬಾಧಿಸುತ್ತಿದೆಯೇ?ಈ ಧಾರ್ಮಿಕತೆ ಎಂಬುದೇ ನಿಮ್ಮ ವ್ಯಕ್ತಿತ್ವವನ್ನೂ ರೂಪಿಸಿದೆಯೇ?‘ಎಂದು ಕೇಳಿದಾಗ‘ಖಂಡಿತಾ ಇಲ್ಲ,ಏಕೆಂದರೆ ಮುಸ್ಲಿಮ ಎನ್ನುವುದಕ್ಕಿಂತ ಮೊದಲು ನಾನೊಬ್ಬ ಭಾರತೀಯ ಎಂದೇ ನಾನಂದುಕೊಂಡಿದ್ದೇನೆ.have always felt that I am an Indian first ಎಂದಿದ್ದರು ಆಮೀರ್.

ಅಂತಹ ಭಾವನೆ ಪ್ರತಿಯೊಬ್ಬ ಮುಸ್ಲಿಮರಲ್ಲೂ ಬರಬೇಕು ಹಾಗೂ ಈ ಹಿಂದೂಗಳು ತಮ್ಮ ಎಂದಿನ Inertiaಅಥವಾ ಜಡತ್ವ ಬಿಟ್ಟು ಅಲ್ಪಸಂಖ್ಯಾತರ ಧಾರ್ಮಿಕ ಅಸಹಿಷ್ಣುತೆ ಬಗ್ಗೆ ಎಚ್ಚೆತ್ತುಕೊಂಡು ಸಂಘಟಿತರಾಗಬೇಕು.

ಇಷ್ಟಕ್ಕೂ‘ಧರ್ಮೋ ರಕ್ಷತಿ ರಕ್ಷಿತಃ’ ಎಂದು ಬಾಯಲ್ಲಿ ಉಗುಳಿದರಷ್ಟೇ ಸಾಲದು, ಜೋಕೆ!

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (2) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ ತಾಂತ್ರಿಕ ನಿರ್ವಾಹಕರು